ದೆಹಲಿ ರ್ಯಾಲಿಯಲ್ಲಿ ತಮ್ಮ ಸ್ಮಾರ್ಟ್ ವಾಚ್ ಕಳೆದುಕೊಂಡರೇ CM ಡಿ ಕೆ ಶಿವಕುಮಾರ್?
ಇದಕ್ಕೆ ನಿನ್ನೆ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಸ್ಪಷ್ಟನೆ ನೀಡಿ ರಾಹುಲ್ ಗಾಂಧಿ ನನ್ನನ್ನು ತಳ್ಳಲಿಲ್ಲ, ಕಾಳಜಿ ತೋರಿಸಿದರು, ಬಿಜೆಪಿಯವರಿಗೆ ನನ್ನನ್ನು ಟೀಕೆ ಮಾಡುವುದೆಂದರೆ ಬಹಳ ಇಷ್ಟ, ಅವರಿಗೆ ನನ್ನ ಮೇಲೆ ಬಹಳ ಪ್ರೀತಿಯಿರಬೇಕು ಎಂದು ಹೇಳಿದ್ದರು.

ಬೆಂಗಳೂರು: ಮೊನ್ನೆ ಸೋಮವಾರ ದೆಹಲಿಯಲ್ಲಿ ಎಸ್ ಐಆರ್ ವಿರುದ್ಧ ಇಂಡಿಯಾ ಬ್ಲಾಕ್ ರ್ಯಾಲಿಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾಗವಹಿಸಿದ್ದರು. ಜನರ ಗುಂಪಿನ ಮಧ್ಯೆ ರಾಹುಲ್ ಗಾಂಧಿ ಡಿ ಕೆ ಶಿವಕುಮಾರ್ ಅವರನ್ನು ತಳ್ಳಿದರು, ಮರ್ಯಾದೆ ತೋರಿಸಲಿಲ್ಲ ಎಂದು ವ್ಯಾಪಕ ಸುದ್ದಿಯಾಯಿತು. ವಿರೋಧ ಪಕ್ಷ ಬಿಜೆಪಿ ಡಿ ಕೆ ಶಿವಕುಮಾರ್ ಅವರನ್ನು ವ್ಯಂಗ್ಯವಾಗಿ ಟೀಕಿಸಿತ್ತು.
ಇದಕ್ಕೆ ನಿನ್ನೆ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಸ್ಪಷ್ಟನೆ ನೀಡಿ ರಾಹುಲ್ ಗಾಂಧಿ ನನ್ನನ್ನು ತಳ್ಳಲಿಲ್ಲ, ಕಾಳಜಿ ತೋರಿಸಿದರು, ಬಿಜೆಪಿಯವರಿಗೆ ನನ್ನನ್ನು ಟೀಕೆ ಮಾಡುವುದೆಂದರೆ ಬಹಳ ಇಷ್ಟ, ಅವರಿಗೆ ನನ್ನ ಮೇಲೆ ಬಹಳ ಪ್ರೀತಿಯಿರಬೇಕು ಎಂದು ಹೇಳಿದ್ದರು.
40 ಸಾವಿರ ರೂ ವಾಚ್ ಕಳೆದುಕೊಂಡರೇ ಡಿಕೆಶಿ?
ಈ ಮಧ್ಯೆ ಲಕ್ಷಾಂತರ ಜನರು ಸೇರಿ ರ್ಯಾಲಿ ಹೋಗುತ್ತಿದ್ದಾಗ ತಳ್ಳಾಟ, ನೂಕಾಟ, ತಿಕ್ಕಾಟ ಮಧ್ಯೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಕೈಗೆ ಕಟ್ಟಿದ್ದ ವಾಚ್ ಕಳೆದುಕೊಂಡಿದ್ದಾರೆ ಎಂದು ಸುದ್ದಿಯಾಗಿದೆ. ಅದು ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಹುವೈ ವಾಚ್. ಆದರೆ ಈ ವದಂತಿಯನ್ನು ಮೂಲಗಳು ನಿರಾಕರಿಸಿವೆ. ಈ ಬಗ್ಗೆ ಯಾವುದೇ ದೂರು ಕೂಡ ಇದುವರೆಗೆ ದಾಖಲಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



