ಸಂಚಾರ ವ್ಯತ್ಯಯ

ಸಿಲಿಕಾನ್ ಸಿಟಿಯ ಲೈಫ್‌ಲೈನ್‌ಗೆ ಏನಾಗುತ್ತಿದೆ? 10 ತಿಂಗಳಲ್ಲಿ 15 ಬಾರಿ ಕೈಕೊಟ್ಟ 'ನಮ್ಮ ಮೆಟ್ರೋ'
2025ರ ಸೆಪ್ಟೆಂಬರ್‌ನಿಂದ 2026ರ ಜುಲೈವರೆಗೆ ನೇರಳೆ ಮಾರ್ಗದಲ್ಲಿ 5, ಹಸಿರು ಮಾರ್ಗದಲ್ಲಿ 6 ಹಾಗೂ ಹಳದಿ ಮಾರ್ಗದಲ್ಲಿ 4 ತಾಂತ್ರಿಕ ವ್ಯತ್ಯಯಗಳು ದಾಖಲಾಗಿವೆ.

ನಮ್ಮ ಮೆಟ್ರೋ ನಿಲ್ದಾಣದ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ನೇರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಯ
ಮೈಸೂರು ರಸ್ತೆ ಮತ್ತು ಚಲಘಟ್ಟ ನಡುವಿನ ಸೇವೆಗಳು ಕೆಂಗೇರಿ ನಿಲ್ದಾಣದಲ್ಲಿ ಸಂಭವಿಸಿದ ಆತ್ಮಹತ್ಯೆ ಪ್ರಯತ್ನದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಸಿಗ್ನಲಿಂಗ್ ಸಮಸ್ಯೆ: ನಮ್ಮ ಮೆಟ್ರೋ ನೇರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಯ, ಮೆಜೆಸ್ಟಿಕ್‌ನಲ್ಲಿ ಭಾರೀ ಜನದಟ್ಟಣೆ
ಪೀಕ್ ಅವರ್ ನಲ್ಲೇ ವ್ಯತ್ಯಯ ಎದುರಾಗಿದ್ದು, ನಮ್ಮ ಮೆಟ್ರೋ ಸಂಚಾರದ ಮೇಲೆ ಅವಲಂಬಿತರಾಗಿರುವ ಜನರು ಪೇಚಾಡುವಂತಾಗಿದೆ.

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಇಂದು ಕೆಲ ಕಾಲ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಸ್ಥಗಿತ..!
ತಾಂತ್ರಿಕ ದೋಷದಿಂದಾಗಿ ತಾತ್ಕಾಲಿಕವಾಗಿ ಕೆಲ ಕಾಲ ಮೆಟ್ರೋ ಸಂಚಾರ ಇಂದು ಸ್ಥಗಿತಗೊಳ್ಳಲಿದೆ. ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ.

ತಾಂತ್ರಿಕ ದೋಷದಿಂದ ಕೆಟ್ಟು ನಿಂತ ಮೆಟ್ರೋ ರೈಲು: ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ಪೀಣ್ಯ ನಿಲ್ದಾಣದಲ್ಲಿ ಮೆಟ್ರೋ ರೈಲು ಕೆಟ್ಟು ನಿಂತಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆಗೆ ರೈಲು ಕೆಟ್ಟು ನಿಂತಿದ್ದು ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹಳಿತಪ್ಪಿದ ರೀ ರೈಲ್: ಸಂಚಾರದಲ್ಲಿ ವ್ಯತ್ಯಯ, ಪ್ರಯಾಣಿಕರ ಪರದಾಟ
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಂಚರಿಸಿದ ರೀ ರೈಲ್ ವಾಹನ ಆಯತಪ್ಪಿದ ಹಿನ್ನಲೆಯಲ್ಲಿ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ಭೀಕರ ಚಳಿಗೆ ಉತ್ತರ ಭಾರತ ತತ್ತರ: ರೈಲು, ವಿಮಾನ ಹಾರಾಟದಲ್ಲಿ ವ್ಯತ್ಯಯ, ದೆಹಲಿಯಲ್ಲಿ ಜ.15ರವರೆಗೆ ಶಾಲೆಗಳಿಗೆ ರಜೆ ಘೋಷಣೆ
ಕಳೆದ 15 ದಿನಗಳಿಂದ ಭೀಕರ ಚಳಿಗೆ ಉತ್ತರ ಭಾರತ ತತ್ತರಗೊಂಡಿದ್ದು, ಭಾರಿ ಚಳಿ ಹಾಗೂ ಮಂಜು ಮುಸುಕಿದ ವಾತಾವರಣವು ಸದ್ದಿಲ್ಲದೆ ನೂರಾರು ಜನರನ್ನು ಬಲಿಪಡೆದುಕೊಂಡಿದೆ. ಮಂಜು ಮುಸುಕಿದ ವಾತಾವರಣ ಹಿನ್ನೆಲೆಯಲ್ಲಿ ಹಲವೆಡೆ ರೈಲು ಸಂಚಾರ ಹಾಗೂ ವಿಮಾನಗಳ ಹಾರಾಟದಲ್ಲಿ ವ್ಯತ್ಯಯಗಳು ಕಂಡು ಬಂದಿದೆ.

ನಾಳೆ ಸಾರಿಗೆ ನೌಕರರ ಧರಣಿ: ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಗುರುವಾರ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ.

