ಬೆಂಗಳೂರಿನಲ್ಲೂ 'ಷಟಲ್ ಬಸ್ ಸೇವೆ' ಆರಂಭಿಸಲು Uber ಮುಂದು!
ಟ್ರಾಫಿಕ್ ಕಿರಿಕಿರಿಯಿಂದ ಬಸವಳಿದಿರುವ ಟೆಕ್ಕಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾರಂಭಿಕ ಹಂತದಲ್ಲಿ ಔಟರ್ ರಿಂಗ್ ರಸ್ತೆ ಟೆಕ್ ಕಾರಿಡಾರ್‌ನಲ್ಲಿ 200 ಹವಾನಿಯಂತ್ರಿತ ಬಸ್‌ಗಳನ್ನು ಓಡಿಸಲು ಉಬರ್ ಚಿಂತನೆ ನಡೆಸುತ್ತಿದೆ.

ಬೆಂಗಳೂರು: ದೆಹಲಿ, ಕೊಲ್ಕತ್ತಾ, ಹೈದರಾಬಾದ್ ಮತ್ತು ಮುಂಬೈನಂತಹ ಮಹಾನಗರಗಳಲ್ಲಿ ಉಬರ್ ಷಟಲ್ ಬಸ್” (Uber Shuttle) ಸೇವೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸೇವೆಯನ್ನು ಪರಿಚಯಿಸಲು ಉಬರ್ ಮುಂದಾಗಿದೆ. ಇದಕ್ಕಾಗಿ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.
ಟ್ರಾಫಿಕ್ ಕಿರಿಕಿರಿಯಿಂದ ಬಸವಳಿದಿರುವ ಟೆಕ್ಕಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾರಂಭಿಕ ಹಂತದಲ್ಲಿ ಔಟರ್ ರಿಂಗ್ ರಸ್ತೆ ಟೆಕ್ ಕಾರಿಡಾರ್‌ನಲ್ಲಿ 200 ಹವಾನಿಯಂತ್ರಿತ ಬಸ್‌ಗಳನ್ನು ಓಡಿಸಲು ಉಬರ್ ಚಿಂತನೆ ನಡೆಸುತ್ತಿದೆ.
ಪ್ರಸ್ತಾವಿತ ಸೇವೆಯು 2-3 ನಿಮಿಷಗಳ ಮಧ್ಯಂತರದಲ್ಲಿ ಚಲಿಸುತ್ತದೆ, ಪ್ರಯಾಣಿಕರಿಗೆ ಆಸನಗಳನ್ನು ಮುಂಗಡ ಕಾಯ್ದಿರಿಸುವ, ಗೊತ್ತುಪಡಿಸಿದ ಸ್ಥಳಗಳಿಂದ ಪಿಕಪ್ ಮತ್ತು ಗಮ್ಯಸ್ಥಾನಗಳಿಗೆ ತಲುಪಿಸುವ ಕೆಲಸ ಮಾಡಲಿದೆ ಎಂದು ಉಬರ್ ಮಾಹಿತಿ ನೀಡಿದೆ.
ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಪ್ರಾದೇಶಿಕ ವ್ಯಾಪಾರ ಕಾರ್ಯಾಚರಣೆಗಳ ಮುಖ್ಯಸ್ಥ ಅಭಿಷೇಕ್ ಪಾಧ್ಯೆ ಮಾತನಾಡಿ, ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಶಟಲ್ ಬಸ್ ಸೇವೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲೇ ಬೆಂಗಳೂರಿನಲ್ಲೂ ಈ ಸೇವೆ ಪ್ರಾರಂಭವಾಗಲಿದೆ. ಸರ್ಕಾರದಿಂದ ಅನುಮೋದನೆ ಸಿಗುವ ವಿಶ್ವಾಸವಿದ್ದು, ಆ ಮೂಲಕ ನಗರದ ಸಂಚಾರ ದಟ್ಟಣೆ ಪರಿಹರಿಸುವಲ್ಲಿ ಉಬರ್ ಕೂಡ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
ಔಟರ್ ರಿಂಗ್ ರೋಡ್ ನಲ್ಲಿ ಹಲವು ಐಟಿ ಕಂಪನಿಗಳಿದ್ದು, ಲಕ್ಷಾಂತರ ಐಟಿ ಉದ್ಯೋಗಿಗಳು ನೆಲೆಯೂರಿದ್ದಾರೆ. ಬೆಂಗಳೂರಿನ ದಟ್ಟಣೆ ಸಮಸ್ಯೆ ದೆಹಲಿ ಮತ್ತು ಕೋಲ್ಕತ್ತಾಕ್ಕಿಂತ ಹೆಚ್ಚಾಗಿದೆ. ಟೆಕ್ ಪಾರ್ಕ್ ಗಳಲ್ಲಿ ಈ ಸೇವೆ ಹೊಂದಿಕೊಳ್ಳುತ್ತದೆ. ಇತರೆ ನಗರಗಳಿಗೆ ಹೋಲಿಕೆ ಮಾಡಿದರೆ,ಲಬೆಂಗಳೂರು ಮತ್ತು ಹೈದರಾಬಾದ್ ಹೆಚ್ಚಿನ ಟೆಕ್ ಪಾರ್ಕ್‌ಗಳನ್ನು ಹೊಂದಿರುವ ನಗರಗಳಾಗಿವೆ.
ಉಬರ್ ಷಟಲ್‌ಗೆ ಸಾರ್ವಜನಿಕ ಬೆಂಬಲವನ್ನು ಸಂಗ್ರಹಿಸಲು, ಕಂಪನಿಯು ಕಳೆದ ತಿಂಗಳು ನಗರದಲ್ಲಿ ನಡೆದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಬಸ್ ಅನ್ನು ಪ್ರದರ್ಶಿಸಿತ್ತು. ಶೃಂಗಸಭೆಯಲ್ಲಿ ಕಂಪನಿಯು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಇತರರಿಗೆ ಮಾದರಿಯನ್ನು ವಿವರಿಸಿದೆ. ಇದೀಗ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ ಎಂದು ತಿಳಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



