ನ್ಯಾಯಾಲಯದ ಮೂಲಕ ಜೀವನಾಂಶ ಪಡೆಯುವುದು ಸುಲಿಗೆಯಲ್ಲ: ಹೈಕೋರ್ಟ್
ಅರ್ಜಿದಾರರು 2007 ರಲ್ಲಿ ವಿವಾಹವಾಗಿದ್ದು, ಫೇಸ್‌ಬುಕ್ ಮೂಲಕ ಬಂದ ಸಂದೇಶದ ಮೂಲಕ ಇಬ್ಬರ ನಡುವಿನ ಸಂಬಂಧ ಹಾಳಾಗಿತ್ತು.

ಬೆಂಗಳೂರು: ನ್ಯಾಯಾಲಯದ ಆದೇಶದ ಮೂಲಕ ಜೀವನಾಂಶ ಪಡೆಯುವುದು ಸುಲಿಗೆಗೆ ಸಮವಲ್ಲ ಎಂದು ಹೈಕೋರ್ಟ್ ಹೇಳಿದ್ದು, ತನ್ನ ಪತ್ನಿಯ ವಿರುದ್ಧ ವ್ಯಕ್ತಿಯೊಬ್ಬ ಮಾಡಿದ್ದ ಸುಲಿಗೆ ಮತ್ತು ಇತರ ಆರೋಪಗಳನ್ನು ರದ್ದುಗೊಳಿಸಿದೆ.
2023ರಲ್ಲಿ ಮಂಗಳೂರು ಮತ್ತು ಬೆಂಗಳೂರು ಮೂಲದ ದಂಪತಿಗಳು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಬೀಠ ಪುರಸ್ಕರಿಸಿದ್ದು, ಪತ್ನಿಯೊಬ್ಬಳು ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯ ಅದನ್ನು ಪರಿಗಣಿಸಿದಾಗ ಅದು ಸುಲಿಗೆಯ ಅಪರಾಧವಾಗುವುದಿಲ್ಲ. ಇದು ಕಾನೂನು ಪ್ರಕ್ರಿಯೆಗಳಾಗಿದ್ದು, ಉನ್ನತ ನ್ಯಾಯಾಲಯವು ಅದನ್ನು ಬದಲಾಯಿಸದಿದ್ದರೆ ಅಥವಾ ಮಾರ್ಪಡಿಸದಿದ್ದರೆ ಜೀವನಾಂಶ ಪಾವತಿಸಲು ಪತಿ ಕಾನೂನುಬದ್ಧವಾಗಿ ಬದ್ಧನಾಗಿರುತ್ತಾನೆ ಎಂದು ಹೇಳಿದೆ.
ಅರ್ಜಿದಾರರು 2007 ರಲ್ಲಿ ವಿವಾಹವಾಗಿದ್ದು, ಫೇಸ್‌ಬುಕ್ ಮೂಲಕ ಬಂದ ಸಂದೇಶದ ಮೂಲಕ ಇಬ್ಬರ ನಡುವಿನ ಸಂಬಂಧ ಹಾಳಾಗಿತ್ತು. 2020ರಲ್ಲಿ ಫೇಸ್‌ಬುಕ್ ಮೂಲಕ ಸಂದೇಶವೊಂದು ಬಂದಿದ್ದು, ನಿನ್ನ ಪತ್ನಿ ಮಾಜಿ ಗೆಳೆಯನೊಂದಿಗೆ ಸಂಬಂಧ ಹೊಂದಿದ್ದಾಳೆಂದು ತಿಳಿಸಲಾಗಿದ್ದು. ಇದರಿಂದ ದಂಪತಿಗಳ ನಡುವಿನ ಸಂಬಂಧ ಹಾಳಾಗಿತ್ತು.
ಈ ನಡುವೆ ಪತ್ನಿ ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತಿತರ ಆರೋಪದ ಮೇಲೆ ದೂರು ದಾಖಲಿಸಿದ್ದಳು. ಬಳಿಕ ಪತಿ ಕೂಡ ಪತ್ನಿ ವಿರುದ್ಧ ಸುಲಿಗೆ ಆರೋಪ ಸೇರಿದಂತೆ ಇತರೆ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



