ಮಂಗಳೂರು: ತಣ್ಣೀರಬಾವಿ ಬೀಚ್ ಬಳಿ ಪ್ರಯಾಣಿಕರ ಹತ್ತಿಸಿಕೊಂಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ
ಮಂಗಳೂರಿನಲ್ಲಿ ಗುರುವಾರದಂದು ತಣ್ಣೀರಬಾವಿ ಬೀಚ್ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಆಟೋ ಚಾಲಕನ ಮೇಲೆ ಕೆಲವು ಆಟೋ ರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದಾರೆ.

ಮಂಗಳೂರು: ಮಂಗಳೂರಿನಲ್ಲಿ ಗುರುವಾರದಂದು ತಣ್ಣೀರಬಾವಿ ಬೀಚ್ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಆಟೋ ಚಾಲಕನ ಮೇಲೆ ಕೆಲವು ಆಟೋ ರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದಾರೆ.
ಮೊಹಮ್ಮದ್ ಅರಾಫತ್ ಹಲ್ಲೆಗೊಳಗಾದ ಆಟೋ ಚಾಲಕನಾಗಿದ್ದು, ಈ ಬಗ್ಗೆ ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು, 'ಅರಾಫತ್ ಕೆಲವು ಪ್ರಯಾಣಿಕರನ್ನು ಬೀಚ್ ಬಳಿ ಇಳಿಸಲು ಹೋದಾಗ ಈ ಘಟನೆ ನಡೆದಿದೆ.
ಅವರು ಪ್ರಯಾಣಿಕರನ್ನು ಇಳಿಸಿ ಹಿಂತಿರುಗುತ್ತಿದ್ದಾಗ, ಅಲ್ಲಿದ್ದ ಇತರೆ ಆಟೋ ಚಾಲಕರು ರಿಕ್ಷಾ ಚಾಲಕರು ವಿರೋಧಿಸಿ ಗಲಾಟೆ ಮಾಡಿದದರು ಎಂದು ಹೇಳಿದ್ದಾರೆ.
ಆದರೆ ಈ ವೇಳೆ ಸ್ಥಳೀಯ ಆಟೊ ಚಾಲಕರು ಅರಾಫತ್‌ನನ್ನು ಸಮಾಧಾನಪಡಿಸಿದ್ದಾರೆ. ಆ ಬಳಿಕವೂ ಅರಾಫತ್ ಸ್ಥಳದಲ್ಲಿ ಪ್ರಯಾಣಿಕರಿಗಾಗಿ ದೀರ್ಘಕಾಲ ಕಾಯುತ್ತಿದ್ದರು. ಇದರಿಂದ ವಾಗ್ವಾದ ನಡೆದು ಸ್ಥಳೀಯ ಮೂವರು ಆಟೋ ಚಾಲಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



