ರಾಜ್ಯ

ನಾಯಿ ಮಾಂಸ ರವಾನೆ ಪ್ರಕರಣ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ, ಪುನೀತ್​ ಕೆರೆಹಳ್ಳಿ 14 ದಿನ ನ್ಯಾಯಾಂಗ ವಶಕ್ಕೆ!

ಹಿಂದೂ ಸಂಘಟನೆ ಮುಖಂಡ ಪುನೀತ್​ ಕೆರೆಹಳ್ಳಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ (Judicial custody) ನೀಡಿ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್​ನ ನ್ಯಾಯಾಧೀಶರಿಂದ ಆದೇಶ ಹೊರಡಿಸಿದೆ. ಇಂದು ಎನ್​​ಜಿವಿಯಲ್ಲಿರುವ ನಿವಾಸದಲ್ಲಿ ಜಡ್ಜ್ ಮುಂದೆ​ ಪೊಲೀಸರು ಹಾಜರುಪಡಿಸಿದ್ದರು.

ನಾಯಿ ಮಾಂಸ ರವಾನೆ ಪ್ರಕರಣ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ, ಪುನೀತ್​ ಕೆರೆಹಳ್ಳಿ 14 ದಿನ ನ್ಯಾಯಾಂಗ ವಶಕ್ಕೆ!
ಪುನೀತ್ ಕೆರೆಹಳ್ಳಿ
Published On :

ಬೆಂಗಳೂರು: ನಾಯಿ ಮಾಂಸ ರವಾನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಬಂಧನಕ್ಕೀಡಾಗಿರುವ ಹಿಂದೂ ಸಂಘಟನೆ ಮುಖಂಡ ಪುನೀತ್​ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಹಿಂದೂ ಸಂಘಟನೆ ಮುಖಂಡ ಪುನೀತ್​ ಕೆರೆಹಳ್ಳಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ (Judicial custody) ನೀಡಿ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್​ನ ನ್ಯಾಯಾಧೀಶರಿಂದ ಆದೇಶ ಹೊರಡಿಸಿದೆ. ಇಂದು ಎನ್​​ಜಿವಿಯಲ್ಲಿರುವ ನಿವಾಸದಲ್ಲಿ ಜಡ್ಜ್ ಮುಂದೆ​ ಪೊಲೀಸರು ಹಾಜರುಪಡಿಸಿದ್ದರು. ಸೋಮವಾರ ಜಾಮೀನು ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪುನೀತ್ ಕೆರೆಹಳ್ಳಿ ಪರ ವಕೀಲ ಉಮಾಶಂಕರ್ ಅವರು, ''ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ಕಾಟನ್ ಪೇಟೆ ಪೊಲೀಸರು ಪುನೀತ್ ಬಂಧಿಸಿದ್ದರು. ಈಗ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ಸೋಮವಾರ ವಿಚಾರಣೆಗೆ ಬರಲಿದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಬೆಂಗಳೂರಿನಲ್ಲಿ ಕುರಿ-ಮೇಕೆ ಮಾಂಸದೊಂದಿಗೆ ನಾಯಿ ಮಾಂಸ ರವಾನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಜೈಪುರದಿಂದ ಬಂದಿದ್ದ ಲೋಡ್​ಗಟ್ಟಲೇ ಬಾಕ್ಸ್​ಗಳು ಶುಕ್ರವಾರ ಮೆಜೆಸ್ಟಿಕ್​ನಲ್ಲಿ ಅನ್​ಲೋಡ್ ಆಗ್ತಿದ್ದಂತೆ ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಬಾಕ್ಸ್​ಗಳಲ್ಲಿ ಇರುವುದು ನಾಯಿ ಮಾಂಸ. ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನೂ ಮಿಕ್ಸ್ ಮಾಡಿದ್ದಾರೆ ಅಂತ ಆರೋಪಿಸಿ, ಹೈಡ್ರಾಮಾ ಮಾಡಿದ್ದರು.

ಈ ವೇಳೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹಾಗೂ ಪುನೀತ್ ಕೆರೆಹಳ್ಳಿ ನಡುವೆ ವಾಗ್ವಾದವೂ ನಡೆದಿತ್ತು. ಇದೇ ಪ್ರಕರಣ ಇದೀಗ ಪೊಲೀಸ್ ಠಾಣೆ ಹಾಗೂ ಆಹಾರ ಇಲಾಖೆಯ ಮೆಟ್ಟಿಲೇರಿದೆ. ರಸ್ತೆಯಲ್ಲಿ ಗಲಾಟೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ 2ಕೇಸ್ ಜಡಿದು ಅರೆಸ್ಟ್ ಮಾಡಿದ್ದರು. ಜೈಪುರದಿಂದ ಬಂದ ಬಾಕ್ಸ್​ಗಳ ಮೇಲೂ FIR ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.