ಬೇರೆ ರಾಜ್ಯಕ್ಕೆ ಹೋಗುತ್ತಿದ್ದೀರಾ? ಹಾಗಾದ್ರೆ, ನಿಮ್ಮ ಕಾರು-ಬೈಕ್ RC ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?
ಬೇರೆ ರಾಜ್ಯಕ್ಕೆ ಶಿಫ್ಟ್ ಆಗುತ್ತಿದ್ದೀರಾ? ಮತ್ತು ನಿಮ್ಮ ಕಾರು ಅಥವಾ ಬೈಕ್ ಅನ್ನು ಜೊತೆಗೆ ಕೊಂಡೊಯ್ಯಲು ಯೋಚಿಸುತ್ತಿದ್ದೀರಾ. ಹಾಗಾದರೆ ಈ ಮಾಹಿತಿ ನಿಮಗೆ ತುಂಬಾ ಮುಖ್ಯ; ಯಾಕಂದ್ರೆ, ಬೇರೆ ರಾಜ್ಯದ ನಂಬರ್ ಪ್ಲೇಟ್ ಇರುವ ವಾಹನವನ್ನು ನಿಯಮ ಮೀರಿ ಬಳಸಿದರೆ ದಂಡ ಬೀಳುವುದು ಖಚಿತ.

ಬೇರೆ ರಾಜ್ಯಕ್ಕೆ ಕೆಲಸ ಅಥವಾ ಇನ್ನಿತರ ವೈಯಕ್ತಿಕ ಕಾರಣಗಳಿಂದ ಶಿಫ್ಟ್ ಆಗುತ್ತಿದ್ದೀರಾ? ಹಾಗಾಗಿ, ನಿಮ್ಮ ಕಾರು ಅಥವಾ ಬೈಕ್ ಅನ್ನು ಜೊತೆಗೆ ಕೊಂಡೊಯ್ಯಲು ಯೋಚಿಸುತ್ತಿದ್ದೀರಾ.? ಹಾಗಾದರೆ ಈ ಮಾಹಿತಿ ನಿಮಗೆ ತುಂಬಾ ಮುಖ್ಯ. ಯಾಕಂದ್ರೆ, ಬೇರೆ ರಾಜ್ಯದ ನಂಬರ್ ಪ್ಲೇಟ್ ಇರುವ ವಾಹನವನ್ನು ನಿಯಮ ಮೀರಿ ಹೆಚ್ಚು ದಿನ ಬಳಸಿದರೆ ದಂಡ ಬೀಳುವುದು ಖಚಿತ.! ಹಾಗಾದರೆ ಈ ತಲೆನೋವಿನಿಂದ ಪಾರಾಗಲು ನಿಮ್ಮ ವಾಹನ ನೋಂದಣಿಯನ್ನು ವರ್ಗಾಯಿಸುವುದು ಹೇಗೆ? ಇದಕ್ಕೆ ಬೇಕಾಗುವ ಅಗತ್ಯ ದಾಖಲೆಗಳು ಮತ್ತು ಹಂತ-ಹಂತದ ಸರಳ ಪ್ರಕ್ರಿಯೆ ಇಲ್ಲಿದೆ ನೋಡಿ...
12 ತಿಂಗಳ ನಿಯಮ ನೆನಪಿಡಿ...
