ರಾಜ್ಯ

ಶೇ. 40ರಷ್ಟು ಕಮಿಷನ್‌: ನಾಗಮೋಹನ್ ದಾಸ್ ಆಯೋಗದಿಂದ ರಾಜಕೀಯ ಪ್ರೇರಿತ ವರದಿ ಸಲ್ಲಿಕೆ- ಆರ್. ಅಶೋಕ್ ಟೀಕೆ

ಶೇ.40 ಕಮಿಷನ್‌ ಆರೋಪ: ನ್ಯಾ. ನಾಗಮೋಹನ ದಾಸ್ ಸಮಿತಿಯಿಂದ 20,000 ಪುಟಗಳ ವರದಿ ಸಲ್ಲಿಕೆ; ವಿಪಕ್ಷದ ವಿರುದ್ಧ ಸರ್ಕಾರಕ್ಕೆ ಸಿಕ್ತು ಹೊಸ ಅಸ್ತ್ರ

ಶೇ. 40ರಷ್ಟು ಕಮಿಷನ್‌: ನಾಗಮೋಹನ್ ದಾಸ್ ಆಯೋಗದಿಂದ ರಾಜಕೀಯ ಪ್ರೇರಿತ ವರದಿ ಸಲ್ಲಿಕೆ- ಆರ್. ಅಶೋಕ್ ಟೀಕೆ
ಆರ್. ಅಶೋಕ್ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬಿಜೆಪಿ ಅಧಿಕಾರಾವಧಿಯಲ್ಲಿ ಸಿವಿಲ್ ಕಾಮಗಾರಿಗಳಲ್ಲಿ ಶೇ. 40ರಷ್ಟು ಕಮಿಷನ್‌ ಪಡೆದ ಆರೋಪದ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌ಎನ್‌ ನಾಗಮೋಹನ್‌ ದಾಸ್‌ ಆಯೋಗವನ್ನು ಕಾಂಗ್ರೆಸ್‌ ಪ್ರೇರಿತ ಆಯೋಗ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಗುರುವಾರ ಟೀಕಿಸಿದ್ದಾರೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗವು 20 ಸಾವಿರ ಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಸಲ್ಲಿಸಿದೆ.

ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಸಂಪೂರ್ಣ ರಾಜಕೀಯ ವರದಿಯನ್ನು ಸಲ್ಲಿಸಲಾಗಿದೆ. ವಿಚಾರಣೆಯ ಮಾನದಂಡಗಳೇನು? ಯಾವ ದಾಖಲೆಗಳನ್ನು ಪರಿಶೀಲಿಸಲಾಗಿದೆ? ಇವೇ ನಿರ್ಣಾಯಕ ಅಂಶಗಳಾ?ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಯಾವಾಗಲೂ ಅವರನ್ನು ನೇಮಿಸುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ನಾಗಮೋಹನ್ ದಾಸ್ ಖಾಯಂ ಆಗಿದ್ದು, ಎಲ್ಲಾ ವಿಚಾರಣೆಗಳನ್ನು ಅವರಿಗೆ ವಹಿಸಲಾಗಿದೆ ಎಂದು ಅಶೋಕ್ ಟೀಕಿಸಿದರು.

ನಾಗಮೋಹನ್ ದಾಸ್ ಕಾಂಗ್ರೆಸ್ ಪರವಾಗಿ ವರದಿ ಸಲ್ಲಿಸುವ ಅಭ್ಯಾಸವಿದೆ. ಇದು ರಾಜಕೀಯವಲ್ಲದೆ ಬೇರೇನೂ ಅಲ್ಲ. ಈ ಆಯೋಗವು ತನಿಖಾ ಸಂಸ್ಥೆಯಲ್ಲ. ಶೇ.40 ರಷ್ಟು ಕಮಿಷನ್ ನಡೆದಿಲ್ಲ ಎಂದು ಲೋಕಾಯುಕ್ತರು ಈಗಾಗಲೇ ವರದಿ ನೀಡಿದೆ ಎಂದು ಅಶೋಕ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.