ಚಾಲಕನ ಅತಿರೇಕದ ವರ್ತನೆ: ಚಾಲಕನನ್ನು 100 ಮೀಟರ್ ಕಾರಿನಿಂದ ತಳ್ಳಿಕೊಂಡು ಹೋದ ಭೂಪ!
ಹೆಬ್ಬಾಳ ಮೇಲ್ಸೇತುವೆಯಲ್ಲಿ ಇಬ್ಬರು ಕಾರು ಚಾಲಕರ ನಡುವೆ ನಡೆದ ಜಗಳದ ವೇಳೆ ಚಾಲಕನೊಬ್ಬ ಕಾರಿನ ಬಾನೆಟ್ ಏರಿ ಕುಳಿತಾಗ ಕಾರು ಚಲಾಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯಲ್ಲಿ ಇಬ್ಬರು ಕಾರು ಚಾಲಕರ ನಡುವೆ ನಡೆದ ಜಗಳದ ವೇಳೆ ಚಾಲಕನೊಬ್ಬ ಕಾರಿನ ಬಾನೆಟ್ ಏರಿ ಕುಳಿತಾಗ ಕಾರು ಚಲಾಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನ.29ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರದೀಪ್ ಹೆರ್ಲೆ ಎಂಬುವವರು ನಗರ ಸಂಚಾರ ಪೊಲೀಸರ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಚಾಲಕರ ಜಗಳದ ವಿಡಿಯೋವನ್ನು ಹಂಚಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಹೆಬ್ಬಾಳ ಮೇಲ್ಸೇತುವೆಯಲ್ಲಿ ಇನೋವಾ ಮತ್ತು ಇಟಿಯಸ್ ಕಾರು ಚಾಲಕ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಈ ವೇಳೆ ಆಕ್ರೋಶಗೊಂಡ ಇಟಿಯಸ್ ಕಾರು ಚಾಲಕ ತನ್ನ ಕಾರಿನಿಂದ ಕೆಳಗೆ ಇಳಿದು ಇನೋವಾ ಕಾರಿನ ಬಾನೆಟ್ ಮೇಲೆ ಕುಳಿತು ಕೂಗಾಡಲು ಮುಂದಾಗಿದ್ದಾನೆ.
ಈ ವೇಳೆ ಕೋಪೋದ್ರಿಕ್ತನಾದ ಇನೋವಾ ಕಾರು ಚಾಲಕ ಕಾರು ಸ್ಟಾರ್ಟ್ ಮಾಡಿಕೊಂಡು ಬಾನೆಟ್ ಮೇಲೆ ಇಟಿಯಸ್ ಕಾರು ಚಾಲಕ ಕುಳಿತಿದ್ದಾಗಲೇ ಸುಮಾರು ನೂರು ಮೀಟರ್ ಮುಂದಕ್ಕೆ ಕಾರು ಚಲಾಯಿಸಿದ್ದಾನೆ.
ಈ ಚಾಲಕರ ಬೀದಿ ಜಗಳ ಕಾರೊಂದರ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


