ರಾಜ್ಯ

ಅಹ್ಮದಾಬಾದ್ ನಲ್ಲಿ RCB ಬಾಯ್ಸ್ ಗೆಲ್ಲಲಿದ್ದಾರೆ, ಸರ್ಕಾರ ಬೆಂಗಳೂರಿನ ಗೆಲುವನ್ನು ಎದುರುನೋಡುತ್ತಿದೆ: DK Shivakumar

ಈ ಬಾರಿ ಆರ್ ಸಿಬಿ ಕಪ್ ಗೆಲ್ಲಲಿದೆ ಎಂಬ ವಿಶ್ವಾಸ ಒಂದೆಡೆಯಾದರೆ, ಗೆಲ್ಲಲೇಬೇಕು ಎಂಬ ಒತ್ತಡ ತಂಡದ ಮೇಲೆ ಹೆಚ್ಚುತ್ತಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಆರ್ ಸಿಬಿಗೆ ಶುಭಕೋರುತ್ತಿದ್ದಾರೆ.

ಅಹ್ಮದಾಬಾದ್ ನಲ್ಲಿ RCB ಬಾಯ್ಸ್ ಗೆಲ್ಲಲಿದ್ದಾರೆ, ಸರ್ಕಾರ ಬೆಂಗಳೂರಿನ ಗೆಲುವನ್ನು ಎದುರುನೋಡುತ್ತಿದೆ: DK Shivakumar
Published On :

ಬೆಂಗಳೂರು: ಆರ್ ಸಿಬಿ- ಪಂಜಾಬ್ ನಡುವಿನ IPL 2025 ಟೂರ್ನಿಯ ಫೈನಲ್ಸ್ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ಬಾರಿ ಆರ್ ಸಿಬಿ ಕಪ್ ಗೆಲ್ಲಲಿದೆ ಎಂಬ ವಿಶ್ವಾಸ ಒಂದೆಡೆಯಾದರೆ, ಗೆಲ್ಲಲೇಬೇಕು ಎಂಬ ಒತ್ತಡ ತಂಡದ ಮೇಲೆ ಹೆಚ್ಚುತ್ತಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಆರ್ ಸಿಬಿಗೆ ಶುಭಕೋರುತ್ತಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಸಹ ಆರ್ ಸಿಬಿ-ಪಂಜಾಬ್ ನಡುವಿನ ಫೈನಲ್ಸ್ ಪಂದ್ಯದ ಬಗ್ಗೆ ಮಾತನಾಡಿದ್ದು, ಆರ್ ಸಿಬಿ ಹುಡುಗರು ಅಹ್ಮದಾಬಾದ್ ನಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನನಗೆ ಸಂತಸವಾಗುತ್ತಿದೆ. ಬಹಳ ಸಮಯದ ನಂತರ ಅವರು ಫೈನಲ್‌ಗೆ ಬಂದಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಕರ್ನಾಟಕದ ಜನರು ಅವರ ಗೆಲುವಿಗಾಗಿ ಕಾಯುತ್ತಿದ್ದಾರೆ. ಕರ್ನಾಟಕದ ಬಹಳಷ್ಟು ಜನರು ಅಹಮದಾಬಾದ್‌ನಲ್ಲಿ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಅವರು ಗೆದ್ದು ಮತ್ತೆ ಬರಲಿ ಎಂದು ನಾವು ಆಶಿಸೋಣ ಮತ್ತು ಪ್ರಾರ್ಥಿಸೋಣ." ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.