ಬೆಂಗಳೂರು: ಹೋಮ್ ಸೈನ್ಸ್ ಕಾಲೇಜಿನ ನಲ್ಲಿ-ಸಿಲಿಂಡರ್ ಕದ್ದೊಯ್ದ ಖದೀಮರು; ಆರು ತಿಂಗಳಲ್ಲಿ 2ನೇ ಘಟನೆ!
ಕ್ಯಾಂಪಸ್‌ಗೆ ಸುಮಾರು 15 ಸಿಸಿಟಿವಿ ಕ್ಯಾಮೆರಾಗಳ ಅಗತ್ಯವಿದೆ, ಆದರೆ ಈ ಪ್ರಸ್ತಾವನೆ ಇನ್ನೂ ಜಾರಿಗೆ ಬಂದಿಲ್ಲ.

ಬೆಂಗಳೂರು: ರಾತ್ರಿ ವೇಳೆ ಭದ್ರತಾ ಸಿಬ್ಬಂದಿಯ ನಿದ್ದೆಯ ಲಾಭ ಪಡೆದ ಅಪರಿಚಿತ ದುಷ್ಕರ್ಮಿಗಳು ಫ್ರೀಡಂ ಪಾರ್ಕ್ ಪಕ್ಕದ ಪ್ಯಾಲೇಸ್ ರಸ್ತೆಯಲ್ಲಿರುವ ಹೋಮ್ ಸೈನ್ಸ್ ಕಾಲೇಜಿನ ಆವರಣಕ್ಕೆ ನುಗ್ಗಿ, ನಲ್ಲಿಗಳು ಮತ್ತು ಎರಡು ಸಿಲಿಂಡರ್‌ಗಳಂತಹ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಕ್ಯಾಂಪಸ್‌ನಲ್ಲಿ ವರದಿಯಾದ ಎರಡನೇ ಕಳ್ಳತನ ಇದಾಗಿದೆ. ಕ್ಯಾಂಪಸ್‌ಗೆ ಸುಮಾರು 15 ಸಿಸಿಟಿವಿ ಕ್ಯಾಮೆರಾಗಳ ಅಗತ್ಯವಿದೆ ಮತ್ತು ಪ್ರಸ್ತಾವನೆ ಇನ್ನೂ ಜಾರಿಗೆ ಬಂದಿಲ್ಲ.
TNIE ಜೊತೆ ಮಾತನಾಡಿದ ಹೋಮ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಜೀಹಾ ಸುಲ್ತಾನ ಮುಂಭಾಗದ ಗೇಟ್‌ನಿಂದ ಅಥವಾ ಫ್ರೀಡಂ ಪಾರ್ಕ್‌ನ ಪಕ್ಕದಲ್ಲಿರುವ ಕಾಂಪೌಂಡ್ ಗೋಡೆಯಿಂದ ಅಥವಾ ಯಾರಾದರೂ ಕ್ಯಾಂಪಸ್ ಒಳಗೆ ಸುಲಭವಾಗಿ ಪ್ರವೇಶಿಸಬಹುದು ಎಂದು ಹೇಳಿದ್ದಾರೆ. ಈ ಘಟನೆ ಏಪ್ರಿಲ್ 27 ರಂದು ರಾತ್ರಿ ನಡೆದಿದೆ.
ಹಗಲು ಭದ್ರತಾ ಸಿಬ್ಬಂದಿ ತಿಪ್ಪೇಸ್ವಾಮಿ ಕೆಲಸಕ್ಕೆ ಬಂದು ರಾತ್ರಿ ಬೀಟ್ ಗಾರ್ಡ್ ಎಬ್ಬಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ಕೇವಲ ನಲ್ಲಿಗಳು ಮತ್ತು ಎರಡು ಸಿಲಿಂಡರ್‌ಗಳನ್ನು ಕದ್ದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಬೆಲೆಬಾಳುವ ಪ್ರಿಂಟರ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು ಇದ್ದವು, ಆದರೆ ಅವುಗಳನ್ನು ಕಳ್ಳರು ಮುಟ್ಟಿಲ್ಲ.
