Bengaluru Karaga: ಇಂದು ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ; ಧರ್ಮರಾಯಸ್ವಾಮಿ ದೇವಸ್ಥಾನ ಸಿದ್ಧ
ಐತಿಹಾಸಿಕ ಬೆಂಗಳೂರು ಕರಗಕ್ಕೆ ಸೋಮವಾರ ಮಧ್ಯರಾತ್ರಿ ಚಾಲನೆ ದೊರೆಯಲಿದ್ದು, ಕರಗಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗಕ್ಕೆ ಸೋಮವಾರ ಮಧ್ಯರಾತ್ರಿ ಚಾಲನೆ ದೊರೆಯಲಿದ್ದು, ಕರಗಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಇಂದು ರಾತ್ರಿ 10ಕ್ಕೆ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಧ್ವಜಾರೋಹಣ ಆರಂಭವಾಗಲಿದೆ. ಉತ್ಸವದಲ್ಲಿ ಸಂಪ್ರದಾಯದಂತೆ ಜರಗನಹಳ್ಳಿಯ ಕುಲಬಾಂಧವರು ಪ್ರತಿ ವರ್ಷದಂತೆ ಬಿದಿರಿನ ಮರವನ್ನು ತರಲಿದ್ದು, ಅದನ್ನು ದೇವಾಲಯದ ಆವರಣದಲ್ಲಿ ನೆಟ್ಟು, ಸೋಮವಾರ ರಾತ್ರಿ ರಥೋತ್ಸವ ಹಾಗೂ ಧ್ವಜಾರೋಹಣ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಹೀಗೆ ಚೈತ್ರಮಾಸ ಶುಕ್ಲ ಪಕ್ಷದ ಸಪ್ತಮಿ ದಿನ ಆರಂಭವಾಗಿ ಬಿಡಿಗೆವರೆಗೆ ಉತ್ಸವ ಜರುಗಲಿದೆ. ಏ.23ರ ಚೈತ್ರ ಪೌರ್ಣಮ ದಿನವಾದ ಮಂಗಳವಾರ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ಹಾಗೂ ಕರಗ ಶಕ್ತ್ಯೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಅವರು ಮಾತಾಡಿ ಈ ಬಾರಿಯೂ ಮಸ್ತಾನ್ ಸಾಭ್ ದರ್ಗಕ್ಕೆ ಕರಗ ಹೋಗೆ ಹೋಗುತ್ತದೆ. ಮೊದಲಿನಿಂದಲು ಇರುವ ಸಂಪ್ರದಾಯದಂತೆ ಕರಗ ನಡೆಯಲಿದೆ ಯಾವುದೇ ಸಂಪ್ರದಾಯಗಳನ್ನು ಕಡಿತಗೊಳಿಸಲಾಗುವುದಿಲ್ಲ ಶಾಂತಿ ಸೌಹಾರ್ದದಿಂದ ಕರಗ ಉತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಾರಿ ವೀರಕುಮಾರರಿಗೆ ಕೆಂಪು ವಸ್ತ್ರ. ಹಾಗೂ ಮೈಸೂರು ಪೇಟ ಹಾಗೂ ದೀಕ್ಷೆ ಪಡೆಯುವರಿಗೆ ಖಡ್ಗ ನೀಡಲು ಮುಂದಾಗಿದ್ದೇವೆ. ಸುಮಾರು 800 ವರ್ಷಗಳ ಇತಿಹಾಸ ಇರೋ ಕರಗ ಉತ್ಸವ ನಾಡಪ್ರಭು ಕೆಂಪೇಗೌರ ಕಾಲದಿಂದಲು ಅಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ಜ್ಞಾನೇಂದ್ರ ರವರು 13 ನೇ ಬಾರಿ ಕರಗ ಹೊರುವರು, ರಾಜ್ಯ ಸೇರಿದಂತೆ ವಿದೇಶದಿಂದಲು ಈ ಉತ್ಸವ ನೋಡಲು ಲಕ್ಷಾಂತರ ಭಕ್ತಾದಿಗಳು ಬರಲಿದ್ದಾರೆ.
ಇಂದಿನಿಂದ 9 ದಿನಗಳವರೆಗೆ ಪ್ರತಿನಿತ್ಯ ಅಮ್ಮನಿಗೆ ವಿವಿಧ ಬಗ್ಗೆಯ ಪೂಜೆ ಮಾಡುತ್ತೇವೆ, ಏಪ್ರೀಲ್ 23 ರ ರಾತ್ರಿ 12 ಗಂಟೆಗೆ ಬೆಂಗಳೂರು ಕರಗ ನಡೆಯಲಿದೆ, ಇನ್ನೂ ಈ ಉತ್ಸವಕ್ಕೆ ರಾಜ್ಯದ ಗಣ್ಯರು ಸೇರಿದಂತೆ ಮಠಾಧೀಶರು ಅಗಮಿಸುವ ನಿರೀಕ್ಷೆಗಳಿವೆ. ಈ ಬಾರಿ ಬಿಸಿಲಿನ ತಾಪಾಮಾನ ಹೆಚ್ಚಾಗಿರುವುದರಿಂದ ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ತಮಿಳುನಾಡು ಸೇರಿದಂತೆ ಹಲವು ಕಡೆಗಳಿಂದ 200 ಮಂದಿ ಹೂವು ಸಿದ್ಧಪಡಿಸುವ ತಂಡ ಆಗಮಿಸಿದ್ದು, ಕರಗಕ್ಕೆ ಸೇಲಂ ಮೊಗ್ಗನ್ನು ಬಳಕೆ ಮಾಡುವುದು ರೂಢಿ. ಹೀಗಾಗಿ ಕರಗ ಮುಗಿಯುವವರೆಗೆ ಪ್ರತಿದಿನ ಸೇಲಂನಿಂದ ಮಲ್ಲಿಗೆ ಮೊಗ್ಗು ಬೆಂಗಳೂರಿಗೆ ಪೂರೈಕೆ ಆಗಲಿದೆ. ಮೈಸೂರು ಮಲ್ಲಿಗೆಯನ್ನೂ ಬಳಸಲಾಗುತ್ತದೆ. ಈ ಬಾರಿ ಕೇರಳದಿಂದ ಸಾಂಸ್ಕೃತಿಕ ತಂಡ ಕೂಡ ಆಗಮಿಸಲಿದೆ ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



