'ಬೆಂಗಳೂರು ಮೆಟ್ರೋ ಶಿಸ್ತಿನ ಸಿಪಾಯಿ': ಪ್ರಯಾಣಿಕರ ನಾಗರಿಕ ಪ್ರಜ್ಞೆಯನ್ನು ಹಾಡಿ ಹೊಗಳಿದ ಉತ್ತರ ಭಾರತದ ಮಹಿಳೆ! ವಿಡಿಯೋ ವೈರಲ್
ನಮ್ಮ ಮೆಟ್ರೋದಲ್ಲಿ ಕ್ರಮಬದ್ಧ ಬೋರ್ಡಿಂಗ್‌ನಿಂದ ಹಿಡಿದು ಪ್ರಯಾಣಿಕರು ಮಹಿಳೆಯರಿಗೆ ತಮ್ಮ ಸೀಟುಗಳನ್ನು ಮನಃಪೂರ್ವಕವಾಗಿ ಬಿಟ್ಟುಕೊಡುವವರೆಗೆ ಎಲ್ಲವನ್ನೂ ತಮ್ಮ ವಿಡಿಯೋದಲ್ಲಿ ಎತ್ತಿ ತೋರಿಸುವ ಮೂಲಕ ಪ್ರಯಾಣಿಕರ ನಾಗರಿಕ ಪ್ರಜ್ಞೆ ಮತ್ತು ಶಿಸ್ತಿನ ನಡವಳಿಕೆಯನ್ನು ಶ್ಲಾಘಿಸಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರಿ ನಾಡಿಯಾಗಿರುವ ನಮ್ಮ ಮೆಟ್ರೋ ಮತ್ತು ಮೆಟ್ರೋ ಪ್ರಯಾಣಿಕರ ಬಗ್ಗೆ ಉತ್ತರ ಭಾರತದ ಮಹಿಳೆಯೊಬ್ಬರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನಮ್ಮ ಮೆಟ್ರೋದಲ್ಲಿ ಕ್ರಮಬದ್ಧ ಬೋರ್ಡಿಂಗ್‌ನಿಂದ ಹಿಡಿದು ಪ್ರಯಾಣಿಕರು ಮಹಿಳೆಯರಿಗೆ ತಮ್ಮ ಸೀಟುಗಳನ್ನು ಮನಃಪೂರ್ವಕವಾಗಿ ಬಿಟ್ಟುಕೊಡುವವರೆಗೆ ಎಲ್ಲವನ್ನೂ ತಮ್ಮ ವಿಡಿಯೋದಲ್ಲಿ ಎತ್ತಿ ತೋರಿಸುವ ಮೂಲಕ ಉತ್ತರ ಭಾರತದ ಮಹಿಳೆ ಪ್ರಯಾಣಿಕರ ನಾಗರಿಕ ಪ್ರಜ್ಞೆ ಮತ್ತು ಶಿಸ್ತಿನ ನಡವಳಿಕೆಯನ್ನು ಶ್ಲಾಘಿಸಿದ್ದಾರೆ.
ಶಬೀನಾ ಮಸೂದ್ ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋದಲ್ಲಿ ಬೆಂಗಳೂರು ಮೆಟ್ರೋ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ. ರೈಲುಗಳನ್ನು ಹತ್ತುವಾಗ ಮತ್ತು ಇಳಿಯುವಾಗ ಪ್ರಯಾಣಿಕರು ವರ್ತಿಸುವ ರೀತಿ ಒಟ್ಟಾರೆ ಪ್ರಯಾಣದ ಅನುಭವಅತ್ಯಂತ ಉತ್ತಮವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಬೆಂಗಳೂರು ಮೆಟ್ರೋ ವ್ಯವಸ್ಥೆಯು ಶಿಷ್ಟಾಚಾರ ಮೆಚ್ಚುಗೆಗೆ ಅರ್ಹವಾಗಿದೆ ಎಂದು ಶಬೀನಾ ಹೇಳಿದ್ದಾರೆ.
ಬೆಂಗಳೂರು ಮೆಟ್ರೋದ ಅತ್ಯುತ್ತಮ ಅಥವಾ ವಿಶೇಷವೆಂದರೆ ಇಲ್ಲಿನ ಜನ ತುಂಬಾ ಶಿಸ್ತುಬದ್ಧ ರೀತಿಯಲ್ಲಿ ರೈಲು ಹತ್ತುತ್ತಾರೆ ಮತ್ತು ಇಳಿಯುತ್ತಾರೆ. ಮಹಿಳೆಯರನ್ನು ನೋಡಿದ ತಕ್ಷಣ ಅವರು ಅವರಿಗೆ ಆಸನವನ್ನು ಬಿಟ್ಟು ಕೊಡುತ್ತಾರೆ. ನಿಮ್ಮ ಬ್ಯಾಗ್‌ನಲ್ಲಿ ಇರಿಸಲಾಗಿರುವ ವಸ್ತುಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ, ಏಕೆಂದರೆ ಇಲ್ಲಿ ಪಿಕ್‌ಪಾಕೆಟ್ ಕಳ್ಳತನ ನಡೆಯುವುದಿಲ್ಲ ಎಂದಿದ್ದಾರೆ. ನಮ್ಮ ಮೆಟ್ರೋ ಎಂದು ಜನಪ್ರಿಯವಾಗಿರುವ ಬೆಂಗಳೂರು ಮೆಟ್ರೋದಲ್ಲಿ ನಿತ್ಯವು ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ನಗರದ ವಿವಿಧ ಭಾಗಗಳಲ್ಲಿ ಪ್ರಯಾಣಿಸುವ ಜನರಿಗೆ ಪ್ರಮುಖ ಸಾರಿಗೆ ಇದಾಗಿದೆ ಎಂದಿದ್ದಾರೆ.
ಇನ್ನು ಈ ವೈರಲ್ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನೀವು ಬೆಂಗಳೂರಿಗೆ ಹೊಸಬರಿರಬೇಕು, ಬೆಂಗಳೂರಿನಲ್ಲಿ ಇದೆಲ್ಲವೂ ಸಾಮಾನ್ಯ ಸಂಗತಿಯಾಗಿದೆ. ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ಇದೆಲ್ಲವು ಸಾಮಾನ್ಯ ಸಂಗತಿ ಆಗಿದೆ. ದಕ್ಷಿಣ ಭಾರತದಲ್ಲಿ ಜನರು ಸಭ್ಯವಾಗಿ ವರ್ತಿಸುತ್ತಾರೆ. ಅದರಲ್ಲೂ ಸಾರ್ವಜನಿಕ ಪ್ರದೇಶಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಜನರಿಗೆ ತಿಳಿದಿದೆ. ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದ ಮೆಟ್ರೋ ಹಾಗೂ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಜನ ಸಭ್ಯ ರೀತಿಯಲ್ಲಿ ವರ್ತಿಸುತ್ತಾರೆ ಎಂದೂ ಹಲವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



