ರಾಜ್ಯ

ಮಂಗಳೂರು: ಆನ್‌ಲೈನ್ ವಂಚಕರಿಂದ ವ್ಯಕ್ತಿಯೊಬ್ಬರಿಗೆ ರೂ. 1.16 ಲಕ್ಷ ದೋಖಾ!

ಕ್ಯಾಟರಿಂಗ್ ಗೆ ಬೇಕಾದ ಉಪಕರಣ ಕಳುಹಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬರಿಗೆ ರೂ. 1.16 ಲಕ್ಷ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ಆನ್‌ಲೈನ್ ವಂಚಕರಿಂದ ವ್ಯಕ್ತಿಯೊಬ್ಬರಿಗೆ ರೂ. 1.16 ಲಕ್ಷ ದೋಖಾ!
ಸಾಂದರ್ಭಿಕ ಚಿತ್ರ
Published On :

ಮಂಗಳೂರು: ಕ್ಯಾಟರಿಂಗ್ ಗೆ ಬೇಕಾದ ಉಪಕರಣ ಕಳುಹಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬರಿಗೆ ರೂ. 1.16 ಲಕ್ಷ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಗ್‌ಬಾಸ್ಕೆಟ್ ಆ್ಯಪ್‌ನಲ್ಲಿ ಅಡುಗೆ ಸಲಕರಣೆಗಳನ್ನು ನೋಡಿದ ದೂರುದಾರರು ಜು.15ರಂದು ಅಪಾಧಿತರಾದ ಬಿಗ್‌ಬಾಸ್ಕೆಟ್ ಫೇಸ್ ಬುಕ್ ಖಾತೆದಾರರೊಂದಿಗೆ ಚಾಟ್ ಮಾಡಿದ್ದರು. ಈ ಸಂದರ್ಭದಲ್ಲಿ ಅಪರಿಚಿತರು ಕಡಿಮೆ ಬೆಲೆಗೆ ಅಡುಗೆ ಸಲಕರಣೆ ಪೂರೈಸುವ ಭರವಸೆ ನೀಡಿದ್ದು, ಬಿಗ್‌ಬಾಸ್ಕೆಟ್ ಹೆಸರಿನ ಫೇಸ್‌ಬುಕ್ ಲಿಂಕ್  ಕಳುಹಿಸಿದ್ದಾರೆ. ಅಲ್ಲದೇ  ತಮ್ಮ ವಿವರಗಳನ್ನು ನೀಡುವಂತೆ ದೂರುದಾರರಿಗೆ ಹೇಳಿದ್ದಾರೆ.

ವ್ಯಕ್ತಿ ತನ್ನ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದ ನಂತರ, ಅವನ ಖಾತೆಯಿಂದ 1.16 ಲಕ್ಷ ರೂಪಾಯಿಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗಿದೆ. ಈ ಸಂಬಂಧ ಇಲ್ಲಿನ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.