ಕೋವಿಡ್ ಸೋಂಕು ಇಳಿಕೆಯಾದರೂ ಮುಂದುವರೆದ ಆನ್‌ಲೈನ್ ವೈದ್ಯಕೀಯ ಸಮಾಲೋಚನೆ: ವಿಶ್ವಾಸಾರ್ಹವಲ್ಲ ಎಂದ ವೈದ್ಯರು
ಕೋವಿಡ್ ಸಾಂಕ್ರಾಮಿಕ ರೋಗ ಉತ್ತುಂಗಕ್ಕೇರಿದ್ದ ಸಂದರ್ಭದಲ್ಲಿ ಆನ್‌ಲೈನ್ ವೈದ್ಯಕೀಯ ಸಮಾಲೋಚನೆ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಸೋಂಕು ಇಳಿಕೆಯಾದರೂ ಕೂಡ ಜನರು ಡಿಜಿಟಲ್ ಪ್ಲಾಟ್ ಫಾರ್ಮ್ ಗಳನ್ನೇ ಬಳಕೆ ಮಾಡುತ್ತಿದ್ದು, ಸಾಕಷ್ಟು ವೈದ್ಯರು ಇದು ವಿಶ್ವಾಸಾರ್ಹವಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ಉತ್ತುಂಗಕ್ಕೇರಿದ್ದ ಸಂದರ್ಭದಲ್ಲಿ ಆನ್‌ಲೈನ್ ವೈದ್ಯಕೀಯ ಸಮಾಲೋಚನೆ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಸೋಂಕು ಇಳಿಕೆಯಾದರೂ ಕೂಡ ಜನರು ಡಿಜಿಟಲ್ ಪ್ಲಾಟ್ ಫಾರ್ಮ್ ಗಳನ್ನೇ ಬಳಕೆ ಮಾಡುತ್ತಿದ್ದು, ಸಾಕಷ್ಟು ವೈದ್ಯರು ಇದು ವಿಶ್ವಾಸಾರ್ಹವಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ವೈದ್ಯ ಮತ್ತು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಸದಸ್ಯ ಡಾ.ಕಲ್ಪಜಿತ್ ಬಾನಿಕ್ ಮಾತನಾಡಿ, ಟೆಲಿಮೆಡಿಸಿನ್ ಪರಿಕಲ್ಪನೆಯು ಬೆಂಗಳೂರಿನಲ್ಲಿ ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಇತ್ತು. ಈ ವ್ಯವಸ್ಥೆಯು ಈಗ ತಂತ್ರಜ್ಞಾನದೊಂದಿಗೆ ಹೆಚ್ಚು ಸಂಘಟಿತವಾಗಿದೆ. ಕಳೆದ 2-3 ವರ್ಷಗಳಲ್ಲಿ ಹಲವಾರು ಡಿಜಿಟಲ್ ಸಲಹಾ ವೇದಿಕೆಗಳು ಆರಂಭವಾಗಿವೆ ಎಂದು ಹೇಳಿದ್ದಾರೆ.
ರೋಗಿಗಳು ಡಿಜಿಟಲ್ ಸಮಾಲೋಚನೆಗಳನ್ನು ಬಯಸುತ್ತಾರೆ, ಏಕೆಂದರೆ ಇದು ವೈಯಕ್ತಿಕ ಸಮಾಲೋಚನೆಗಳಿಗಿಂತ ಅಗ್ಗವಾಗಿದೆ, ವಿಶೇಷವಾಗಿ ಗಂಭೀರವಲ್ಲದ ಕಾಯಿಲೆಗಳಿಗೆ ಎಂದು ತಿಳಿಸಿದ್ದಾರೆ.
ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (ಎಫ್‌ಎಐಎಂಎ) ಅಧ್ಯಕ್ಷ ಡಾ ರೋಹನ್ ಕೃಷ್ಣನ್ ಮಾತನಾಡಿ, ನಾನು ಡಿಜಿಟಲ್ ಸಮಾಲೋಚನೆಗಳನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಟೆಲಿಕನ್ಸಲ್ಟೇಶನ್‌ಗಳನ್ನು ಉತ್ತೇಜಿಸಿಲಾಗಿತ್ತು. ಆದರೆ, ಇದು ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ ಮತ್ತು ರೋಗಿಯ ವೈಯಕ್ತಿಕ ಪರೀಕ್ಷೆಯ ನಿಖರತೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆನ್‌ಲೈನ್ ಸಮಾಲೋಚನೆಗಳು ವೈದ್ಯರಿಗೆ ಹೆಚ್ಚುವರಿ ಆದಾಯದ ಮೂಲವಾಗಿದೆ. ಇದರಿಂದ ವೈದ್ಯರು ತಮ್ಮ ಮನೆಯಲ್ಲಿಯೇ ಇದ್ದುಕೊಂಡು ರೋಗಿಗಳಿಗೆ ಸಲಹೆ ನೀಡಬಹುದಾಗಿದೆ. ಟೆಲಿ ಸಮಾಲೋಚನೆಗಳನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಸೀಮಿತಗೊಳಿಸಬೇಕು ಎಂದು ತಿಳಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಟೆಲಿಕನ್ಸಲ್ಟೇಶನ್ ಸೇವೆಗಳು ಪ್ರಾರಂಭವಾದವು. ಇದೀಗ ಜನರು ಪ್ರಯಾಣ ಅಥವಾ ಕಾಯುವ ಸಮಯವನ್ನು ಉಳಿಸಲು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಚರ್ಮರೋಗ ತಜ್ಞರು ಹೇಳಿದ್ದಾರೆ.
ಬೇಡಿಕೆಗಳ ಆಧಾರದ ಮೇಲೆ ದೂರವಾಣಿ ಕರೆ ಅಥವಾ ವಿಡಿಯೋ ಕರೆ ಮೂಲಕ ಸಮಾಲೋಚನೆಗಳನ್ನು ನೀಡುತ್ತಿದ್ದೇನೆ. ಮೆಡಿಕಲ್ ಹಿಸ್ಟರಿ, ರೋಗ ಇರುವ ಅವಧಿ, ರೋಗ ಲಕ್ಷಣಗಳ ಗಮನಿಸಿ ಚಿಕಿತ್ಸೆ ನೀಡುತ್ತಿದ್ದೇನೆ. ಆದರೆ, ಬಹುತೇಕ ಜನರು ಇನ್ನೂ ವೈಯಕ್ತಿಕ ಸಮಾಲೋಚನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆಂದು ಹೇಳಿದ್ದಾರೆ.
ಐಎಂಎ ಜೂನಿಯರ್ ಡಾಕ್ಟರ್ ನೆಟ್‌ವರ್ಕ್‌ನ ಸದಸ್ಯರೊಬ್ಬರು ಮಾತನಾಡಿ, ಟೆಲಿ-ಸಮಾಲೋಚನೆಗಳು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಹೊಂದಿವೆ ಎಂದು ವಿವರಿಸಿದರು.
ದೂರದ ಪ್ರದೇಶಗಳಲ್ಲಿರುವ ಜನರಿಗೆ ಟೆಲಿಮೆಡಿಸಿನ್ ಸಾಕಷ್ಟು ಸಹಾಯ ಮಾಡಿದೆ. ಇದರಿಂದ ಪ್ರಯಾಣದ ವೆಚ್ಚ ಮತ್ತು ಸಮಯವನ್ನು ಉಳಿಸಬಹುದು. ಆದರೆ, ರೋಗಿಗಳನ್ನು ಸರಿಯಾಗಿ ಸಮಾಲೋಚಿಸದಿದ್ದರೆ ವೈದ್ಯಕೀಯ ನಿರ್ಲಕ್ಷ್ಯದ ಸಾಧ್ಯತೆಗಳೂ ಆಗಲಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


