ಪುನೀತ್ ರಾಜ್ ಕುಮಾರ್ ಕುಟುಂಬದಿಂದ 2 ಸಾವಿರ ಜನರಿಗೆ ಅನ್ನ ಸಂತರ್ಪಣೆ
ಇತ್ತೀಚಿಗೆ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸೋಮವಾರ ಪುಣ್ಯತಿಥಿಯೊಂದಿಗೆ ಸುಮಾರು 2 ಸಾವಿರ ಜನರಿಗೆ ಅನ್ನ ಸಂತರ್ಪಣೆ ಮಾಡಲು ನಿರ್ಧರಿಸಿದೆ.

ಬೆಂಗಳೂರು: ಇತ್ತೀಚಿಗೆ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಂಠೀರವ ಸ್ಟುಡಿಯೋ ಹಾಗೂ ತಮ್ಮ ನಿವಾಸದಲ್ಲಿ ಮಾಡಬೇಕಾದ ಆಚರಣೆಗಾಗಿ ಕುಟುಂಬ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸೋಮವಾರ ಪುಣ್ಯತಿಥಿಯೊಂದಿಗೆ ಸುಮಾರು 2 ಸಾವಿರ ಜನರಿಗೆ ಅನ್ನ ಸಂತರ್ಪಣೆ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ: ಭಾನುವಾರ ಒಂದೇ ದಿನ 1 ಲಕ್ಷಕ್ಕೂ ಅಧಿಕ ಮಂದಿ ಪುನೀತ್ ಸಮಾಧಿಗೆ ಭೇಟಿ: ಅಭಿಮಾನಕ್ಕೆ ಧನ್ಯವಾದ ಎಂದ ರಾಘಣ್ಣ
ಈ ಮಧ್ಯೆ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಹರಿದುಬರುತ್ತಿದ್ದು, ಭಾನುವಾರ ಬಳ್ಳಾರಿಯಿಂದ ಬಂದಿದ್ದ ಜೋಡಿಯೊಂದು ಮದುವೆಯಾಗಿದೆ. ಗುರುಪ್ರಸಾದ್ ಮತ್ತು ಗಂಗಾ ಇಬ್ಬರೂ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದು, ತಮ್ಮ ಪೋಷಕರ ಅನುಮತಿ ಪಡೆದು ಪುನೀತ್ ಸಮಾಧಿ ಬಳಿ ವಿವಾಹವಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಸಾಯುವ ಮುನ್ನ ಅವರ ಆರೋಗ್ಯ ಪರಿಸ್ಥಿತಿ ಅರಿಯುವಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಆಕ್ರೋಶ ಮಡುಗಟ್ಟಿದ ನಂತರ ಡಾ. ರಮಣ ರಾವ್ ಅವರ ಕ್ಲಿನಿಕ್ ಹಾಗೂ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ಮಧ್ಯೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ (ಪನಾ) ಡಾ. ರಮಣರಾವ್ ಅವರ ಬೆಂಬಲಕ್ಕೆ ನಿಂತಿದೆ. ಮಾಧ್ಯಮಗಳಲ್ಲಿನ ಇಂತಹ ತೀರ್ಪು ಸಮಾಜದಲ್ಲಿ ಅಪ ನಂಬಿಕೆಯನ್ನು ಸೃಷ್ಟಿಸಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ ಪ್ರಸನ್ನ ಹೆಚ್ .ಎಂ ಮತ್ತು ಕಾರ್ಯದರ್ಶಿ ಡಾ. ರಾಜಶೇಖರ ವಿಎಲ್ ಹೇಳಿದ್ದಾರೆ. ಡಾ. ರಾವ್ ಅವರ ಕಡೆಗೆ ಬೆರಳು ಮಾಡಲು ಪ್ರಯತ್ನಿಸಿರುವ ಜನರ ವಿರುದ್ಧ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


