ಧರ್ಮಸ್ಥಳ ಗಲಾಟೆ: ನಿನ್ನೆ ಏನಾಯ್ತು? ಎಳೆ ಎಳೆಯಾಗಿ ಬಿಚ್ಚಿಟ್ಟ Biggboss ಮಾಜಿ ಸ್ಪರ್ಧಿ ರಜತ್ ಕಿಶನ್!
ಧರ್ಮಸ್ಥಳದ ನೇತ್ರಾವತಿಯ ಪಾಂಗಳದ ಬಳಿ ಯೂಟ್ಯೂಬರ್ಸ್ ಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.

ಮಂಗಳೂರು: ಧರ್ಮಸ್ಥಳದ ನೇತ್ರಾವತಿಯ ಪಾಂಗಳದ ಬಳಿ ಯೂಟ್ಯೂಬರ್ಸ್ ಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಇನ್ನು ನಿನ್ನೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಧರ್ಮಸ್ಥಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಲ್ಲೆ ನಡೆದಿತ್ತು. ಇನ್ನು ಹಲ್ಲೆಗೆ ಸಂಬಂಧಿಸಿದಂತೆ ಮಾತನಾಡಿರುವ ರಜತ್ ನಾನು ಧರ್ಮಸ್ಥಳಕ್ಕೆ ಹೋಗಿದ್ದು, ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೇಳೋಕೆ ಮಾತ್ರ. ನಾನು ಯಾವತ್ತೂ ಧರ್ಮಸ್ಥಳದ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ನಾನು ಸೌಜನ್ಯ ಕುಟುಂಬಸ್ಥರನ್ನು ಭೇಟಿ ಮಾಡೋಕೆ ಹೋಗಿದ್ದೆ. ಈ ವೇಳೆ ಯೂಟ್ಯೂಬರ್ಸ್ ಜೊತೆ ಮಾತನಾಡುತ್ತಿದ್ದಾಗಲೇ ಅಲ್ಲಿಗೆ ಬಂದ ಗುಂಪೊಂದು ಹಲ್ಲೆ ನಡೆಯಿತು ಎಂದು ತಿಳಿಸಿದ್ದಾರೆ. ಗುಂಪು ಯೂಟ್ಯೂಬರ್ಸ್ಗೆ ಕಾಲಿನಿಂದ ಒದ್ದು, ಕೋಲಲ್ಲಿ ಮತ್ತು ಕಲ್ಲಲ್ಲಿ ಹೊಡ್ದಿದ್ದಾರೆ. 30ಕ್ಕೂ ಹೆಚ್ಚು ಜನರು ಹಲ್ಲೆ ಮಾಡಿದ್ದರಿಂದ ಏನು ಮಾಡಕ್ಕಾಗದ ಸ್ಥಿತಿಯಲ್ಲಿ ನಿಂತುಕೊಂಡಿದ್ದೇವು ಎಂದು ರಜತ್ ಕಿಶನ್ ಯೂಟ್ಯೂಬರ್ಸ್ ಮೇಲೆ ನಡೆದ ಹಲ್ಲೆ ಬಗ್ಗೆ ವಿವರಿಸಿದ್ದಾರೆ. ನನಗೆ ಈಗ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಿಶನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



