ಈ ಬಾರಿ ಬೆಂಗಳೂರಿನಲ್ಲಿ RSS ಪ್ರತಿನಿಧಿ ಸಭಾ; ಬಾಂಗ್ಲಾದೇಶ ಕುರಿತು ನಿರ್ಣಯ: ಸುನೀಲ್ ಅಂಬೇಕರ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸೇರಿದಂತೆ ಆರ್‌ಎಸ್‌ಎಸ್‌ನ 32 ಸಂಘಟನೆಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿರುವ ಜನಸೇವಾ ವಿದ್ಯಾ ಕೇಂದ್ರದಲ್ಲಿ ಮಾರ್ಚ್ 21 ರಿಂದ ಮಾ.23ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಮೂರು ದಿನಗಳ ಸಭೆ ನಡೆಯಲಿದೆ ಎಂದು ಸಂಘದ ರಾಷ್ಟ್ರೀಯ ಪ್ರಚಾರದ ಉಸ್ತುವಾರಿ ಸುನೀಲ್ ಅಂಬೇಕರ್ ಬುಧವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಸಭೆಯಲ್ಲಿ ಬಾಂಗ್ಲಾದೇಶ ಹಾಗೂ ಆರ್ ಎಸ್ ಎಸ್ ಶತಮಾನೋತ್ಸವ ಆಚರಣೆ ಕುರಿತು ಕಾರ್ಯಕಾರಿ ಸಮಿತಿ ನಿರ್ಣಯ ಅಂಗೀಕರಿಸಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸೇರಿದಂತೆ ಆರ್‌ಎಸ್‌ಎಸ್‌ನ 32 ಸಂಘಟನೆಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಾಲ್ಕು ವರ್ಷಗಳ ನಂತರ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಆರ್‌ಎಸ್‌ಎಸ್ ಮಾಡಿದ ಕಾರ್ಯಗಳ ವಿವರವಾದ ಸಾರಾಂಶ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರಾದೇಶಿಕ ಮುಖ್ಯಸ್ಥರು ತಮ್ಮ ಕಾರ್ಯಗಳು, ಕಾರ್ಯಕ್ರಮಗಳು, ಪಾತ್ರ ಮತ್ತು ಭವಿಷ್ಯದ ಯೋಜನೆಗಳನ್ನು ಸಹ ಪ್ರಸ್ತುತಪಡಿಸಲಿದ್ದು, ಅದನ್ನು ಪರಿಶೀಲಿಸಲಾಗುತ್ತದೆ. ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿ ಮತ್ತು ಆರ್‌ಎಸ್‌ಎಸ್ ಪಾತ್ರವನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು, ಅನುಮೋದನೆ ನಂತರ ಅದನ್ನು ಕೋರ್ ಕಮಿಟಿಯ ಮುಂದೆ ಮಂಡಿಸಲಾಗುವುದು ಎಂದು ಅಂಬೇಕರ್ ಹೇಳಿದರು.
ಆರ್‌ಎಸ್‌ಎಸ್‌ನ ಶತಮಾನೋತ್ಸವ ವರ್ಷಾಚರಣೆ ಕುರಿತು ಮಾತನಾಡಿದ ಅವರು, ಈ ವರ್ಷದ ವಿಜಯದಶಮಿಯಂದು ಸಂಘವು 100 ವರ್ಷಗಳನ್ನು ಪೂರೈಸಲಿದೆ. ಇದು ಆರ್‌ಎಸ್‌ಎಸ್‌ನ ಶತಮಾನೋತ್ಸವ ವರ್ಷ. 1925 ರಲ್ಲಿ ನಾಗ್ಪುರದಲ್ಲಿ ಆರಂಭವಾದ ಸಂಘಟನೆ ಈಗ ದೇಶಾದ್ಯಂತ ಹರಡಿದೆ. ಆರ್‌ಎಸ್‌ಎಸ್ ಶಾಖೆಯ ವಿಸ್ತರಣೆ ಮತ್ತು ಅದರ ಗುರಿಗಳನ್ನು ಈ ಮೂರು ದಿನಗಳಲ್ಲಿ ಚರ್ಚಿಸಲಾಗುವುದು ಎಂದು ಆರ್‌ಎಸ್‌ಎಸ್ ನಾಯಕ ಹೇಳಿದರು.
ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷವನ್ನು ವಿಜಯದಶಮಿ 2025 ರಿಂದ ವಿಜಯದಶಮಿ 2026 ರವರೆಗೆ ಆಚರಿಸಲು ನಿರ್ಧರಿಸಿದೆ. ಶತಮಾನೋತ್ಸವ ವರ್ಷಾಚರಣೆಯ ಕುರಿತು ನಿರ್ಣಯ ಅಂಗೀಕರಿಸಿ, ಬಹಿರಂಗಗೊಳಿಸಲಾಗುವುದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಂಘಟನೆಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಆರ್‌ಎಸ್‌ಎಸ್‌ನ ಪ್ರಮುಖರಾದ ಕೃಷ್ಣ ಗೋಪಾಲ್, ಮುಕುಂದ್, ಅರುಣ್ ಕುಮಾರ್, ರಾಮ್ ದತ್, ಅಲೋಕ್ ಕುಮಾರ್, ಅತುಲ್ ಲಿಮಯೆ ಭಾಗವಹಿಸಲಿದ್ದಾರೆ ಎಂದು ಅಂಬೇಕರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