ಕಳೆದ ಡಿಸೆಂಬರ್‌ನಲ್ಲಿ ಇದೇ ರೀತಿಯ ಕಳ್ಳತನ ನಡೆದಿದ್ದು, ಆ ಸಮಯದಲ್ಲಿ ಆರೋಪಿಗಳು ರಸಾಯನಶಾಸ್ತ್ರ ಪ್ರಯೋಗಾಲಯ ಮತ್ತು ಆಹಾರ ಮತ್ತು ಪೌಷ್ಟಿಕಾಂಶ ಪ್ರಯೋಗಾಲಯದಿಂದ ನೀರಿನ ಟ್ಯಾಪ್‌ಗಳನ್ನು ಮಾತ್ರ ಕದ್ದಿದ್ದರು. ಉಕ್ಕಿನ ಟ್ಯಾಪ್‌ಗಳನ್ನು ಪ್ಲಾಸ್ಟಿಕ್ ಟ್ಯಾಪ್‌ಗಳಿಂದ ಬದಲಾಯಿಸಲಾಗಿತ್ತು. ಈಗ ಈ ಟ್ಯಾಪ್‌ಗಳನ್ನು ಸಹ ಕದ್ದಿದ್ದಾರೆ. ಕಳ್ಳತನದ ನಂತರ ಡಿಸೆಂಬರ್ ಮೊದಲ ವಾರದಲ್ಲಿ, ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಸ್ತಾವನೆಯಲ್ಲಿರುವ ಸಿಸಿಟಿವಿಗಳಿಗಾಗಿ ವಿನಂತಿ ಮಾಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಆರೋಪಿಗಳು ಬೋರ್ಡ್ ರೂಮ್ ಬೀಗಗಳನ್ನು ಕತ್ತರಿಸಿ ಕಾಲೇಜಿಗೆ ಪ್ರವೇಶಿಸಿದ್ದಾರೆ. ನಂತರ ಅವರು ಕಾಲೇಜು ಆವರಣದೊಳಗೆ ಸುತ್ತಾಡಿ ದೋಚಿದ್ದಾರೆ. ರಸಾಯನಶಾಸ್ತ್ರ ಪ್ರಯೋಗಾಲಯದ 15 ಮತ್ತು 16 ಕೊಠಡಿಗಳಿಂದ ಟ್ಯಾಪ್‌ಗಳನ್ನು ಕಳವು ಮಾಡಲಾಗಿದೆ.
ರಾತ್ರಿ ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಮನೋಜ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ. ಚಿಂದಿ ಆಯುವವರ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಒಮ್ಮೆ ಚಿಂದಿ ಆಯುವವರ ತಂಡ ಮುಖ ಮುಚ್ಚಿಕೊಂಡು ಕ್ಯಾಂಪಸ್‌ಗೆ ಪ್ರವೇಶಿಸಿತ್ತು ಮತ್ತು ಕಾವಲುಗಾರರನ್ನು ನೋಡಿ ಪರಾರಿಯಾಗಿದ್ದರು ಎಂದು ಹೇಳಲಾಗಿದೆ.
ಹಿಂದಿನ ಕಳ್ಳತನ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ಬಾಗಿಲಿನ ಬೀಗಗಳನ್ನು ಕತ್ತರಿಸಲು ಆಕ್ಸಲ್ ಬ್ಲೇಡ್ ಬಳಸಿದ್ದಾರೆ. ಅದೇ ಬ್ಲೇಡ್‌ಗಳನ್ನು ಬಳಸಿ, ಪೈಪ್‌ಗಳಿಂದ ಐದು ನೀರಿನ ನಲ್ಲಿಗಳನ್ನು ಕತ್ತರಿಸಿದ್ದಾರೆ. ಅವರು ಬ್ಯಾಟರಿಗಳನ್ನು ಸಹ ಕದ್ದಿದ್ದಾರೆ. ಅವರು ಪ್ರಯೋಗಾಲಯಗಳಿಂದ ಬ್ಯಾಟರಿಗಳನ್ನು ಎಳೆದಿದ್ದಾರೆ ಮತ್ತು ಆಮ್ಲ ನೆಲದ ಮೇಲೆ ಚೆಲ್ಲಿದೆ. ಆರೋಪಿಗಳು ಕ್ಯಾಂಪಸ್ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



