ನಗರದಲ್ಲಿ ಇಳಿದ ಡೆಂಗ್ಯೂ ಆರ್ಭಟ: ನಿಟ್ಟುಸಿರು ಬಿಟ್ಟ ಜನತೆ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಆರ್ಭಟ ಇಳಿಕೆಯಾಗಿದ್ದು, ಈ ಬೆಳವಣಿಗೆ ಜನತೆಗೆ ಕೊಂಚ ನಿರಾಳವನ್ನು ನೀಡಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಆರ್ಭಟ ಇಳಿಕೆಯಾಗಿದ್ದು, ಈ ಬೆಳವಣಿಗೆ ಜನತೆಗೆ ಕೊಂಚ ನಿರಾಳವನ್ನು ನೀಡಿದೆ.
ನಗರದಲ್ಲಿ ಆಗಸ್ಟ್ ತಿಂಗಳಿನಲ್ಲಿ 2,374 ಮತ್ತು ಸೆಪ್ಟೆಂಬರ್ ನಲ್ಲಿ 2,182ರಷ್ಟು ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು. ಈ ಸಂಖ್ಯೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳನಲ್ಲಿ ಇಳಿಕೆಯಾಗಿದೆ.
ಸೆಪ್ಟೆಂಬರ್ 28 ಮತ್ತು ಆಕ್ಟೋಬರ್ 7 ನಡುವೆ 515 ಪ್ರಕರಣಗಳು ವರದಿಯಾಗಿದ್ದು, ಸೋಂಕು ಇಳಿಕೆಯಾಗಿರುವುದರಿಂದ ಜನತೆ ನಿಟ್ಟಿಸಿರುವ ಬಿಟ್ಟಿದ್ದಾರೆ.
ಡೆಂಗ್ಯೂ ಪ್ರಕರಣಗಳ ಏರಿಕೆಗೆ ಕಡಿವಾಣ ಹಾಕುವ ಸಲುವಾಗಿ ಪ್ರತಿ ಬಿಬಿಎಂಪಿ ವಾರ್ಡ್‌ನಲ್ಲಿ ಮಾಹಿತಿ, ಶಿಕ್ಷಣ, ಅಭಿಯಾನ, ಸಮೀಕ್ಷೆ, ಗಳನ್ನು ನಡೆಸಲಾಗಿತ್ತು. ಇದೆಲ್ಲರ ಪರಿಣಾಮ ಸೋಂಕು ಇಳಿಕೆಯಾಗಿದೆ ಎಂದು ಮುಖ್ಯ ಆರೋಗ್ಯ ಅಧಿಕಾರಿ (ಸಿಎಚ್‌ಒ) ಡಾ.ಎ.ಎಸ್.ಬಾಲಸುಂದರ್ ಅವರು ಹೇಳಿದ್ದಾರೆ.
ಚಳಿಗಾಲ ಪೂರ್ಣಗೊಳ್ಳಲು ಕೆಲವೇ ವಾರಗಳಷ್ಟೇ ಬಾಕಿ ಇದೆ. ಹೀಗಾಗಿ ಸೋಂಕು ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಡೆಂಗ್ಯೂವಿನಿಂದ ದೂರ ಉಳಿಯಲು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸೊಳ್ಳೆಗಳ ನಿವಾರಕಕ್ಕೆ ಸಿಂಪಡೆಗಳನ್ನು ಸಿಂಪಡಿಸುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಕಸವನ್ನು ತೆರವುಗೊಳಿಸುವುದು, ಹೂವಿನ ಕುಂಡಗಳಿಂದ ನೀರು ನಿಲ್ಲದಂತ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ನಿಂತ ನೀರು ಈಡಿಸ್ ಈಜಿಪ್ಟಿ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರವಾಗಿರುತ್ತದೆ. ಹೀಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಮಾತನಾಡಿ, ವಾರದ ಅಂಕಿಅಂಶಗಳ ಪ್ರಕಾರ ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ. ಸೋಂಕು ಪ್ರಕರಣಗು ಕಡಿಮೆ ವರದಿಯಾಗುತ್ತಿದ್ದರೂ, ಪೂರ್ವ ಹಾಗೂ ದಕ್ಷಿಣ ವಲಯಗಳಲ್ಲಿನ ಸೋಂಕು ಹೆಚ್ಚಾಗಿದೆ. ಪ್ರತೀ ವಾರ್ಡ್ ನಲ್ಲಿ ತಲಾ 10ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಇದನ್ನು ನಿಯಂತ್ರಿಸಬಹುದಾಗಿದೆ ಎಂದು ಹೇಳಿದ್ದಾರೆ.
515 ಪ್ರಕರಣಗಳಲ್ಲಿ ಪೂರ್ವ ವಲಯದಲ್ಲಿ 164 ಮತ್ತು ಹೊಯ್ಸಳನಗರ, ದೊಮ್ಮಲೂರು, ಸಿವಿ ರಾಮನ್ ನಗರ, ಹಲಸೂರು ಮತ್ತು ಹೊಸ ತಿಪ್ಪಸಂದ್ರ ವಾರ್ಡ್‌ಗಳಲ್ಲಿ ಸುಮಾರು 10 ಪ್ರಕರಣಗಳು ವರದಿಯಾಗಿವೆ. ಅದೇ ರೀತಿ, ದಕ್ಷಿಣ ವಲಯದಲ್ಲಿ 117 ಪ್ರಕರಣಗಳು ಮತ್ತು ಕೋರಮಂಗಲ, ಸುದ್ದಗುಂಟ ಪಾಳ್ಯ, ಈಜಿಪುರ ಮತ್ತು ಮಡಿವಾಳದಂತಹ ವಾರ್ಡ್‌ಗಳಲ್ಲಿ 10 ಪ್ರಕರಣಗಳು ವರದಿಯಾಗಿರುವುದಾಗಿ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


