ರಾಜ್ಯ

ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ಆಟೋ ಚಾಲಕನ ಮೇಲೆ ಯುವತಿ ಹಲ್ಲೆ, ರಂಪಾಟ!

ನಗರ ಜೀವನಶೈಲಿ ಅನುಕರಣೆ, ಆಧುನಿಕತೆಗೆ ಮಾರುಹೋಗಿ ಯುವತಿಯರು ಮದ್ಯಪಾನ, ಡ್ರಗ್ಸ್ ಚಟಗಳಿಗೆ ಬಲಿಯಾಗುತ್ತಿರುವುದು ಸಾಮಾನ್ಯವಾಗಿದೆ. ಯುವತಿಯರು ಮದ್ಯಪಾನ ಮಾಡಿ ಸಾರ್ವಜನಿಕವಾಗಿ ಕಿರಿಕ್ ಮಾಡಿಕೊಳ್ಳುವ ಅನೇಕ ಘಟನೆಗಳು ನಡೆಯುತ್ತವೆ.

ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ಆಟೋ ಚಾಲಕನ ಮೇಲೆ ಯುವತಿ ಹಲ್ಲೆ, ರಂಪಾಟ!
ಆಟೋ ಚಾಲಕನ ಮೇಲೆ ಯುವತಿ ಮತ್ತು ಆಕೆಯ ಗೆಳೆಯನ ಹಲ್ಲೆ
Published On :

ಬೆಂಗಳೂರು: ನಗರ ಜೀವನಶೈಲಿ ಅನುಕರಣೆ, ಆಧುನಿಕತೆಗೆ ಮಾರುಹೋಗಿ ಯುವತಿಯರು ಮದ್ಯಪಾನ, ಡ್ರಗ್ಸ್ ಚಟಗಳಿಗೆ ಬಲಿಯಾಗುತ್ತಿರುವುದು ಸಾಮಾನ್ಯವಾಗಿದೆ. ಯುವತಿಯರು ಮದ್ಯಪಾನ ಮಾಡಿ ಸಾರ್ವಜನಿಕವಾಗಿ ಕಿರಿಕ್ ಮಾಡಿಕೊಳ್ಳುವ ಅನೇಕ ಘಟನೆಗಳು ನಡೆಯುತ್ತವೆ.

ಕಳೆದ ರಾತ್ರಿ ಬೆಂಗಳೂರಿನ ಸಂಜಯನಗರ ವ್ಯಾಪ್ತಿಯಲ್ಲಿ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದನ್ನು ಪ್ರಶ್ನೆ ಮಾಡಿದ ಆಟೋ ಚಾಲಕನಿಗೆ ಯುವತಿ ಮತ್ತು ಆಕೆಯ ಜೊತೆಯಲ್ಲಿದ್ದ ಗೆಳೆಯ ಹಲ್ಲೆ ನಡೆಸಿದ ಘಟನೆ ನಡೆದಿದೆ. ಯುವತಿ ಆಟೋ ಚಾಲಕನ ಮೈ-ಕೈ ಪರಚಿ ಗಾಯಗೊಳಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಗಿದ್ದೇನು: ಕಳೆದ ತಡರಾತ್ರಿ ಬೆಂಗಳೂರಿನ ಸಂಜಯನಗರ ಹತ್ತಿರ ಕಂಠಪೂರ್ತಿ ಕುಡಿದು ಯುವತಿಯೋರ್ವಳು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದಳು. ಆಟೋ ಚಾಲಕ ನಿಶಾಂತ್ ಎಂಬುವವರು ಅಡ್ಡಾದಿಡ್ಡಿ ವಾಹನ ಚಾಲನೆ ಬಗ್ಗೆ ಪ್ರಶ್ನಿಸಿದಕ್ಕೆ ಯುವತಿ ಹಾಗೂ ಯುವತಿ ಜೊತೆಯಿದ್ದ ಯುವಕ ಇಬ್ಬರೂ ಕಾರು ನಿಲ್ಲಿಸಿ ಕೆಳಗಿಳಿದು ಆಟೋ ಚಾಲಕನ ಜೊತೆ ಗಲಾಟೆಗೆ ಇಳಿದಿದ್ದಾರೆ.

ಯುವತಿ ಮತ್ತು ಆಕೆಯ ಗೆಳಯ ಆಟೋ ಚಾಲಕ ನಿಶಾಂತ್ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.