ಬೆಂಗಳೂರು ಕಟ್ಟಡ ಮಾಲೀಕರಿಗೆ ಗುಡ್ ನ್ಯೂಸ್: ನಿಯಮ ಉಲ್ಲಂಘನೆ ಮಿತಿ ಶೇ. 15ಕ್ಕೆ ಏರಿಕೆ; ದಂಡ ಪಾವತಿಸಿ ಕಾನೂನುಬದ್ಧಗೊಳಿಸಲು ಅವಕಾಶ..!
ಹಾಲಿ ನಿಯಮ ಪ್ರಕಾರ ಕಟ್ಟಡ ಉಲ್ಲಂಘನೆ ಮಿತಿಯು ಶೇ. 5 ಮಾತ್ರ ಇದೆ. ಆದರೆ, ಬಹಳಷ್ಟು ಕಟ್ಟಡ ಮಾಲೀಕರು ಹೆಚ್ಚುವರಿ ಮಹಡಿಗಳು ನಿರ್ಮಿಸುವುದು ಅಥವಾ ನಕ್ಷೆಯೊಂದಿಗೆ ಸಣ್ಣ ಮಟ್ಟದ ಬದಲಾವಣೆಗಳನ್ನು ಮಾಡುವುದರಿಂದ ನೀರು, ವಿದ್ಯುತ್ ಸಂಪರ್ಕ ಪಡೆಯಲು ತೊಂದರೆ ಎದುರಿಸುತ್ತಿದ್ದಾರೆ.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಕಟ್ಟಡ ಬೈಲಾ ನಿಯಮಗಳಲ್ಲಿ ಮಹತ್ವದ ಬದಲಾವಣೆಯ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಬುಧವಾರ ಪ್ರಕಟಿಸಿದೆ.
ಈ ಮೂಲಕ ಅನುಮೋದಿತ ನಕ್ಷೆಗೆ ವಿರುದ್ಧವಾಗಿ ನಡೆದಿರುವ ಕಟ್ಟಡ ಉಲ್ಲಂಘನೆಗಳನ್ನು ಶೇ. 15ವರೆಗೆ ದಂಡ ಪಾವತಿಸಿ ನಿಯಮಿತಗೊಳಿಸಲು ಅವಕಾಶ ನೀಡಲಾಗಿದೆ.
ಹಾಲಿ ನಿಯಮ ಪ್ರಕಾರ ಕಟ್ಟಡ ಉಲ್ಲಂಘನೆ ಮಿತಿಯು ಶೇ. 5 ಮಾತ್ರ ಇದೆ. ಆದರೆ, ಬಹಳಷ್ಟು ಕಟ್ಟಡ ಮಾಲೀಕರು ಹೆಚ್ಚುವರಿ ಮಹಡಿಗಳು ನಿರ್ಮಿಸುವುದು ಅಥವಾ ನಕ್ಷೆಯೊಂದಿಗೆ ಸಣ್ಣ ಮಟ್ಟದ ಬದಲಾವಣೆಗಳನ್ನು ಮಾಡುವುದರಿಂದ ನೀರು, ವಿದ್ಯುತ್ ಸಂಪರ್ಕ ಪಡೆಯಲು ತೊಂದರೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಲ್ಡಿಂಗ್ ಬೈಲಾ ಉಲ್ಲಂಘನೆ ನಿಯಮದಲ್ಲಿ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ.
“ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಟ್ಟಡ ಮಾಲೀಕರಿಗಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಅನೇಕ ಕಟ್ಟಡ ಮಾಲೀಕರ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು, ಉಲ್ಲಂಘನೆ ಮಿತಿಯನ್ನು ಶೇ. 5ರಿಂದ ಶೇ. 15ಕ್ಕೆ ಹೆಚ್ಚಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಹೇಳಿದ್ದಾರೆ,
ಪ್ರಸ್ತುತ ಕರಡು ಅಧಿಸೂಚನೆಯ ಪ್ರಕಾರ, ನಾಗರಿಕರು ಅವರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಸಂಬಂಧಿತ ಮಹಾನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಬಹುದು. ಈ ಪ್ರಕ್ರಿಯೆ ಪ್ರಕಟಣೆ ದಿನಾಂಕದಿಂದ 30 ದಿನಗಳೊಳಗೆ ಅಥವಾ ಏಪ್ರಿಲ್ 30ರವರೆಗೆ ಮಾಡಬಹುದಾಗಿದೆ.
ಪ್ರಸ್ತುತ ನಿಯಮ ಉಲ್ಲಂಘನೆ ಮಾಡಿದ ಕಟ್ಟಡಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು, ಮತ್ತು ಒಕ್ಕುಪೆನ್ಸಿ ಪ್ರಮಾಣಪತ್ರ ಪಡೆಯಲು ಅನುಕೂಲ ಮಾಡಲು ಈ ತಿದ್ದುಪಡಿ ಜಾರಿಯಾಗಿದೆ.
ಕರಡು ಅಧಿಸೂಚನೆಯನ್ನು ಐದು ಮಹಾನಗರ ಪಾಲಿಕೆಗಳ ವೆಬ್‌ಸೈಟ್‌ಗಳಲ್ಲಿ ಏಪ್ರಿಲ್ 1ರಂದು ಪ್ರಕಟಿಸಲಾಗಿದೆ. ನಾಗರಿಕರು https://updates.bbmpgov.in/public ನಲ್ಲಿ ಈ ಕರಡು ಅಧಿಸೂಚನೆಯನ್ನು ಪರಿಶೀಲಿಸಬಹುದು ಮತ್ತು ತಮ್ಮ ಸಲಹೆಗಳನ್ನು ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲಿ ಸಲಹೆ ಸಲ್ಲಿಸಬೇಕು?
ಬೆಂಗಳೂರನ್ನು ಐದು ನಗರ ಪಾಲಿಕೆಗಳನ್ನಾಗಿ ವಿಂಗಡಿಸಲಾಗಿದ್ದು, ಆಯಾ ವ್ಯಾಪ್ತಿಯ ಆಯುಕ್ತರ ಕಚೇರಿಗಳಲ್ಲಿ ಸಲಹೆಗಳನ್ನು ನೀಡಬಹುದು..
ಬೆಂಗಳೂರು ಉತ್ತರ ನಗರ ಪಾಲಿಕೆ: ಬ್ಯಾಟರಾಯನಪುರ ಕಚೇರಿ.
ಬೆಂಗಳೂರು ಕೇಂದ್ರ ನಗರ ಪಾಲಿಕೆ: ಎಂ.ಜಿ ರಸ್ತೆಯ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್.
ಬೆಂಗಳೂರು ಪೂರ್ವ ನಗರ ಪಾಲಿಕೆ: ಫಿಯೋನಿಕ್ಸ್ ಮಾಲ್ ಎದುರು, ಕೆ.ಆರ್ ಪುರ ವ್ಯಾಪ್ತಿ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ: ಜಯನಗರ 2ನೇ ಬ್ಲಾಕ್.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಮಲ್ಲೇಶ್ವರಂ ಐ.ಪಿ.ಪಿ ಕೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



