ಇನ್ಶೂರೆನ್ಸ್ ಕಮಿಷನ್ ನಿಯಮದಲ್ಲಿ ಭಾರೀ ಬದಲಾವಣೆ; ಏಜೆಂಟ್‌ಗಳ ಕಮಿಷನ್‌ಗೆ IRDAI ಕತ್ತರಿ; ಗ್ರಾಹಕರಿಗೆ ಲಾಭ
ವಿಮೆ ಖರೀದಿಸುವಾಗ ನೀವು ಪಾವತಿಸುವ ಹಣದಲ್ಲಿ ಎಷ್ಟು ಮೊತ್ತ ಮಧ್ಯವರ್ತಿಗಳಿಗೆ ಕಮಿಷನ್ ರೂಪದಲ್ಲಿ ಹೋಗುತ್ತದೆ ಎಂಬುದು ಗೊತ್ತಾ? ಗ್ರಾಹಕರ ಜೇಬಿಗೆ ಹೊರೆಯಾಗುತ್ತಿರುವ ದುಬಾರಿ ವೆಚ್ಚವನ್ನು ನಿಯಂತ್ರಿಸಲು ಹಾಗೂ ಅನಗತ್ಯ ವಂಚನೆ ತಡೆಯಲು IRDAI ಮಹತ್ವದ ಬದಲಾವಣೆಗೆ ಸಜ್ಜಾಗಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ವಿಮೆ ಖರೀದಿಸುವಾಗ ನೀವು ಪಾವತಿಸುವ ಹಣದಲ್ಲಿ ಎಷ್ಟು ಮೊತ್ತ ಮಧ್ಯವರ್ತಿಗಳ ಕಮಿಷನ್ ರೂಪದಲ್ಲಿ ಹೋಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಗ್ರಾಹಕರ ಜೇಬಿಗೆ ಹೊರೆಯಾಗುತ್ತಿರುವ ದುಬಾರಿ ವಿತರಣಾ ವೆಚ್ಚವನ್ನು ನಿಯಂತ್ರಿಸಲು ಹಾಗೂ ಅನಗತ್ಯ ವಂಚನೆ ತಡೆಯಲು ವಿಮಾ ನಿಯಂತ್ರಣ ಪ್ರಾಧಿಕಾರ ಇದೀಗ ಮಹತ್ವದ ಬದಲಾವಣೆಗೆ ಸಜ್ಜಾಗಿದೆ. ಅದರಂತೆ, ಕೇಂದ್ರ ಸರ್ಕಾರ ಮತ್ತು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ವಿಮಾ ಏಜೆಂಟ್‌ಗಳ ಕಮಿಷನ್ ರಚನೆಯಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿದ್ದು, ಇದು ಏಜೆಂಟ್‌ಗಳ ಆದಾಯಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ವಿಮಾ ಪಾಲಿಸಿಗಳ ಮಾರಾಟದ ಮೇಲಿನ ಸಾಂಪ್ರದಾಯಿಕ ಕಮಿಷನ್ ವ್ಯವಸ್ಥೆಯನ್ನು ಬದಲಾಯಿಸಿ, ಗ್ರಾಹಕರಿಗೆ ಹೆಚ್ಚು ಲಾಭವಾಗುವಂತಹ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:
ಪ್ರಸ್ತಾವಿತ ಹೊಸ ಕಮಿಷನ್ ಮಿತಿಗಳು:
ಜೀವ ವಿಮೆಯಲ್ಲಿ ಪಾಲಿಸಿಯ ಪ್ರೀಮಿಯಂ ಪಾವತಿಸುವ ಅವಧಿಗೆ ಅನುಗುಣವಾಗಿ ಮೊದಲ ವರ್ಷದ ಗರಿಷ್ಠ ಕಮಿಷನ್ ಮಿತಿಯು,
5 ವರ್ಷಕ್ಕಿಂತ ಕಡಿಮೆ ಅವಧಿಯ ಪಾಲಿಸಿ: ವಿಮಾ ಏಜೆಂಟ್‌ಗಳಿಗೆ ಗರಿಷ್ಠ ಶೇ. 6.25 ಮತ್ತು ವಿತರಣಾ ಸಂಸ್ಥೆಗಳಿಗೆ (ಬ್ಯಾಂಕ್/ಬ್ರೋಕರ್ಸ್) ಶೇ. 5 ರಷ್ಟು ಕಮಿಷನ್.
5 ವರ್ಷಗಳ ಅವಧಿಯ ಪಾಲಿಸಿ: ಏಜೆಂಟ್‌ಗಳಿಗೆ ಗರಿಷ್ಠ ಶೇ. 12.5 ಮತ್ತು ವಿತರಕ ಸಂಸ್ಥೆಗಳಿಗೆ ಶೇ. 10 ರಷ್ಟು ಮಿತಿ.
