ರಾಜ್ಯ

ಈ ನಗರದಲ್ಲಿ ನಾನ್ ವೆಜ್ ಬ್ಯಾನ್! ಆ ಒಂದು ದಿನ ಚಿಕನ್, ಮಟನ್ ಎಲ್ಲೂ ಸಿಗಲ್ಲ; ಪಾಲಿಕೆಯಿಂದ ಕಟ್ಟುನಿಟ್ಟಿನ ಆದೇಶ

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 14ರಂದು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಈ ನಗರದಲ್ಲಿ ನಾನ್ ವೆಜ್ ಬ್ಯಾನ್! ಆ ಒಂದು ದಿನ ಚಿಕನ್, ಮಟನ್ ಎಲ್ಲೂ ಸಿಗಲ್ಲ; ಪಾಲಿಕೆಯಿಂದ ಕಟ್ಟುನಿಟ್ಟಿನ ಆದೇಶ
ನಾನ್ ವೆಜ್ ಬ್ಯಾನ್ — Online Desk
Published On :

ಮೈಸೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ (MCC) ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 14ರಂದು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ನಗರದಾದ್ಯಂತ ಶಾಂತಿ, ಸೌಹಾರ್ದತೆ ಮತ್ತು ಧಾರ್ಮಿಕ ಆಚರಣೆಯ ಪವಿತ್ರತೆಯನ್ನು ಕಾಪಾಡುವ ಉದ್ದೇಶದಿಂದ ಪಾಲಿಕೆ ಈ ಕಟ್ಟುನಿಟ್ಟಿನ ಆದೇಶ ಹೊರಡಿಸಿದು, ಆ ಕುರಿತ ವರದಿ ಇಲ್ಲಿದೆ:

ಹೋಟೆಲ್‌ಗಳಲ್ಲೂ ನೋ ನಾನ್ ವೆಜ್!

ಸೆಪ್ಟೆಂಬರ್ 14ರಂದು ಮೈಸೂರು ನಗರದ ಎಲ್ಲ ರೀತಿಯ ಮಾಂಸದ ಅಂಗಡಿಗಳು, ಮಟನ್ ಹಾಗೂ ಚಿಕನ್ ಸ್ಟಾಲ್‌ಗಳು, ಮೀನು ಮಾರಾಟ ಕೇಂದ್ರಗಳು ಮತ್ತು ಪ್ರಾಣಿವಧೆ ಗೃಹಗಳನ್ನು ಕಡ್ಡಾಯವಾಗಿ ಮುಚ್ಚಬೇಕಾಗುತ್ತದೆ. ಇದರೊಂದಿಗೆ, ಪಾಲಿಕೆ ವ್ಯಾಪ್ತಿಯ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲೂ ಅಂದು ಯಾವುದೇ ರೀತಿಯ ಮಾಂಸದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವಂತಿಲ್ಲ ಹಾಗೂ ಗ್ರಾಹಕರಿಗೆ ಉಣಬಡಿಸುವಂತಿಲ್ಲ.

ಅಕಸ್ಮಾತ್, ಈ ಆದೇಶವನ್ನು ಉಲ್ಲಂಘಿಸಿ ಕದ್ದುಮುಚ್ಚಿ ಮಾಂಸ ಮಾರಾಟ ಮಾಡುವುದು ಅಥವಾ ಸಾಗಾಟ ಮಾಡುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಪಾಲಿಕೆಯ ನಿಯಮಾವಳಿಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಮತ್ತು ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ, ಇದು ಕೇವಲ ಹಬ್ಬದ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುವ ನಿಯಮಿತ ನಿರ್ಬಂಧವಾಗಿದ್ದು, ಮರುದಿನದಿಂದ ಎಂದಿನಂತೆ ಮಾಂಸ ಮಾರಾಟಕ್ಕೆ ಅವಕಾಶವಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.