ರಾಜ್ಯ

ಕನ್ನಡದಲ್ಲೇ ತೀರ್ಪು ಬರೆದಿದ್ದ ನ್ಯಾ.ಕೆ ವಿ ವಾಸುದೇವ ಮೂರ್ತಿ ನಿಧನ

ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆಯುವ ಜತೆಗೆ ನ್ಯಾಯಾಲಯದಲ್ಲಿ ಕನ್ನಡ ಅನುಷ್ಠಾನಕ್ಕೆ ಶ್ರಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೆ.ವಿ. ವಾಸುದೇವ ಮೂರ್ತಿ (83 ವರ್ಷ) ಅವರು ಶನಿವಾರ ನಿಧನರಾಗಿದ್ದಾರೆ.

ಕನ್ನಡದಲ್ಲೇ ತೀರ್ಪು ಬರೆದಿದ್ದ ನ್ಯಾ.ಕೆ ವಿ ವಾಸುದೇವ ಮೂರ್ತಿ ನಿಧನ
ನ್ಯಾ.ಕೆ ವಿ ವಾಸುದೇವ ಮೂರ್ತಿ
Published On :

ಬೆಂಗಳೂರು: ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆಯುವ ಜತೆಗೆ ನ್ಯಾಯಾಲಯದಲ್ಲಿ ಕನ್ನಡ ಅನುಷ್ಠಾನಕ್ಕೆ ಶ್ರಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೆ.ವಿ. ವಾಸುದೇವ ಮೂರ್ತಿ (83 ವರ್ಷ) ಅವರು ಶನಿವಾರ ನಿಧನರಾಗಿದ್ದಾರೆ.

ಮೂಲಗಳ ಪ್ರಕಾರ ವಾಸುದೇವ ಮೂರ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವಾಸುದೇವ ಮೂರ್ತಿ ಅವರು, ಶನಿವಾರ ಹೃದಯಾಘತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಹನುಮಂತನಗರದಲ್ಲಿ  ವಾಸವಾಗಿದ್ದ ವಾಸುದೇವ ಮೂರ್ತಿ ಅವರು ಪತ್ನಿಯನ್ನು ಅಗಲಿದ್ದಾರೆ. ಸಂಜೆ 6.30ಕ್ಕೆ ಚಾಮರಾಜಪೇಟೆಯ ಟಿಆರ್ ಮಿಲ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ ಎನ್ನಲಾಗಿದೆ.

1971ರಲ್ಲಿ ನ್ಯಾಯಾಧೀಶರಾಗಿ ನೇಮಕವಾದ ಅವರು, ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆದರು. ಅತ್ಯುತ್ತಮ ತೀರ್ಪು ಬರೆಹಕ್ಕಾಗಿ ರಾಜ್ಯ ಸರ್ಕಾರದಿಂದ ಎರಡು ವರ್ಷ ಪುರಸ್ಕೃತರಾಗಿದ್ದರು. ಅಂತೆಯೇ ಕರ್ನಾಟಕ ಕಾನೂನು ಮಂಡಳಿಯ ಕಾರ್ಯದರ್ಶಿಯಾಗಿ ಕೂಡ ಸೇವೆ  ಸಲ್ಲಿಸಿದ್ದರು. ಲಕ್ಷಾಂತರ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ತೀರುವಳಿ ಮಾಡಿಸಿ, 200 ಕೋಟಿ ರೂಗೂ ಅಧಿಕ ಪರಿಹಾರದ ಹಣವನ್ನು ಜನರಿಗೆ ಕೊಡಿಸಿದ್ದರು. 

ತಿಂಗಳಿಗೆ ಕೇವಲ 1ರೂ ವೇತನ ಪಡೆಯುತ್ತಿದ್ದ ನ್ಯಾಯಮೂರ್ತಿಗಳು
ದೆಹಲಿಯ ರಾಷ್ಟ್ರೀಯ ಪರಿಸರ ಮೇಲ್ಮನವಿ ಪ್ರಾಧಿಕಾರದ ರಿಜಿಸ್ಟ್ರಾರ್‌ ಆಗಿದ್ದ ಅವರು, ಬಳಿಕ  ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ವಿಜಿಲೆನ್ಸ್ ನಿರ್ದೇಶಕರಾಗಿದ್ದರು. ತಿಂಗಳಿಗೆ ಕೇವಲ 1 ರೂ ವೇತನ ಪಡೆಯುತ್ತಿದ್ದರು. ನಾಲ್ಕೂವರೆ ವರ್ಷ ಕಾರ್ಯನಿರ್ವಹಿಸಿದ ಅವರು, ಆ ವೇಳೆ ಮಹಾನಗರ ಪಾಲಿಕೆಯ  ಅನೇಕ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.