KSR railway station

ನಾಯಿ ಮಾಂಸ ರವಾನೆ ಪ್ರಕರಣ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ, ಪುನೀತ್ ಕೆರೆಹಳ್ಳಿ 14 ದಿನ ನ್ಯಾಯಾಂಗ ವಶಕ್ಕೆ!
ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ (Judicial custody) ನೀಡಿ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್ನ ನ್ಯಾಯಾಧೀಶರಿಂದ ಆದೇಶ ಹೊರಡಿಸಿದೆ. ಇಂದು ಎನ್ಜಿವಿಯಲ್ಲಿರುವ ನಿವಾಸದಲ್ಲಿ ಜಡ್ಜ್ ಮುಂದೆ ಪೊಲೀಸರು ಹಾಜರುಪಡಿಸಿದ್ದರು.

ನಾಯಿ ಮಾಂಸ ರವಾನೆ ಆರೋಪ: ರೈಲ್ವೇ ನಿಲ್ದಾಣದಲ್ಲಿ ಹೈಡ್ರಾಮಾ; ಪುನೀತ್ ಕೆರೆಹಳ್ಳಿ-ಅಬ್ದುಲ್ ರಜಾಕ್ ವಾಕ್ಸಮರ, ಅಧಿಕಾರಿಗಳು ದೌಡು!
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜಾಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ದಾಳಿ ಮಾಡಿ ಮಟನ್ ಮಾಂಸವನ್ನು ಎತ್ತಿ ನೋಡಿದ್ದಾರೆ.

ಬೆಂಗಳೂರು: KSR ರೈಲು ನಿಲ್ದಾಣದಲ್ಲಿ ಬಿಬಿಎಂಪಿ ಗುತ್ತಿಗೆದಾರರಿಂದ ತ್ಯಾಜ್ಯ ವಿಲೇವಾರಿ; ಓಡಾಟಕ್ಕೆ ತೊಂದರೆ!
ಪ್ರವೇಶ ದ್ವಾರದಲ್ಲಿ ಬಿಬಿಎಂಪಿ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಗೊಂದಲವನ್ನು ಹೆಚ್ಚಿಸಿದೆ. ಪ್ರವೇಶದ್ವಾರವು ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನಿಶ್ಚಿತತೆಯನ್ನು ಉಂಟುಮಾಡುತ್ತಿದೆ.

ಕೆಎಸ್‌ಆರ್ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಂದ 36 ಕೆಜಿ ಗಾಂಜಾ ವಶ!
ಕೆಎಸ್‌ಆರ್ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರಿಂದ ರೂ.36,30,000 ಮೌಲ್ಯದ 36 ಕೆಜಿ ಗಾಂಜಾವನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಟೆಕ್ಕಿ ಮೇಲೆ ಹಲ್ಲೆ ನಡೆಸಿದ ಟಿಕೆಟ್ ಪರೀಕ್ಷಕ ಅಧಿಕಾರಿ
ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ರೈಲ್ವೆ ಟೆಕೆಟ್ ಪರೀಕ್ಷಕನನ್ನು ಸೇವೆಯಿಂದ ವಜಾಗೊಳಿಸಿರುವ ಬೆನ್ನಲ್ಲೇ, ಐಟಿ ವೃತ್ತಿಪರರನ್ನು ಅವಮಾನಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಜಿಆರ್ ಪಿ ಕ್ಷಿಪ್ರ ಕಾರ್ಯಾಚರಣೆ: ರೈಲ್ವೆ ನಿಲ್ದಾಣದಲ್ಲಿ ಮರೆತಿದ್ದ ದಂಪತಿಗಳಿಗೆ ಮರಳಿ ಸಿಕ್ಕಿತು 13 ಲಕ್ಷ ರೂ. ಮೌಲ್ಯದ ವಸ್ತುಗಳು!
ಬೆಂಗಳೂರಿನಿಂದ ಚೆನ್ನೈ ಗೆ ತೆರಳುತ್ತಿದ್ದ ದಂಪತಿ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ವಜ್ರದ ಆಭರಣ, ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಮರೆತು ಬಿಟ್ಟು ಹೋಗಿದ್ದರು.

ಸುಸೈಡ್ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೊ ಮಾಡಿದ್ದ ಹುಡುಗನನ್ನು ರಕ್ಷಿಸಿದ ರೈಲ್ವೇ ಪೊಲೀಸ್ ಪಡೆ
ಹುಡುಗ ದೆಹಲಿ ರೈಲಿನಲ್ಲಿ ಕುಳಿತುಕೊಂಡು ಅಳುತ್ತಿದ್ದ. ರೈಲು ಇನ್ನೇನು ಹೊರಡುವುದರಲ್ಲಿತ್ತು. ಪೊಲೀಸರು ಸ್ವಲ್ಪ ತಡ ಮಾಡಿದರೂ ಹುಡುಗ ಮತ್ತೆ ಸಿಗುತ್ತಿರಲಿಲ್ಲ.

ದೇಶದಲ್ಲೇ ಮೊದಲು: ಬೆಂಗಳೂರಿನ ಕೆ.ಎಸ್.ಆರ್ ರೈಲು ನಿಲ್ದಾಣದಲ್ಲಿ ಹೈಟೆಕ್ ಭದ್ರತೆ ಒದಗಿಸುವ ವಿಡಿಯೋ ವಾಲ್
ತಪಾಸಣಾ ಸಿಬ್ಬಂದಿಯ ಕಣ್ತಪ್ಪಿಸಿ ಸ್ಕ್ಯಾನರ್ ಒಳಗಿಂದ ಅಪಾಯಕಾರಿ ಶಸ್ತ್ರಾಸ್ತ್ರ ಹಾದು ನಿಲ್ದಾಣದೊಳಕ್ಕೆ ಪ್ರವೇಶಿಸಿದರೂ ನೂತನ ವಿಡಿಯೊ ವಾಲ್ ತಂತ್ರಜ್ಞಾನದಿಂದ ಅದನ್ನು ಪತ್ತೆಹಚ್ಚಬಹುದಾಗಿದೆ.

ದೇಶದಲ್ಲೇ ಪ್ರಥಮ: ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಫೇಷಿಯಲ್ ರೆಕಾಗ್ನಿಷನ್ ವ್ಯವಸ್ಥೆ; 47 ಮಂದಿ ರೌಡಿ ಶೀಟರ್ ಗಳ ಪತ್ತೆ
ಫೇಷಿಯಲ್ ರೆಕಾಗ್ನಿಷನ್ ವ್ಯವಸ್ಥೆ ಅಳವಡಿಕೆಯಾದ ದಿನದಿಂದ ಇದುವರೆಗೂ 47 ಮಂದಿ ರೌಡಿ ಶೀಟರ್ ಗಳನ್ನು ರೈಲು ನಿಲ್ದಾಣದ ಆವರಣದಲ್ಲಿ ಪತ್ತೆ ಹಚ್ಚಲಾಗಿದೆ ಎನ್ನುವುದು ಗಮನಾರ್ಹ.