ಭಾರತೀಯ ಮೋಟಾರು ವಾಹನ ಕಾಯ್ದೆ ಪ್ರಕಾರ ನೀವು ಬೇರೆ ರಾಜ್ಯಕ್ಕೆ ವಾಹನ ಕೊಂಡೊಯ್ದ 11 ರಿಂದ 12 ತಿಂಗಳ ಒಳಗೆ ಆ ರಾಜ್ಯದ RTO ನಲ್ಲಿ ಮರು ನೋಂದಣಿ ಮಾಡಿಸಬೇಕು. ಒಂದು ವರ್ಷದವರೆಗೆ ನೀವು ನಿಮ್ಮ ಹಳೆಯ ನಂಬರ್ ನಲ್ಲಿಯೇ ವಾಹನ ಓಡಿಸಬಹುದು. ಆದರೆ ಅದಕ್ಕೆ ನೀವು ಯಾವಾಗ ರಾಜ್ಯಕ್ಕೆ ಬಂದಿರಿ ಎಂಬುದಕ್ಕೆ ಟೋಲ್ ಸ್ಲಿಪ್, ಪೆಟ್ರೋಲ್ ಬಿಲ್ ಅಥವಾ ಮನೆ ಬಾಡಿಗೆ ಒಪ್ಪಂದದಂತಹ ಪುರಾವೆ ಇಟ್ಟುಕೊಳ್ಳುವುದು ಒಳ್ಳೆಯದು.ಮೊದಲ ಹೆಜ್ಜೆ
NOC:
ನಿಮ್ಮ ವಾಹನವನ್ನು ಬೇರೆ ರಾಜ್ಯಕ್ಕೆ ಕೊಂಡೊಯ್ಯುವ ಮೊದಲು ನೀವು ನಿಮ್ಮ ಹಳೆಯ RTO ನಿಂದ NOC ಅಂದರೆ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಬೇಕು. ಇದಕ್ಕಾಗಿ ನೀವು ಫಾರಂ 28 ಅನ್ನು ಮೂರು ಪ್ರತಿಗಳಲ್ಲಿ ಭರ್ತಿ ಮಾಡಿ RTO ಗೆ ನೀಡಬೇಕು. ಜೊತೆಗೆ RC ಕಾರ್ಡ್, ಇನ್ಶೂರೆನ್ಸ್, PUC ಮತ್ತು ನಿಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕು. ನಿಮ್ಮ ವಾಹನದ ಮೇಲೆ ಯಾವುದೇ ಸಾಲ ಅಥವಾ ಅಪರಾಧ ಪ್ರಕರಣ ಇಲ್ಲದಿದ್ದರೆ RTO ಅಧಿಕಾರಿಗಳು NOC ನೀಡುತ್ತಾರೆ. ಈ NOC ಆರು ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
ಹೊಸ ರಾಜ್ಯದಲ್ಲಿ ಮರು ನೋಂದಣಿ ಹೇಗೆ?
NOC ಸಿಕ್ಕ ನಂತರ ನೀವು ಹೊಸ ರಾಜ್ಯದ RTO ಗೆ ಹೋಗಿ ಫಾರಂ 27 ರಲ್ಲಿ ಮರು ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಅಲ್ಲಿ ನಿಮಗೆ ಹೊಸ ರಸ್ತೆ ತೆರಿಗೆ ಕಟ್ಟಲು ಹೇಳಲಾಗುತ್ತದೆ. ಪ್ರತಿ ರಾಜ್ಯದ ರಸ್ತೆ ತೆರಿಗೆ ಬೇರೆ ಬೇರೆಯಾಗಿರುತ್ತದೆ. ತೆರಿಗೆ ಕಟ್ಟಿದ ನಂತರ RTO ಅಧಿಕಾರಿಗಳು ನಿಮ್ಮ ವಾಹನವನ್ನು ಪರಿಶೀಲಿಸಿ ಹೊಸ ನಂಬರ್ ನೀಡುತ್ತಾರೆ ಮತ್ತು ಹೊಸ RC ಕಾರ್ಡ್ ನೀಡುತ್ತಾರೆ.
ಹಳೆಯ ತೆರಿಗೆ ವಾಪಸ್ ಪಡೆಯಿರಿ:
ನೀವು ಹಳೆಯ ರಾಜ್ಯದಲ್ಲಿ ಕಟ್ಟಿದ್ದ ಜೀವಿತಾವಧಿ ರಸ್ತೆ ತೆರಿಗೆಯನ್ನು ವಾಪಸ್ ಪಡೆಯಬಹುದು. ಇದಕ್ಕಾಗಿ ಫಾರಂ DT 16 ರಲ್ಲಿ ಅರ್ಜಿ ಸಲ್ಲಿಸಿ ಹೊಸ ರಾಜ್ಯದ ತೆರಿಗೆ ಪಾವತಿ ರಸೀದಿಯನ್ನು ತೋರಿಸಬೇಕು. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಆದರೆ ಹಣ ವಾಪಸ್ ಸಿಗುತ್ತದೆ.

ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್; No Insurance, No Petrol ನಿಯಮ ಜಾರಿಗೆ ಕೇಂದ್ರಕ್ಕೆ ಸೂಚನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



