ಸಿಲಿಕಾನ್ ಸಿಟಿ ಪೊಲೀಸರಿಂದ ಕೋವಿಡ್-19 ಜಾಗೃತಿ ವಿಡಿಯೋ ಬಿಡುಗಡೆ
ದಿನೇ ದಿನೇ ಕೊರೊನಾ ಎರಡನೇ ಅಲೆ ತನ್ನ ಬಾಹು ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೀಗಾಗಿ ಈ ಕುರಿತು ಸಾರ್ವಜನಿಕರು ಜಾಗೃತಿಯಿಂದ ಇರಬೇಕು ಎಂದು ಕೋರಿ ನಗರ ಕಮಿಷನರೇಟ್ ವತಿಯಿಂದ ವಿಡಿಯೋ ಒಂದು ಬಿಡುಗಡೆ ಮಾಡಲಾಗಿದೆ.

ಬೆಂಗಳೂರು: ದಿನೇ ದಿನೇ ಕೊರೊನಾ ಎರಡನೇ ಅಲೆ ತನ್ನ ಬಾಹು ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೀಗಾಗಿ ಈ ಕುರಿತು ಸಾರ್ವಜನಿಕರು ಜಾಗೃತಿಯಿಂದ ಇರಬೇಕು ಎಂದು ಕೋರಿ ನಗರ ಕಮಿಷನರೇಟ್ ವತಿಯಿಂದ ವಿಡಿಯೋ ಒಂದು ಬಿಡುಗಡೆ ಮಾಡಲಾಗಿದೆ.
ಪೇದೆಯಿಂದ ಹಿಡಿದು ಪೊಲೀಸ್ ಆಯುಕ್ತರವರೆಗೂ ಎಲ್ಲರೂ ವಿಡಿಯೋದಲ್ಲಿ ಜಾಗೃತಿ ಕುರಿತಾದ ಕಿವಿ ಮಾತುಗಳನ್ನು ಹೇಳಿದ್ದಾರೆ.
ಮಾಸ್ಕ್, ಸಾಮಾಜಿಕ ಅಂತರ, ಲಸಿಕೆ ಇವು ಕೋವಿಡ್ ಸಾಂಕ್ರಾಮಿಕ ವಿರುದ್ಧ ಹೋರಾಡಲು ನಮ್ಮ ಬಳಿಯಿರುವ ಅಸ್ತ್ರಗಳು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡದೇ ಈಗಲೇ ಜಾಗೃತರಾಗೋಣ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಹಾಗೂ ತಪ್ಪದೇ
ಲಸಿಕೆ ತೆಗೆದುಕೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


