ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಆಧಾರ್ ಸೇವಾ ಕೇಂದ್ರ: ಈ ಸೇವೆ ಹೊಂದಿದ ಮೊದಲ ನೈಋತ್ಯ ರೈಲ್ವೆ ವಲಯ ನಿಲ್ದಾಣ ಎಂಬ ಹಿರಿಮೆ!
ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಹೆಚ್ಚು ಅಗತ್ಯವಿರುವ ಆಧಾರ್ ಕೇಂದ್ರವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತಿದ್ದು, ಆ ಮೂಲಕ ಈ ಸೌಲಭ್ಯವನ್ನು ಹೊಂದಿರುವ ಮೊದಲನೈಋತ್ಯ ರೈಲ್ವೆ ವಲಯದ ನಿಲ್ದಾಣವಾಗಲಿದೆ.

ಬೆಂಗಳೂರು: ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಹೆಚ್ಚು ಅಗತ್ಯವಿರುವ ಆಧಾರ್ ಕೇಂದ್ರವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತಿದ್ದು, ಆ ಮೂಲಕ ಈ ಸೌಲಭ್ಯವನ್ನು ಹೊಂದಿರುವ ಮೊದಲನೈಋತ್ಯ ರೈಲ್ವೆ ವಲಯದ ನಿಲ್ದಾಣವಾಗಲಿದೆ.
ಈ ಬಗ್ಗೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ TNIE ಗೆ ಮಾಹಿತಿ ನೀಡಿದ್ದು, 'ನಾವು ಇದನ್ನು ಮೂರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ನಡೆಸುತ್ತೇವೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ತರಬೇತಿ ಪಡೆದ ನಮ್ಮ ಇಬ್ಬರು ಸಿಬ್ಬಂದಿಗಳು ಅದರ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಾರೆ. ಚಿತ್ರಗಳನ್ನು ತೆಗೆಯಲು, ಬಯೋಮೆಟ್ರಿಕ್‌ಗಳನ್ನು ಸೆರೆಹಿಡಿಯಲು ಮತ್ತು ಇತರ ಸಾಧನಗಳನ್ನು UIDAI ಒದಗಿಸಲಿದೆ ಎಂದರು.
ಅಂತೆಯೇ ಹೊಸ ಆಧಾರ್ ಕಾರ್ಡ್‌ಗಳ ವಿತರಣೆ ಮತ್ತು ಪ್ರಸ್ತುತ ಕಾರ್ಡ್‌ಗೆ ಮಾಡಬೇಕಾದ ಬದಲಾವಣೆಗಳನ್ನು ಮತ್ತು ತಿದ್ದುಪಡಿಗಳನ್ನು ಇಲ್ಲಿ ಮಾಡಲಾಗುತ್ತದೆ. ಡಿಆರ್‌ಎಂ ಅವರು ಸ್ವೀಕರಿಸುವ ಪ್ರತಿಕ್ರಿಯೆಯನ್ನು ಆಧರಿಸಿ, ಈ ಸೌಲಭ್ಯವನ್ನು ವಿಭಾಗದ ಇತರ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು. ರೈಲ್ವೆ ಮಂಡಳಿ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ. ರೈಲ್ವೆ ತನ್ನ ಸಾರ್ವಜನಿಕ ಸಂಪರ್ಕವನ್ನು ಹೆಚ್ಚಿಸಲು ಮತ್ತು ತನ್ನ ಪ್ರಯಾಣಿಕರೊಂದಿಗೆ ಹೆಚ್ಚು ಸಂಪರ್ಕ ಸಾಧಿಸಲು ಬಯಸುತ್ತದೆ ಮತ್ತು ಇದು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಕೇಂದ್ರದ ‘ಒಂದು ಸ್ಟೇಷನ್ ಒಂದು ಉತ್ಪನ್ನ’ ಯೋಜನೆಯಡಿಯಲ್ಲಿ, ವಿಭಾಗದ ಚಿಕ್ಕ ನಿಲ್ದಾಣಗಳಲ್ಲಿ ಅನೇಕ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಸಿಂಗ್ ಹೇಳಿದರು. ಬುಡಕಟ್ಟು ಜನಾಂಗದವರಿಂದ ಪಡೆದ ರಾಗಿ ಮತ್ತು ಜೇನುತುಪ್ಪದ ಉತ್ಪನ್ನಗಳನ್ನು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ; ಕೆಆರ್ ಪುರಂ ನಿಲ್ದಾಣದಲ್ಲಿ ಕೃಷ್ಣರಾಜಪುರ, ಯಲಹಂಕ ಮತ್ತು ದೊಡ್ಡಬಳ್ಳಾಪುರ ನಿಲ್ದಾಣದಿಂದ ರೇಷ್ಮೆ ಮತ್ತು ಹತ್ತಿ ಸೀರೆಗಳು; ಮತ್ತು ಹಿಂದೂಪುರದಲ್ಲಿ ಮುದ್ದಿರೆಡ್ಡಿಪಾಳ್ಯ ಸೀರೆಗಳು ಇತ್ತೀಚೆಗೆ ತೆರೆದ ಮಳಿಗೆಗಳಲ್ಲಿ ಸೇರಿವೆ.
ಯುಐಡಿಎಐ ಸ್ಪಷ್ಟನೆ
ಇನ್ನು ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಯುಐಡಿಎಐ ಕರ್ನಾಟಕದ 10 ರೈಲು ನಿಲ್ದಾಣಗಳಿಗೆ ಆಧಾರ್ ಕೇಂದ್ರ ಕಿಟ್‌ಗಳನ್ನು ನೀಡಲು ಸಿದ್ಧ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


