ಹಿಂದೂಗಳಿಗೆ ಸೇರಿದ ಸ್ಮಶಾನ ಒತ್ತುವರಿ ಮಾಡಿದ ಬಿಬಿಎಂಪಿ; ಅಕ್ರಮವಾಗಿ ಕ್ರೀಡಾ ಸಂಕೀರ್ಣ ನಿರ್ಮಾಣ; ಜಮೀರ್ ಅಹ್ಮದ್ ಕೈವಾಡ ಶಂಕೆ!
ಜೆಜೆ ನಗರ ವಾರ್ಡ್‌ನ ಗೋರಿಪಾಳ್ಯದಲ್ಲಿದ್ದ ಹಿಂದೂ ಸಮುದಾಯಕ್ಕೆ ಸೇರಿದ ಸ್ಮಶಾನವನ್ನು ಬಿಬಿಎಂಪಿ ಒತ್ತುವರಿ ಮಾಡಿಕೊಂಡಿದ್ದು, ಸ್ಥಳದಲ್ಲಿ ಅಕ್ರಮವಾಗಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಬೆಂಗಳೂರು: ಜೆಜೆ ನಗರ ವಾರ್ಡ್‌ನ ಗೋರಿಪಾಳ್ಯದಲ್ಲಿದ್ದ ಹಿಂದೂ ಸಮುದಾಯಕ್ಕೆ ಸೇರಿದ ಸ್ಮಶಾನವನ್ನು ಬಿಬಿಎಂಪಿ ಒತ್ತುವರಿ ಮಾಡಿಕೊಂಡಿದ್ದು, ಸ್ಥಳದಲ್ಲಿ ಅಕ್ರಮವಾಗಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಮೊದಲು ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಬಿಬಿಎಂಪಿ, ನಂತರ ಸ್ಥಳದಲ್ಲಿ ಕಚೇರಿಯನ್ನು ನಿರ್ಮಿಸಿತ್ತು. ಇದೀಗ ಸ್ಥಳದಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಿಸುತ್ತಿದೆ ಎಂದು ಹಿಂದೂಪರ ಹೋರಾಟಗಾರರು ಆರೋಪಿಸಿದ್ದಾರೆ.
ಈ ಸಂಬಂಧ ಈಗಾಗಲೇ ಲೋಕಾಯುಕ್ತ ಕಚೇರಿ ತೆರಳಿ ಮಾಹಿತಿ ನೀಡಲಾಗಿತ್ತು. ಆದರೆ, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಎಸ್ ಭಾಸ್ಕರನ್ ಅವರು ಮಾತನಾಡಿ, ಹಿಂದೂಗಳಿಗೆ ಸೇರಿದ ಸ್ಮಶಾನವನ್ನು ಬಿಬಿಎಂಪಿಯೆ ಅತಿಕ್ರಮಣ ಮಾಡಿದೆ. ಆಸ್ತಿ ಗುರುತಿನ ಸಂಖ್ಯೆ 136-10034-115 ರಲ್ಲಿ ಪಾಲಿಕೆ ಕಚೇರಿಯನ್ನು 2018ರಲ್ಲಿ ನಿರ್ಮಿಸಲಾಗಿತ್ತು. ಇದೀಗ ಆಸ್ತಿ ಸಂಖ್ಯೆ 136-10034-117 ರಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರ ಇಚ್ಛೆಯ ಮೇರೆಗೆ ರೂ 1 ಕೋಟಿ ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆ ಗೆಲ್ಲಲು ಸರ್ಕಸ್: ಆಶಾ ಕಾರ್ಯಕರ್ತೆಯರಿಗೆ ಸೌದಿ ರಿಯಾಲ್ಸ್ ವಿತರಿಸಿದ ಶಾಸಕ ಜಮೀರ್ ಅಹ್ಮದ್
ಸ್ಮಶಾನದಲ್ಲಿದ್ದ ''2500ಕ್ಕೂ ಹೆಚ್ಚು ಗೋರಿಗಳನ್ನು ಧ್ವಂಸಗೊಳಿಸಿ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಪಾಲಿಕೆ ಅಧಿಕಾರಿಗಳೂ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆಯೇ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಆದರೆ, ಈ ಬಗ್ಗೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.
ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸೀಮಾ ಅಲ್ತಾಫ್ ಖಾನ್ ಅವರ ಪತಿ ಅಲ್ತಾಫ್ ಖಾನ್ ಅವರು ಸ್ಮಶಾನವನ್ನು ಧ್ವಂಸ ಮಾಡಿದ್ದು, ಗೋರಿಗಳಿಲ್ಲಿದ್ದ ಪಾರ್ಥೀವ ಶರೀರಗಳು ಹಾಗೂ ಅಸ್ಥಿಪಂಜರಗಳನ್ನು ನಾಪತ್ತೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಸಂಪ್ರದಾಯದಂತೆ ಹಿಂದೂಗಳು ವಾರ್ಶಿಕವಾಗಿ ಸ್ಮಶಾನಕ್ಕೆ ಬಂದು ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸಿ, ಗೌರವ ಸಲ್ಲಿಸುತ್ತಾರೆ. ಈ ಮೂಲಕ ತಮ್ಮ ಪ್ರೀತಿಪಾತ್ರರನ್ನು ನೋಡುತ್ತಾರೆ. ಆದರೆ, ಸ್ಮಶಾನವನ್ನು ಧ್ವಂಸ ಮಾಡುವ ಮೂಲಕ ಅಧಿಕಾರಿಗಳು ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆಂದು ಭಾಸ್ಕರ್ ಅವರು ಹೇಳಿದ್ದಾರೆ.
ಮಾರ್ಚ್ 6 ರಂದು ಕಚೇರಿಗೆ ಬರುವಂತೆ ಲೋಕಾಯುಕ್ತದ ಅಧಿಕಾರಿಗಳು ಸೂಚಿಸಿದ್ದಾರೆ. ಸ್ಥಳಕ್ಕೆ ಬಂದು ಲೋಕಾಯುಕ್ತರು ಭೇಟಿ ನೀಡಿ, ಪರಿಶೀಲನೆ ಮಾಡದೇ ಹೋದಲ್ಲಿ, ಹಿಂದೂ ಸಂಘಟನೆಗಳೊಂದಿಗೆ ಧರಣಿ ನಡೆಸುತ್ತೇನೆಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


