ರಾಜ್ಯ

ಬೆಂಗಳೂರು: ಗ್ಯಾಸ್ ಕಟ್ಟರ್ ಬಳಿಸಿ ಎಟಿಎಂಗೆ ಕನ್ನ ಹಾಕುತ್ತಿದ್ದ ಖದೀಮನ ಬಂಧನ!

ಗ್ಯಾಸ್ ಕಟರ್ ಬಳಸಿ ಹಣ ತುಂಬಿದ ಎಟಿಎಂ ಘಟಕಗಳಲ್ಲಿ ರಾತ್ರಿ ವೇಳೆ ಹಣ ದೋಚುತ್ತಿದ್ದ ವೃತ್ತಿಪರ ಖದೀಮನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ಗ್ಯಾಸ್ ಕಟ್ಟರ್ ಬಳಿಸಿ ಎಟಿಎಂಗೆ ಕನ್ನ ಹಾಕುತ್ತಿದ್ದ ಖದೀಮನ ಬಂಧನ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಗ್ಯಾಸ್ ಕಟರ್ ಬಳಸಿ ಹಣ ತುಂಬಿದ ಎಟಿಎಂ ಘಟಕಗಳಲ್ಲಿ ರಾತ್ರಿ ವೇಳೆ ಹಣ ದೋಚುತ್ತಿದ್ದ ವೃತ್ತಿಪರ ಖದೀಮನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಪಂಜಾಬ್ ಮೂಲದ ಸಮರ್ಜೋತ್ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಎರಡು ಸಿಲಿಂಡರ್‌ಗಳು, ಗ್ಯಾಸ್ ಕಟ್ಟರ್‌ಗಳು, ಏರ್ ಫಿಲ್ಟರ್ ಮಾಸ್ಕ್, ಆಕ್ಸಿಜನ್ ಸಿಲಿಂಡರ್ ಮತ್ತು ಇತರ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೆಸರಘಟ್ಟ ರಸ್ತೆಯಲ್ಲಿ ಎಟಿಎಂ ಯಂತ್ರ ಒಡೆಯಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಬಂಧನಕ್ಕೊಳಪಡಿಸಿದ್ದಾರೆ.

5 ದಿನಗಳಿಂದ ಎಟಿಎಂ ಯಂತ್ರವನ್ನು ಒಡೆಯಲು ಸಿಂಗ್ ಯತ್ನಿಸುತ್ತಿದ್ದ. ಸಪ್ತಗಿರಿ ಕಾಲೇಜು ಸಮೀಪದ ಕೆನರಾ ಬ್ಯಾಂಕ್ ಎಟಿಎಂಗೆ ರಾತ್ರಿ 11 ಗಂಟಗೆ ಬರುತ್ತಿದ್ದ ಆರೋಪಿ ಬೆಳಿಗ್ಗೆ 5 ಗಂಟೆಗೆ ಹೊರಗೆ ಬರುತ್ತಿದ್ದ. ಇದನ್ನು ಎಟಿಎಂ ನಿರ್ವಹಣಾ ಸಿಬ್ಬಂದಿಗಳು ಗಮನಿಸಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದಾಗ ಸಿಂಗ್ ಯಂತ್ರವನ್ನು ಒಡೆಯಲು ಯತ್ನ ನಡೆಸುತ್ತಿರುವುದು ಕಂಡು ಬಂದಿದೆ.

ಇದರಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಎಟಿಎಂ ಬಳಿ ಬಚ್ಚಿಟ್ಟುಕೊಂಡು ಆರೋಪಿಗಾಗಿ ಕಾದಿದ್ದಾರೆ. ಎಂದಿನಂತೆ ಎಟಿಎಂಗೆ ಆರೋಪಿ ಬಂದಿದ್ದು, ಕಳ್ಳತನ ಮಾಡಲು ಯತ್ನಿಸಿದಾಗ ಅಲ್ಲಿಯೇ ಇದ್ದ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಈ ಹಿಂದೆ ಕೂಡ ಆರೋಪಿಯನ್ನು ಪರಪ್ಪನ ಅಗ್ರಹಾರ, ಜಾಲಹಳ್ಳಿ, ಸುಬ್ರಹ್ಮಣ್ಯಪುರ, ಎಂಐಸಿಒ ಲೇಔಟ್ ಹಾಗೂ ಸಿಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.