ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ: ಅತ್ತಿಗೆ, ಸೋದರಳಿಯನ ಬಂಧನ
ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಕದಿರೇಶ್ ಅವರ ಇಬ್ಬರು ಸಂಬಂಧಿಕರನ್ನು ಪಶ್ಚಿಮ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ರೇಖಾ ಅವರ ಅತ್ತಿಗೆ ಮಾಲಾ ಮತ್ತು ಅವರ ಪುತ್ರ ಅರುಣ್ ಅವರನ್ನು ತನಿಖಾಧಿಕಾರಿಗಳು ಪ್ರಶ್ನಿಸಿದ ನಂತರ ಬಂಧಿಸಲಾಯಿತು.

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಕದಿರೇಶ್ ಅವರ ಇಬ್ಬರು ಸಂಬಂಧಿಕರನ್ನು ಪಶ್ಚಿಮ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ರೇಖಾ ಅವರ ಅತ್ತಿಗೆ ಮಾಲಾ ಮತ್ತು ಅವರ ಪುತ್ರ ಅರುಣ್ ಅವರನ್ನು ತನಿಖಾಧಿಕಾರಿಗಳು ಪ್ರಶ್ನಿಸಿದ ನಂತರ ಬಂಧಿಸಲಾಯಿತು.
ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಇತರ ಐದು ಶಂಕಿತರನ್ನು ಬಂಧಿಸಿದ್ದಾರೆ - ಪೀಟರ್, ಸೂರ್ಯ, ಸ್ಟೀಫನ್, ಅಜಯ್ ಮತ್ತು ಪುರುಷೋತ್ತಮ್. "ಮಾಲಾ ರೇಖಾ ಅವರ ಪತಿ ಕದಿರೇಶ್ ಅವರ ಅಕ್ಕ. ಬಂಧಿತ ವ್ಯಕ್ತಿಗಳು ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ ಮಾಲಾ ಮತ್ತು ಅವರ ಮಗನನ್ನು ಪ್ರಶ್ನಿಸಲಾಯಿತು. ಕೊಲೆಗಾರರು ತಾಯಿ ಮತ್ತು ಮಗನೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ ಆದ್ದರಿಂದ ಅವರನ್ನು ಬಂಧಿಸಲಾಗಿದೆ"ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
ಪೀಟರ್ ರೇಖಾ ವಿರುದ್ಧ ದ್ವೇಷ ಸಾಧಿಸುತ್ತಿದ್ದನೆಂದು ತಿಳಿದುಬಂದಿದೆ. “ಪೀಟರ್ ಕದಿರೇಶ್‌ಗೆ ಹತ್ತಿರವಾಗಿದ್ದನು ಮತ್ತು ಕದಿರೇಶ್ ಕೊಲೆಯಾದ ನಂತರ ರೇಖಾ ಪೀಟರ್ ಗೆ ಯಾವುದೇ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಹಲವಾರು ಸಂದರ್ಭಗಳಲ್ಲಿ ಅವನನ್ನು ಅವಮಾನಿಸಿದ್ದರು. ಅದರಿಂದ ಪೀಟರ್ ರೇಖಾಳನ್ನು ದ್ವೇಷಿಸಲು ಪ್ರಾರಂಭಿಸಿದ್ದನು. ಆ ವೇಳೆ ಇತರ ಆರೋಪಿಗಳು ಅವನನ್ನು ಸಂಪರ್ಕಿಸಿ , ಅವರು ರೇಖಾ ಅವನೊಂದಿಗೆ ಹೇಗೆ ವರ್ತಿಸುತ್ತಿದ್ದಾರೆ ಎನ್ನುವುದು ಮತ್ತು ಆಕೆ ಬೆಳೆಯುತ್ತಿರುವ ರೀತಿ ಬಗ್ಗೆ ಅಸನಾಧಾನ ಹೊರಹಾಕಿದ್ದಾರೆ.. ವೈಯಕ್ತಿಕ ಪೈಪೋಟಿ ಮತ್ತು ಅಸೂಯೆ ಈ ಕೊಲೆಗೆ ಎರಡು ಪ್ರಮುಖ ಕಾರಣಗಳಾಗಿದೆ." ಅಧಿಕಾರಿ ಹೇಳಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸಿದ ಇತರ ಜನರಿಗೆ ಪೊಲೀಸ್ ತಂಡಗಳು ಶೋಧ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


