ರಾಜ್ಯ

ನಮಸ್ಕಾರ ಅಣ್ಣ.. ದಯವಿಟ್ಟು ಆಟೋ ದರ ಕಡಿಮೆ ಮಾಡಿ: ChatGPT ಬಳಸಿ ಚಾಲಕನೊಂದಿಗೆ ವಿದ್ಯಾರ್ಥಿ ಚೌಕಾಸಿ, ವಿಡಿಯೋ ವೈರಲ್..!

ಕನ್ನಡ ಗೊತ್ತಿಲ್ಲದ ಒಡಿಶಾ ಮೂಲಕ ವಿದ್ಯಾರ್ಥಿಯೊಬ್ಬ ಕನ್ನಡ ಬಾರದ ಹಿನ್ನೆಲೆಯಲ್ಲಿ ಆಟೋ ಚಾಲಕನೊಂದಿಗೆ ಚೌಕಾಸಿ ಮಾಡಲು ಚಾಟ್ ಜಿಪಿಟಿ ಬಳಸಿದ್ದಾನೆ.

ನಮಸ್ಕಾರ ಅಣ್ಣ.. ದಯವಿಟ್ಟು ಆಟೋ ದರ ಕಡಿಮೆ ಮಾಡಿ: ChatGPT ಬಳಸಿ ಚಾಲಕನೊಂದಿಗೆ ವಿದ್ಯಾರ್ಥಿ ಚೌಕಾಸಿ, ವಿಡಿಯೋ ವೈರಲ್..!
ChatGPT ನೆರವು ಪಡೆಯುತ್ತಿರುವ ವಿದ್ಯಾರ್ಥಿ.
Published On :

ಬೆಂಗಳೂರು: ಇದು ಟೆಕ್ನಾಲಜಿ ಯುಗ. ಇಲ್ಲಿ ಎಲ್ಲವೂ ಸಾಧ್ಯ. ಏನಾಗುವುದಿಲ್ಲವೆಂದು ಹೇಳುತ್ತಾರೋ ಅದನ್ನು ತಂತ್ರಜ್ಞಾನ ಮೂಲಕವಾದರೂ ಸಾಧಿಸಲು ಸಾಧ್ಯವಾಗುತ್ತಿದೆ. ಇತ್ತೀಚೆಗೆ ಅಂತೂ ತಂತ್ರಜ್ಞಾನ ಬಹಳಷ್ಟು ಪ್ರಗತಿಯಾಗುತ್ತಿದೆ. ನಾವೆಲ್ಲರೂ ಊಹೆಯೂ ಮಾಡಲಾಗದ ತಂತ್ರಜ್ಞಾನಗಳು ನಮ್ಮ ಕಣ್ಣಮುಂದೆಯೇ ಬಂದು ಟೆಕ್​ ಯುಗದಲ್ಲಿ ಸೇರಿಕೊಳ್ಳುತ್ತಿದೆ.

ಕೆಲವೊಂದು ತಂತ್ರಜ್ಞಾನಗಳು ಹೇಗೆಂದರೆ ನಮ್ಮನ್ನು ನೋಡ ನೋಡುತ್ತಲೇ ಅಚ್ಚರಿ ಪಡುವಂತೆ ಮಾಡುತ್ತೆ. ಅದೇ ರೀತಿ ತಂತ್ರಜ್ಞಾನದ ಪ್ರಗತಿಗೆ ಹೊಸ ಟೆಕ್ನಾಲಜಿಯೊಂದು ಸೇರ್ಪಡೆಯಾಗಿದೆ. ಅದೇ ಚಾಟ್​​ಜಿಪಿಟಿ. ಇತ್ತೀಚೆಗೆ ಎಐ ಆಧಾರಿತ ತಂತ್ರಜ್ಞಾನ ಭಾರೀ ಮುಂಚೂಣಿಯಲ್ಲಿದ್ದು. ಇದೇ ಸಿಸ್ಟಮ್​ ಅನ್ನು ಹೊಂದಿರುವ ಚಾಟ್​​ಜಿಪಿಟಿ ಎಂಬ ಟೆಕ್ನಾಲಜಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಕನ್ನಡ ಗೊತ್ತಿಲ್ಲದ ಒಡಿಶಾ ಮೂಲಕ ವಿದ್ಯಾರ್ಥಿಯೊಬ್ಬ ಕನ್ನಡ ಬಾರದ ಹಿನ್ನೆಲೆಯಲ್ಲಿ ಆಟೋ ಚಾಲಕನೊಂದಿಗೆ ಚೌಕಾಸಿ ಮಾಡಲು ಚಾಟ್ ಜಿಪಿಟಿ ಬಳಸಿದ್ದಾನೆ. ಈ ಮೂಲಕ ಕೊನೆಗೂ ಚಾಲಕನನ್ನು ಒಪ್ಪಿಸಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ...?

ಒಡಿಶಾದ ರೂರ್ಕೆಲಾದ ವಿದ್ಯಾರ್ಥಿ ಸಜನ್ ಮಹ್ತೋಆಟೋ ಚಾಲಕನೊಂದಿಗೆ ದರವನ್ನು ಚರ್ಚಿಸಲು ಚಾಟ್‌ಜಿಪಿಟಿ ಸಹಾಯ ಪಡೆಯುವುದು ಹೇಗೆ ಎಂಬುದರ ಕುರಿತ ವಿಡಿಯೋ ಇದಾಗಿದೆ.

