ರಾಜ್ಯ

Poster ಅಂಟಿಸುವ ಮುನ್ನ ಎಚ್ಚರ: Bengaluru Auto Driversಗೆ RTO ಅಧಿಕಾರಿಗಳು ಮತ್ತೆ ಶಾಕ್! 5 ಸಾವಿರ ರೂ ದಂಡ!

ಫಿಲ್ಮ್/ ಇನ್ಸೂರೆನ್ಸ್/ ಮತ್ತಿತರ ಪೋಸ್ಟರ್ ಹಾಕಿಸಿಕೊಂಡ ಸಾವಿರಾರು ಆಟೋ ಚಾಲಕರಿಗೆ ಇಂದು RTO ಬಿಸಿ ಮುಟ್ಟಿಸಿದೆ.

Poster ಅಂಟಿಸುವ ಮುನ್ನ ಎಚ್ಚರ: Bengaluru Auto Driversಗೆ  RTO ಅಧಿಕಾರಿಗಳು ಮತ್ತೆ ಶಾಕ್! 5 ಸಾವಿರ ರೂ ದಂಡ!
ಬೆಂಗಳೂರಿನಲ್ಲಿ ಆರ್ ಟಿಒ ಅಧಿಕಾರಿಗಳ ಕಾರ್ಯಾಚರಣೆ
Published On :

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಆಟೋ ಚಾಲಕರಿಗೆ ಆರ್ ಟಿಒ ಅಧಿಕಾರಿಗಳು ಶಾಕ್ ನೀಡಿದ್ದು, ಮತ್ತೆ ಕಾರ್ಯಾಚರಣೆ ಮೂಲಕ ನಿಯಮ ತಪ್ಪಿದ ಚಾಲಕರಿಗೆ ದುಬಾರಿ ದಂಡ ವಿಧಿಸುತ್ತಿದ್ದಾರೆ.

ಹೌದು.. ಸಿಲಿಕಾನ್​ ಸಿಟಿ ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ನಿಯಮ ಬಾಹಿರವಾಗಿ ಆಟೋ ಚಾಲನೆ ಮಾಡುತ್ತಿದ್ದ ಆಟೋ ಚಾಲಕರ ವಿರುದ್ಧ ಆರ್ ಟಿ ಒ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ನಿಯಮ ಮೀರಿದ ಚಾಲಕರಿಗೆ ದುಬಾರಿ ದಂಡ ಹೇರುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಆಟೋಗಳ ಹಿಂದೆ ನಿಯಮ ಬಾಹಿರವಾಗಿ ಭಿತ್ತಿ ಪತ್ರಗಳು ಮತ್ತು ವಿವಿಧ ಪೋಸ್ಟರ್ ಗಳು ಅಂಟಿಸಿಕೊಂಡು ತಿರುಗಾಡುತ್ತಿದ್ದ ಆಟೋ ಚಾಲಕರನ್ನು ತಡೆದು ಅಧಿಕಾರಿಗಳು ಸ್ಥಳದಲ್ಲೇ ಭಾರಿ ದಂಡ ಹೇರುತ್ತಿದ್ದಾರೆ.

ಮೂಲಗಳ ಪ್ರಕಾರ ಈ ರೀತಿ ನಿಯಮ ಬಾಹಿರವಾಗಿ ಪೋಸ್ಟರ್ ಗಳನ್ನು ಅಂಟಿಸಿಕೊಂಡು ತಿರುಗಾುತ್ತಿರುವ ಆಟೋಗಳಿಗೆ ಅಧಿಕಾರಿಗಳು ಬರೊಬ್ಬರಿ 5 ಸಾವಿರ ರೂವರೆಗೂ ದಂಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಚ್ಚರ ವಹಿಸಿ, ಪೋಸ್ಟರ್ ಅಂಟಿಸದಿರಿ

ಆಟೋ ಹಿಂದೆ ಯಾವುದೇ ಜಾಹೀರಾತು ಅಳವಡಿಕೆ ಮುನ್ನ ಎಚ್ಚರ ವಹಿಸಿ. ನೂರು-ಐನೂರರ ಆಸೆಗೆ ಆಟೋ ಹಿಂದೆ ಫಿಲ್ಮ್ ಪೋಸ್ಟರ್ ಅಥವಾ ಇನ್ನಾವುದೇ ಭಿತ್ತಿಪತ್ರಗಳನ್ನು ಅಂಟಿಸಿಕೊಂಡು ತಿರುಗಾಡುತ್ತಿದ್ದರೆ ಅಧಿಕಾರಿಗಳು ಖಂಡಿತಾ ದಂಡ ಹೇರುತ್ತಾರೆ. ಫಿಲ್ಮ್/ ಇನ್ಸೂರೆನ್ಸ್/ ಮತ್ತಿತರ ಪೋಸ್ಟರ್ ಹಾಕಿಸಿಕೊಂಡ ಸಾವಿರಾರು ಆಟೋ ಚಾಲಕರಿಗೆ ಇಂದು RTO ಬಿಸಿ ಮುಟ್ಟಿಸಿದೆ.

ನಗರದ ಸಾವಿರಾರು ಆಟೋಗಳಿಗೆ ದಂಡ ಹಾಕಲಾಗಿದ್ದು, ಈ ಬಗ್ಗೆ ನಮಗೆ ಅರಿವಿರಲಿಲ್ಲ ಅಂತ ಚಾಲಕರು ಅಳಲು ತೊಡಿಕೊಂಡಿದ್ದಾರೆ. ಫಿಲ್ಮ್ ಪೋಸ್ಟರ್ ಮಾತ್ರವಲ್ಲ, ಬೇರೆ ಯಾವುದೇ ಜಾಹೀರಾತು ಅಳವಡಿಕೆ ಕಾನೂನು ಬಾಹಿರವಾಗಿದೆ. ಈ ಸಲುವಾಗಿ ಸಾರಿಗೆ ಇಲಾಖೆ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಅನಿವಾರ್ಯತೆಯಾಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.