ರಾಜ್ಯ

ಬೆಂಗಳೂರು: ಮಳೆ ನೀರು ಕಾರಿಗೆ ಹಾರಿದ್ದಕ್ಕೆ ಕೆಂಡಾಮಂಡಲ; ವ್ಯಕ್ತಿಯ ಕೈ ಬೆರಳು ಕಚ್ಚಿ ತುಂಡರಿಸಿದ ಚಾಲಕ!

ದಂಪತಿ ಮೆಜೆಸ್ಟಿಕ್ ನಿಂದ ಲುಲು ಮಾಲ್ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ವೇಳೆ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ಪಕ್ಕದ ಕಾರಿಗೆ ಸಿಡಿದಿದೆ.

ಬೆಂಗಳೂರು: ಮಳೆ ನೀರು ಕಾರಿಗೆ ಹಾರಿದ್ದಕ್ಕೆ ಕೆಂಡಾಮಂಡಲ; ವ್ಯಕ್ತಿಯ ಕೈ ಬೆರಳು ಕಚ್ಚಿ ತುಂಡರಿಸಿದ ಚಾಲಕ!
ಕೈ ಬೆರಳು ಕಚ್ಚಿರುವ ಕಾರು ಚಾಲಕ.
Published On :

ಬೆಂಗಳೂರು: ಮಳೆ ನೀರು ಕಾರಿಗೆ ಹಾರಿದ್ದಕ್ಕೆ ಚಾಲಕನ ಬೆರಳು ಕಚ್ಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಲುಲು ಮಾಲ್ ಅಂಡರ್ ಪಾಸ್ ಬಳಿ ನಡೆದಿದೆ.

ಬೆಂಗಳೂರಿನ ಓಕುಳಿಪುರಂ ಅಂಡರ್ ಪಾಸ್ ನಲ್ಲಿ ಮೇ 25ರಂದು ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಮಾಗಡಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ನಿವಾಸಿ ಜಯಂತ್ ಶೇಖರ್ (45) ಅವರು ಪತ್ನಿ ಮತ್ತು ಅತ್ತೆಯೊಂದಿಗೆ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ದಂಪತಿ ಮೆಜೆಸ್ಟಿಕ್ ನಿಂದ ಲುಲು ಮಾಲ್ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ವೇಳೆ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ಪಕ್ಕದ ಕಾರಿಗೆ ಸಿಡಿದಿದೆ.

ಇಷ್ಟಕ್ಕೆ ಕೋಪಗೊಂಡ ಪಕ್ಕದ ಕಾರಿನ ಮಾಲೀಕ ಜಯಂತ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ. ಈ ವೇಳೆ ಜಯಂತ್ ಗೊತ್ತಾಗಿಲ್ಲ ಎಂದು ಕ್ಷಮೆ ಕೇಳಿದರೂ, ಸಮಾಧಾನಗೊಳ್ಳದ ಚಾಲಕ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಕಾರು ಅಡ್ದಗಟ್ಟಿ ನಿಲ್ಲಿಸಿದ್ದಾರೆ.

ತನ್ನ ಕಾರಿನಿಂದ ಕೆಳಗಿಳಿದು ಜಯಂತ್ ಅವರನ್ನು ಅವರ ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮುಖಕ್ಕೆ ಗುದ್ದಿ, ಅವರ ಕೈಬೆರಳನ್ನು ಕಚ್ಚಿ ವಿಕೃತಿ ಮೆರೆದಿದ್ದಾನೆ. ಇದರಿಂದ ಜಯಂತ್ ಅವರ ಬಲಗೈ ಬೆರಳಿಗೆ ಗಂಭೀರವಾದ ಗಾಯಗಳಾಗಿದ್ದು, ವೈದ್ಯರು 5 ಸ್ಟಿಚ್ ಹಾಕಿದ್ದಾರೆ. ಘಟನೆ ಸಂಬಂಧ ಜಯಂತ್ ಅವರ ಪತ್ನಿ ಪಾರ್ವತಿ ಪೊಲೀಸರಿಗೆ ದೂರು ನೀಡಿದ್ದು, ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.