ವಿದ್ಯಾರ್ಥಿ ಹೇಳಿದ ಸ್ಥಳ ತಲುಪಲು ಚಾಲಕ 200 ರೂಪಾಯಿ ಕೇಳುತ್ತಾನೆ. ಆದರೆ ವಿದ್ಯಾರ್ಥಿ 100 ರೂಪಾಯಿಗೆ ಇಳಿಸಲು ಚಾಟ್‌ಜಿಪಿಟಿಯ ಸಹಾಯ ಪಡೆಯುತ್ತಾನೆ.

ವಿದ್ಯಾರ್ಥಿ ಚಾಟ್ ಜಿಇಟಿ ಬಳಸಿ ಆಟೋ ದರವನ್ನು ಹೇಗೆ ಕಡಿಮೆ ಮಾಡಬಹುದು ಎಂದು ತೋರಿಸಿದ್ದಾರೆ. ವಿಡಿಯೋದಲ್ಲಿ, ವಿದ್ಯಾರ್ಥಿ ಚಾಟ್ ಜಿಪಿಟಿಗೆ ಸಹಾಯ ಮಾಡುವಂತೆ ಕೇಳುತ್ತಾರೆ. "Hi ChatGPT, ಬೆಂಗಳೂರಿನಲ್ಲಿ ಆಟೋ ಡ್ರೈವರ್ ಜೊತೆ ಮಾತನಾಡಲು ಸಹಾಯ ಮಾಡಿ. ಆಟೋ ಡ್ರೈವರ್ 200 ರೂಪಾಯಿ ಕೇಳುತ್ತಿದ್ದಾರೆ. ನಾನು ವಿದ್ಯಾರ್ಥಿ. ದಯವಿಟ್ಟು 100 ರೂಪಾಯಿಗೆ ಚರ್ಚಿಸಿ" ಎಂದು ಕೇಳುತ್ತಾರೆ.

ಚಾಟ್ ಜಿಪಿಟಿ ತಕ್ಷಣವೇ ಕನ್ನಡದಲ್ಲಿ ಮಾತನಾಡಲು ಶುರು ಮಾಡುತ್ತದೆ. "ಅಣ್ಣಾ, ನಾನು ಪ್ರತಿದಿನ ಈ ದಾರಿಯಲ್ಲಿ ಹೋಗುತ್ತೇನೆ. ನಾನು ವಿದ್ಯಾರ್ಥಿ. ದಯವಿಟ್ಟು 100 ರೂಪಾಯಿ ಮಾಡಿಕೊಳ್ಳಿ ಎಂದು ಹೇಳುತ್ತದೆ.

ಮೊದಲು 200 ರೂಪಾಯಿ ಕೇಳಿದ ಆಟೋ ಚಾಲಕ, ಕೊನೆಗೆ 120 ರೂಪಾಯಿಗೆ ಬರಲು ಒಪ್ಪುತ್ತಾನೆ. ನಾನು 200 ರೂಪಾಯಿ ಹೇಳಿದ್ದೆ. ಅದು 150 ರೂಪಾಯಿಗೆ ಇಳಿಯಿತು. ನೀವು ಕೇಳಿದ್ದರಿಂದ, ಇನ್ನೊಂದು 30 ರೂಪಾಯಿ ಕಡಿಮೆ ಮಾಡಿ 120 ರೂಪಾಯಿಗೆ ನಿಲ್ಲಿಸಿದೆ. ಅದಕ್ಕಿಂತ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಆಟೋ ಚಾಲಕ ಹೇಳುತ್ತಾನೆ. ಇದಕ್ಕೆ ಒಪ್ಪಿಗೆ ಸೂಚಿಸಿದ ವಿದ್ಯಾರ್ಥಿ ಆಟೋ ಹತ್ತುತ್ತಾರೆ.

ಈ ವಿಡಿಯೋವನ್ನು ನಾಲ್ಕು ದಿನಗಳ ಹಿಂದೆ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಶಿಕ್ಷಣದ ಉದ್ದೇಶಕ್ಕಾಗಿ ವಿಡಿಯೋವನ್ನು ಮಾಡಲಾಗಿದೆ ಎಂದು ವಿದ್ಯಾರ್ಥಿ ಹೇಳಿದ್ದಾರೆ.

ಇದು ChatGPTಯನ್ನು ದಿನನಿತ್ಯದ ಜೀವನದಲ್ಲಿ ಹೇಗೆ ಬಳಸಬಹುದು ಎಂದು ತೋರಿಸುವ ಪ್ರಯತ್ನ. ಯಾವುದೇ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ. ಇದು ಕೇವಲ ಶಿಕ್ಷಣಕ್ಕಾಗಿ ಮಾತ್ರ. ಇದು ಒಂದು ನಾಟಕ, ನಿಜವಾದ ಆಟೋ ಚಾಲಕನಲ್ಲ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.