ರಾಜ್ಯ

ಸಿಗ್ನಲಿಂಗ್ ಸಮಸ್ಯೆ: ನಮ್ಮ ಮೆಟ್ರೋ ನೇರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಯ, ಮೆಜೆಸ್ಟಿಕ್‌ನಲ್ಲಿ ಭಾರೀ ಜನದಟ್ಟಣೆ

ಪೀಕ್ ಅವರ್ ನಲ್ಲೇ ವ್ಯತ್ಯಯ ಎದುರಾಗಿದ್ದು, ನಮ್ಮ ಮೆಟ್ರೋ ಸಂಚಾರದ ಮೇಲೆ ಅವಲಂಬಿತರಾಗಿರುವ ಜನರು ಪೇಚಾಡುವಂತಾಗಿದೆ.

ಸಿಗ್ನಲಿಂಗ್ ಸಮಸ್ಯೆ: ನಮ್ಮ ಮೆಟ್ರೋ ನೇರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಯ, ಮೆಜೆಸ್ಟಿಕ್‌ನಲ್ಲಿ ಭಾರೀ ಜನದಟ್ಟಣೆ
ನೇರಳೆ ಮಾರ್ಗದ ಮೆಟ್ರೋ ರೈಲು
Published On :

ಬೆಂಗಳೂರು: ಸಿಗ್ನಲಿಂಗ್ ಸಮಸ್ಯೆಯಿಂದಾಗಿ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಿದ್ದು, ಪರಿಣಾಮ ವಾರಾಂತ್ಯದ ರಜೆ ಬಳಿಕ ಸೋಮವಾರ ಕೆಲಸ, ಕಚೇರಿ, ಕಾಲೇಜುಗಳಿಗೆ ಹೊರಟವರು ಸಮಸ್ಯೆ ಎದುರಿಸುವಂತಾಗಿದೆ.

ಪೀಕ್ ಅವರ್ ನಲ್ಲೇ ವ್ಯತ್ಯಯ ಎದುರಾಗಿದ್ದು, ನಮ್ಮ ಮೆಟ್ರೋ ಸಂಚಾರದ ಮೇಲೆ ಅವಲಂಬಿತರಾಗಿರುವ ಜನರು ಪೇಚಾಡುವಂತಾಗಿದೆ.

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಹಸಿರು ಹಾಗೂ ನೇರಳೆ ಬಣ್ಣದ ಇಂಟರ್‌ಚೇಂಜ್ ನಿಲ್ದಾಣವೂ ಆಗಿದ್ದು, ನಿಲ್ದಾಣದಲ್ಲಿ ಭಾರೀ ಜನ ದಟ್ಟಣೆ ಉಂಟಾಗಿದೆ.

ನಿಮಿಷ ನಿಮಿಷಕ್ಕೂ ನೂರಾರು ಪ್ರಯಾಣಿಕರ ದಟ್ಟಣೆ ಉಂಟಾಗಿ ಮೆಜೆಸ್ಟಿಕ್ ನಿಲ್ದಾಣದಲ್ಲಿ ಕಾಲಿಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

ಸಿಗ್ನಲಿಂಗ್ ಸಮಸ್ಯೆಯಿಂದಾಗಿ ಸಂಚಾರದಲ್ಲಿ ವ್ಯತ್ಯಯ ಎದುರಾಗಿತ್ತು. ನೇರಳೆ ಮಾರ್ಗದಲ್ಲಿ ಸಿಗ್ನಲ್ ಸಮಸ್ಯೆಯಾಗಿತ್ತು. ಇದೀಗ ಎಲ್ಲವೂ ಸರಿ ಹೋಗಿದ್ದು ಸಹಜ ಸ್ಥಿತಿಗೆ ಮರಳುತ್ತಿದೆ. ಇದೀಗ ಮೆಟ್ರೋ ಕಾರ್ಯಾಚರಣೆ ಎಂದಿನಂತೆ ಇದೆ ಎಂದು ಬಿಎಂಆರ್'ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.