ಸ್ಕೂಟರ್ ಓಡಿಸುತ್ತಲೇ ಮೀಟಿಂಗ್ ನಲ್ಲಿ ಭಾಗಿ: ಬೆಂಗಳೂರು ವ್ಯಕ್ತಿಯ ವಿಡಿಯೋ ವೈರಲ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಯಾವ ಮಟ್ಟಿಗೆ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿ ಎಂಬಂತಿದ್ದು, ವ್ಯಕ್ತಿಯೋರ್ವ ತನ್ನ ಸ್ಕೂಟರ್ ಓಡಿಸುತ್ತಲೇ ಲ್ಯಾಪ್ ಟಾಪ್ ನಲ್ಲಿ ಕಚೇರಿ ಮೀಟಿಂಗ್ ಪಾಲ್ಗೊಂಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಯಾವ ಮಟ್ಟಿಗೆ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿ ಎಂಬಂತಿದ್ದು, ವ್ಯಕ್ತಿಯೋರ್ವ ತನ್ನ ಸ್ಕೂಟರ್ ಓಡಿಸುತ್ತಲೇ ಲ್ಯಾಪ್ ಟಾಪ್ ನಲ್ಲಿ ಕಚೇರಿ ಮೀಟಿಂಗ್ ಪಾಲ್ಗೊಂಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಪೀಕ್ ಬೆಂಗಳೂರು ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ವ್ಯಕ್ತಿಯೋರ್ವ ತನ್ನ ಸ್ಕೂಟರ್ ಚಲಾಯಿಸುತ್ತಲೇ ಲ್ಯಾಪ್ ಟಾಪ್ ಅನ್ನು ಓಪನ್ ಮಾಡಿ ಕೆಳಗಿಟ್ಟುಕೊಂಡು ಕಚೇರಿ ಮೀಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಸುಮಾರು 11 ಸೆಕೆಂಡುಗಳ ಚಿಕ್ಕ ವಿಡಿಯೋ ತುಣುಕು ವ್ಯಾಪಕ ವೈರಲ್ ಆಗುತ್ತಿದೆ.
ಅಪರಿಚಿತ ವ್ಯಕ್ತಿಯು ಸ್ಕೂಟರ್ ಚಲಾಯಿಸುತ್ತಿರುವಾಗಲೇ ತನ್ನ ತೊಡೆಯ ಮೇಲೆ ಲ್ಯಾಪ್ಟಾಪ್ ಇಟ್ಟುಕೊಂಡು ಕಚೇರಿ ಮೀಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಟ್ವೀಟ್ ನಲ್ಲಿ ಅದು ಮೈಕ್ರೋಸಾಫ್ಟ್ ಟೀಂ ಮೀಟಿಂಗ್ ಎಂಬಂತೆ ಭಾಸವಾಗುತ್ತಿದೆ ಎಂದು ಹೇಳಲಾಗಿದೆ.
ಅಂತೆಯೇ ಇದು ಸಂಸ್ಥೆಯ ಉತ್ಪಾದಕತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳವನ್ನು ಹೆಚ್ಚಿಸುತ್ತಿದ್ದು, ಜೊತೆಗೆ ಜವಾಬ್ದಾರಿಯುತ ಕೆಲಸದ ಅಭ್ಯಾಸಗಳು ಮತ್ತು ಸುರಕ್ಷಿತ ಪ್ರಯಾಣದ ಅಭ್ಯಾಸಗಳ ಬಗ್ಗೆ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ವೀಡಿಯೋ ಜೊತೆಗೆ, "ಬೆಂಗಳೂರು ಬಿಗಿನರ್ಸ್ ಗೆ (ಆರಂಭಿಕರಿಗೆ) ಅಲ್ಲ" ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದ್ದು, ನೆಟಿಜನ್ಗಳು ಈ ವ್ಯಕ್ತಿಯ ಸಾಹಸದ ಕುರಿತು ಪರ-ವಿರೋಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಈ ಹಿಂದೆ ಇಂಟರ್ನೆಟ್ ಬಳಕೆದಾರ KP ಎಂಬುವವರು ಇಂತಹುದೇ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅಲ್ಲಿ ಬೆಂಗಳೂರಿನ ಸ್ವಾಗತ್ ಓನಿಕ್ಸ್ (Swagath Onyx Theatre) ಥಿಯೇಟರ್ನಲ್ಲಿ ಒಬ್ಬ ವ್ಯಕ್ತಿ ತನ್ನ ಲ್ಯಾಪ್ಟಾಪ್ನಲ್ಲಿ ಕುಳಿತು ಕೆಲಸ ಮಾಡುತ್ತಿರುವುದೂ ಕೂಡ ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