6 ರಿಂದ 8 ವರ್ಷಗಳ ಅವಧಿಯ ಪಾಲಿಸಿ: ಏಜೆಂಟ್‌ಗಳಿಗೆ ಗರಿಷ್ಠ ಶೇ. 17.5 ಮತ್ತು ವಿತರಕ ಸಂಸ್ಥೆಗಳಿಗೆ ಶೇ. 14 ರಷ್ಟು ಮಿತಿ.
9 ವರ್ಷಗಳ ಅವಧಿಯ ಪಾಲಿಸಿ: ಏಜೆಂಟ್‌ಗಳಿಗೆ ಗರಿಷ್ಠ ಶೇ. 22.5 ಮತ್ತು ವಿತರಕ ಸಂಸ್ಥೆಗಳಿಗೆ ಶೇ. 18 ರಷ್ಟು ಮಿತಿ.
10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿ: ಏಜೆಂಟ್‌ಗಳಿಗೆ ಗರಿಷ್ಠ ಶೇ. 25 ಹಾಗೂ ವಿತರಕ ಸಂಸ್ಥೆಗಳಿಗೆ ಶೇ. 20 ರಷ್ಟು ಕಮಿಷನ್ ಮಿತಿ ಇರಲಿದೆ.
ಟರ್ಮ್ ಇನ್ಶೂರೆನ್ಸ್: ಮೊದಲ ವರ್ಷದ ಕಮಿಷನ್ ಅನ್ನು ಗರಿಷ್ಠ ಶೇ. 25 ರಿಂದ 30 ಕ್ಕೆ ಮಿತಿಗೊಳಿಸಲು ಪ್ರಸ್ತಾಪಿಸಲಾಗಿದೆ (ಪ್ರಸ್ತುತ ಇದು ಕೆಲವು ಕಡೆ ಶೇ. 50 ಕ್ಕಿಂತ ಹೆಚ್ಚಿದೆ).
ಆರೋಗ್ಯ ವಿಮೆ: ಹೊಸ ಪಾಲಿಸಿಗಳ ಮೇಲಿನ ಕಮಿಷನ್ ಅನ್ನು ಗರಿಷ್ಠ ಶೇ. 15 ರಿಂದ 20 ಕ್ಕೆ ಮತ್ತು ನವೀಕರಣದ ವೇಳೆ ಶೇ. 5 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.
ಇತರ ಪ್ರಮುಖ ಬದಲಾವಣೆಗಳು:
ಪಾಲಿಸಿ ದಾಖಲೆಗಳಲ್ಲೇ ಮಾಹಿತಿ: ಗ್ರಾಹಕರಿಗೆ ಸಂಪೂರ್ಣ ಪಾರದರ್ಶಕತೆ ನೀಡಲು, ಪಾಲಿಸಿ ಬಾಂಡ್‌ನಲ್ಲೇ ಏಜೆಂಟ್‌ಗೆ ಎಷ್ಟು ಕಮಿಷನ್ ಹಣ ಸಂದಾಯವಾಗುತ್ತಿದೆ ಎಂಬ ವಿವರವನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.
ವಾಹನ ವಿಮೆಗೆ ಕಮಿಷನ್ ಇಲ್ಲ: ಹೊಸ ವಾಹನಗಳನ್ನು ಖರೀದಿಸುವಾಗ ಡಿಜಿಟಲ್ ವೇದಿಕೆಗಳ ಮೂಲಕ ವಿಮೆ ಪಡೆಯುವುದನ್ನು ಉತ್ತೇಜಿಸಲು, ಹೊಸ ವಾಹನಗಳ ಥರ್ಡ್ ಪಾರ್ಟಿ ವಿಮೆಗೆ ಯಾವುದೇ ಕಮಿಷನ್ ನೀಡದಿರಲು ಪ್ರಸ್ತಾಪಿಸಲಾಗಿದೆ.
ಬ್ಯಾಂಕ್‌ಗಳಿಗೆ ನಿರ್ಬಂಧ: ಸಾಲ ನೀಡುವಾಗ ಗ್ರಾಹಕರು ಕಡ್ಡಾಯವಾಗಿ ವಿಮೆ ಖರೀದಿಸಬೇಕು ಎಂದು ಬ್ಯಾಂಕ್‌ಗಳು ಒತ್ತಾಯಿಸುವಂತಿಲ್ಲ. ವಿಮಾ ವಲಯದ ಈ ಪ್ರಮುಖ ಸುಧಾರಣಾ ಪ್ರಸ್ತಾವನೆಗೆ ಸಾರ್ವಜನಿಕರು ಮತ್ತು ಸರಣಿ ಪಾಲುದಾರರಿಂದ ಪ್ರತಿಕ್ರಿಯೆ ನೀಡಲು ಅಕ್ಟೋಬರ್ 25ರವರೆಗೆ ಕಾಲಾವಕಾಶ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



