ರಾಜ್ಯ

Road rage: ಗಾಡಿಗೆ ಟಚ್ ಆಯ್ತು ಅಂತ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಯುವತಿ! Video

ಯುವತಿ ತನ್ನ ಗಾಡಿಯಲ್ಲಿ ಹೋಗುತ್ತಿದ್ದಾಗ ನಡು ರಸ್ತೆಯಲ್ಲಿ ಆಟೋ ಯುವತಿಯ ಗಾಡಿ ಹತ್ತಿರಕ್ಕೆ ಬಂದಿದ್ದು, ಈ ವೇಳೆ ಯುವತಿ ಆಟೋ ತನ್ನ ಗಾಡಿಗೆ ಟಚ್ ಆಯಿತು ಎಂದು ಜಗಳ ತೆಗೆದಿದ್ದಾಳೆ.

Road rage: ಗಾಡಿಗೆ ಟಚ್ ಆಯ್ತು ಅಂತ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಯುವತಿ! Video
ಆಟೋ ಚಾಲಕನ ಮೇಲೆ ಯುವತಿ ಹಲ್ಲೆ
Published On :

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದ್ದು, ಗಾಡಿಗೆ ಟಚ್ ಆಯ್ತು ಎಂದು ಯುವತಿಯೊಬ್ಬಳು ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಇಬ್ಬರು ಯುವತಿಯರು ಮತ್ತು ಓರ್ವ ಯುವಕ ಕಾರಿನ ಸನ್ ರೂಫ್ ಟಾಪ್ ತೆಗೆದು ಯುವತಿಯರೊಂದಿಗೆ ರೋಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಇದಕ್ಕೂ ಮೊದಲು ಹಿಂದಿ ಭಾಷಿಕ ವ್ಯಕ್ತಿಯೋರ್ವ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಕನ್ನಡ ಪರ ಹೋರಾಟಗಾರರ ಪ್ರತಿಭಟನೆ ಬಳಿಕ ಆತ ಕ್ಷಣೆ ಕೋರಿದ್ದ. ಇದೀಗ ಮತ್ತೆ ಅಂತಹುದೇ ವಿಡಿಯೋ ವೈರಲ್ ಆಗುತ್ತಿದೆ.

@CheKrishnaCk_ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ವಿಡಿಯೋದಲ್ಲಿ ಯುವತಿ ಆಟೋ ಚಾಲಕನಿಗೆ ನಿಂದಿಸುತ್ತಿದ್ದಾರೆ. ಈ ವೇಳೆ ಚಾಲಕ ಯುವತಿಯ ವಿಡಿಯೋ ಮಾಡುತ್ತಿದ್ದು ವಿಡಿಯೋ ಮಾಡದಂತೆ ಯುವತಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ವಿಡಿಯೋದಲ್ಲಿರುವಂತೆ ಯುವತಿ ತನ್ನ ಗಾಡಿಯಲ್ಲಿ ಹೋಗುತ್ತಿದ್ದಾಗ ನಡು ರಸ್ತೆಯಲ್ಲಿ ಆಟೋ ಯುವತಿಯ ಗಾಡಿ ಹತ್ತಿರಕ್ಕೆ ಬಂದಿದ್ದು, ಈ ವೇಳೆ ಯುವತಿ ಆಟೋ ತನ್ನ ಗಾಡಿಗೆ ಟಚ್ ಆಯಿತು ಎಂದು ಜಗಳ ತೆಗೆದಿದ್ದಾಳೆ. ಈ ವೇಳೆ ಆಟೋ ಚಾಲಕ ತಾನು ಟಚ್ ಮಾಡಿಲ್ಲ ವಾದಿಸಿದರೂ ಕೇಳದ ಯುವತಿ ನೋಡ ನೋಡುತ್ತಲೇ ತನ್ನ ಚಪ್ಪಲಿ ತೆಗೆದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.