ಸ್ಮಶಾನ

ಚಿಕ್ಕಮಗಳೂರು: 2 ದಶಕಗಳಿಂದ ಸಿಕ್ಕಿಲ್ಲ ಸ್ಮಶಾನ ಭೂಮಿ; ಅಂತ್ಯ ಸಂಸ್ಕಾರಕ್ಕೆ ಶಿಳ್ಳೆಕ್ಯಾತ ಸಮುದಾಯದ 'ಹೆಣ'ಗಾಟ!
ಈ ಕುಟುಂಬಗಳು ಸುಮಾರು ಎರಡು ದಶಕಗಳಿಂದ ಭದ್ರಾ ನದಿಯ ಹಿನ್ನೀರಿನ ಬಳಿಯ ಶಿಬಿರದಲ್ಲಿ ವಾಸಿಸುತ್ತಿದ್ದರೂ, ಸ್ಮಶಾನ ಸ್ಥಳದಿಂದ ವಂಚಿತರಾಗಿದ್ದಾರೆ. ತಮ್ಮ ಶಿಬಿರದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕಿರು ದ್ವೀಪದಲ್ಲಿ ಸತ್ತವರನ್ನು ಹೂಳಬೇಕಾಗಿದೆ.

ಈಗ ಕಾಶ್ಮೀರಕ್ಕೆ ಹೋಗುವುದು ಸ್ಮಶಾನಕ್ಕೆ ಹೋದಂತೆ: ಸಚಿವ ಸಂತೋಷ್ ಲಾಡ್
ಎಲ್ಲವೂ ಸರಿಯಾದ ನಂತರ ಮತ್ತು ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಿದ ಬಳಿಕ ಪ್ರವಾಸಿಗರು ಅಲ್ಲಿಗೆ ಹೋಗುವ ಬಗ್ಗೆ ಯೋಚಿಸಬಹುದು.

ರಾಜ್ಯದಲ್ಲಿ ಸ್ಮಶಾನಕ್ಕೂ ಜಾಗವಿಲ್ಲದಂತಾಗಿದ್ದು, ಖಾಸಗಿ ಭೂಮಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ: ಸರ್ಕಾರ
ಸರ್ಕಾರಿ ಜಾಗ ಖಾಲಿಯಾಗುತ್ತಿರುವುದರಿಂದಾಗಿ ಸ್ಮಶಾನಕ್ಕೆ ಆಟದ ಮೈದಾನ, ಕೆಪಿಟಿಎಸ್‍ಎಲ್‍ನ ಸ್ಟೇಷನ್, ಆಸ್ಪತ್ರೆಗಳಿಗೆ ಸ್ಥಳಗಳಿಲ್ಲ. ಅಂಗನವಾಡಿಗಳಿಗೆ ಜಾಗ ನೀಡುವಂತೆ 12 ಸಾವಿರ ಅರ್ಜಿಗಳಿವೆ.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಿರಾಕರಿಸದಿರಿ: ಸ್ಮಶಾನ, ಚಿತಾಗಾರಗಳಿಗೆ ಸರ್ಕಾರ ಸೂಚನೆ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ನಡುವಲ್ಲೇ ಕೊವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆ ನಡೆಸುವ ಕುರಿತಾಗಿ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಿದೆ.

ಮುಂಬೈ: ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದ ಕೈದಿ ಪರಾರಿ, ಕೆಲ ಗಂಟೆಗಳ ಬಳಿಕ ಸ್ಮಶಾನದಲ್ಲಿ ಪತ್ತೆ!
ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾದ 26 ವರ್ಷದ ವಿಚಾರಣಾಧೀನ ಕೈದಿಯೊಬ್ಬರು ಬುಧವಾರ ಪರಾರಿಯಾಗಿದ್ದರು.ಆದರೆ, ನಾಲ್ಕು ಗಂಟೆಗಳ ಹುಡುಕಾಟದ ನಂತರ ಸ್ಮಶಾನದಲ್ಲಿ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾದರಾಯನಪುರ' ಹಿಂದೂ ಸ್ಮಶಾನ ಅತಿಕ್ರಮಣ: ಸ್ಥಳಕ್ಕೆ ಲೋಕಾಯುಕ್ತ ಪೊಲೀಸರ ಭೇಟಿ, ಏ.12ರೊಳಗೆ ವರದಿ ಸಲ್ಲಿಕೆ
ಜೆಜೆ ನಗರ ಹಿಂದೂ ಸ್ಮಶಾನ ಅತಿಕ್ರಮಣ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಲೋಕಾಯುಕ್ತ ಪೊಲೀಸರು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.

ಮೌಢ್ಯತೆ ಹೋಗಲಾಡಿಸಲು ಸ್ಮಶಾನದಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತೇನೆ: ಸತೀಶ್ ಜಾರಕಿಹೊಳಿ
ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹೊಸದಾಗಿ ವಾಹನಗಳನ್ನು ತರಲಾಗಿದ್ದು, ಮೌಢ್ಯ ಹೋಗಲಾಡಿಸಲು ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಸ್ಮಶಾನಲ್ಲಿ ಪೂಜೆ ಸಲ್ಲಿಸಿ ಪ್ರಚಾರ ವಾಹನಗಳಿಗೆ ಚಾಲನೆ ನೀಡಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಭಾನುವಾರ ಹೇಳಿದರು.

ಸತ್ತವರಿಗಾದರೆ ದೊಡ್ಡ ದೊಡ್ಡ ಪುತ್ಥಳಿ ಕಟ್ಟುವ ನಿಮಗೆ ಅಭಿವೃದ್ಧಿ ಬೇಕಿಲ್ಲ: ಸ್ಮಶಾನಕ್ಕೆ ಜಾಗ ಕೊಡದ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿ
ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಗುರುವಾರ ತೀವ್ರವಾಗಿ ಕಿಡಿಕಾರಿತು.

ಬೆಂಗಳೂರು: ಸ್ಮಶಾನ ವಿಚಾರವಾಗಿ ಲೋಕಾಯುಕ್ತರ ಭೇಟಿ ಮಾಡಿದ ಹಿಂದೂಪರ ಹೋರಾಟಗಾರರು!
ಬಿಬಿಎಂಪಿಯ ಹಿಂದೂ -ತಮಿಳು ಸ್ಮಶಾನ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಸನಾತನ ಪರಿಷತ್ ಮುಖಂಡ ಎಸ್ ಭಾಸ್ಕರನ್ ಮತ್ತು ಶ್ರೀರಾಮ ಸೇನೆ ಸದಸ್ಯರು ಸೋಮವಾರ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರನ್ನು ಭೇಟಿಯಾದರು.

