ಬೆಳ್ತಂಗಡಿ: ಯಾವ ಶೋ ರೂಂ ನಿಂದ 'ಬುರುಡೆ' ತಂದಿದ್ದೀರಿ ಅಂತಾ ಕೇಳಿದ್ರು; SIT ವಿಚಾರಣೆ ಬಳಿಕ ಹೋರಾಟಗಾರ ಗರಂ! Video
ಬುರುಡೆ ಆಗಲಿ, ಏನೇ ಆಗಲಿ ಪ್ರತಿಯೊಂದಕ್ಕೂ ಸ್ಪಷ್ಟನೆ ನೀಡಿ ಬಂದಿದ್ದೇನೆ ಎಂದು ತಿಳಿಸಿದರು.

ಬೆಳ್ತಂಗಡಿ: ಧರ್ಮಸ್ಥಳ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ನಿನ್ನೆ ವಿಶೇಷ ತನಿಖಾ ತಂಡದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, SIT ಕಚೇರಿ ಮೆಟ್ಟಿಲು ಹತ್ತುತ್ತಿದ್ದಂತೆಯೇ ಎದೆ ಢವ ಢವ ಅಂತಾ ಬಡಿಕೊಳ್ಳಲು ಪ್ರಾರಂಭಿಸಿತು. ಜಗತ್ತಿನಲ್ಲಿ ಎಷ್ಟು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳಿವೆ ಅಂತಾ ಕೇಳಿದ್ರು. ನಂತರ ಯಾವ ಯಾವ ಪಾದ್ರಿ, ಮೌಲಿ, ಶೇಠ್ ಗಳಿಂದ ದೇವಸ್ಥಾನ ಹಾಳು ಮಾಡಲು ಎಷ್ಟು ದುಡ್ಡು ಕೊಟ್ಟಿದ್ದಾರೆ ಅಂತಾ ಕೇಳಿದ್ರು. ಅದನ್ನು ಪೂರ್ತಿಯಾಗಿ ಹೇಳಿದ್ದೇನೆ ಎಂದರು.
ಯಾವ ಶೋ ರೂಂ ನಿಂದ ಬುರುಡೆ ತಂದಿದ್ದೀರಿ. ಅದಕ್ಕೆ ಯಾವ ಕಾರ್ಪರೇಟರ್ ಬಣ್ಣ ಹಚ್ಚಿದ್ರು ಅಂತಾ ಕೇಳಿದ್ರು. ಅವರ ನಂಬರ್ ಕೂಡಾ ಕೊಟ್ಟಿ ಬಂದಿದ್ದೇನೆ. ಬುರುಡೆ ಆಗಲಿ, ಏನೇ ಆಗಲಿ ಪ್ರತಿಯೊಂದಕ್ಕೂ ಸ್ಪಷ್ಟನೆ ನೀಡಿ ಬಂದಿದ್ದೇನೆ ಎಂದು ತಿಳಿಸಿದರು.
ಪ್ರಕರಣದಲ್ಲಿ ನಾವು ಯಾವುದೇ ಸುಳ್ಳು ಹೇಳಿಲ್ಲ. ಎಲ್ಲದ್ದಕ್ಕೂ ಸ್ಪಷ್ಟನೆ ನೀಡಿದ್ದೇನೆ. ಹೆಣ ಹೂತಿದ್ದ ಅಕ್ರಮ ಮತ್ತು ಧರ್ಮಸ್ಥಳ ಪಂಚಾಯತ್ ದಾಖಲೆಯಲ್ಲಿನ ಫೋರ್ಜರಿ ಕುರಿತು ದಾಖಲೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿದ್ದರೆ ತಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ.
ಈ ವಿಡಿಯೋವನ್ನು ವಕೀಲ ಜಗದೀಶ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



