ರಾಜ್ಯ

ಸೌಜನ್ಯ ಪ್ರಕರಣದಲ್ಲಿ ತಂದೆ, ತಾಯಿ ಹಣ ಮಾಡಿಕೊಂಡ್ರಾ? ವಕೀಲ ಅಮೃತೇಶ್ ಗಂಭೀರ ಆರೋಪ

ಈ ಪ್ರಕರಣದಲ್ಲಿ ಸೌಜನ್ಯ ತಂದೆ, ತಾಯಿಯೇ ಹಣ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸೌಜನ್ಯ ಪ್ರಕರಣದಲ್ಲಿ ತಂದೆ, ತಾಯಿ ಹಣ ಮಾಡಿಕೊಂಡ್ರಾ? ವಕೀಲ ಅಮೃತೇಶ್ ಗಂಭೀರ ಆರೋಪ
ವಕೀಲ ಅಮೃತೇಶ್
Published On :

ಬೆಂಗಳೂರು: 2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆಯ ಪ್ರಕರಣದಲ್ಲಿ ಆಕೆಯ ತಂದೆ, ತಾಯಿ ವಿರುದ್ಧ ಹೈಕೋರ್ಟ್ ವಕೀಲ ಅಮೃತೇಶ್ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿಗೆ ಕಾರಣವಾದ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಜೊತೆಗೆ ಪ್ರಕರಣದ ಮುಂದಿನ ತನಿಖೆ ಮತ್ತು ನ್ಯಾಯದ ನಿರೀಕ್ಷೆ ಬಗ್ಗೆ ಚರ್ಚೆ ನಡೆಸಿದ್ದಾರೆ ಹಾಗೂ ಪ್ರಕರಣದಲ್ಲಿ ಯರ‍್ಯಾರು ಎಷ್ಟು ಹಣ ಪಡೆದುಕೊಂಡರು ಎನ್ನುವ ಆಡಿಯೋ ರಿಲೀಸ್ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಸೌಜನ್ಯ ತಂದೆ, ತಾಯಿಯೇ ಹಣ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಘಟನೆ ಆದ ಮೇಲೆ ನ್ಯಾಯಕ್ಕಾಗಿ ಬೇಡಿಕೆ ಇಟ್ಟರು. ಒಂದು ಪ್ರೆಸ್ ಮೀಟ್ ಮಾಡಿದ್ದರು. ಮೊದಲ ಪ್ರೆಸ್ ಮೀಟ್ ಆದ ಮೇಲೆ ಒಂದು ವರ್ಷ ಸುಮ್ಮನಿದ್ದರು. ಆನಂತರ ಒಂದು ವರ್ಷದ ಬಳಿಕ ಎರಡನೇ ಪ್ರೆಸ್ ಮೀಟ್ ಮಾಡಿದ್ದರು. ಈ ನಡುವೆ ಒಂದು ವರ್ಷ ಯಾಕೆ ಸುಮ್ಮನಿದ್ರು? ಇದರ ನಡುವೆ ಏನೇನಾಯ್ತು ಅಂತ ಗೊತ್ತಾಗಬೇಕು ಅಲ್ವಾ? ಎಂದರು.

ಈ ಸಮಯದಲ್ಲೇ ಈಗಿನ ಮಹಾಪುರುಷ ಮಹೇಶ್ ತಿಮರೋಡಿ ಎಂಟ್ರಿ ಕೊಟ್ಟಿದ್ದು. ಯರ‍್ಯಾರು ಎಷ್ಟೆಷ್ಟು ದುಡ್ಡು ಮಾಡಿಕೊಂಡರು ಅನ್ನೋದು ಗೊತ್ತಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದೇ ವೇಳೆ ಸೌಜನ್ಯ ಮಾವ ವಿಠ್ಠಲ ಗೌಡ ಹಣ ಖರ್ಚು ಮಾಡಿದ ವಿಚಾರವಾಗಿ ಆಡಿಯೋ ಬಿಡುಗಡೆ ಮಾಡಿದ್ದಾರೆ.

14 ವರ್ಷಗಳ ನಂತರ ಧರ್ಮಸ್ಥಳ ಪೊಲೀಸರು ನಾಪತ್ತೆ ದೂರು ತೆಗೆದುಕೊಳ್ಳುತ್ತಾರೆ. ನಂತರ ರೇಪ್ ಆಂಡ್ ಮರ್ಡರ್ ಅಂತ ಎಫ್‌ಐಆರ್ ಆಗಿತ್ತು. ನಂತರ ಈ ಪ್ರಕರಣವನ್ನು ಸಿಐಡಿ, ಎಸ್‌ಐಟಿಗೆ ಕೊಡುತ್ತಾರೆ. ದೇವಾಲಯಗಳು, ಮಠ ಮಾನ್ಯಗಳನ್ನ ಟಾರ್ಗೆಟ್ ಮಾಡುವ ಒಂದು ಗುಂಪಿದೆ. ಆ ಗುಂಪು ಈ ರೇಪ್ ಮರ್ಡರ್ ಕೇಸ್‌ನಲ್ಲಿ ಕ್ಷೇತ್ರದವರ ಕೈವಾಡ ಎನ್ನುವ ಗುಲ್ಲೇಬ್ಬಿಸಿದ್ದರು ಎಂದು ಆರೋಪಿಸಿದ್ದಾರೆ.

ಆರಂಭದಲ್ಲಿ ಸೌಜನ್ಯ ತಂದೆ, ತಾಯಿ ಧರ್ಮಸ್ಥಳದ ಪರವಾಗಿದ್ದರು. ಎಲ್ಲರೂ ಸಪೋರ್ಟ್ ಮಾಡಿದ್ದರು ಅಂತ ಹೇಳಿಕೆ ನೀಡಿದ್ದರು. ಆದರೆ ಧರ್ಮಸ್ಥಳದವರು ಯಾವುದೇ ಒತ್ತಡ ಮಾಡಿರಲಿಲ್ಲ. ರೇಪ್ ಆಂಡ್ ಮರ್ಡರ್ ಸ್ಥಳದಲ್ಲಿ ನಡೆದಿದ್ದ ಮಹಜರ್ ವೇಳೆಯೂ ಸಂತೋಷ್ ರಾವ್‌ನನ್ನು ಯಾವುದೇ ರೀತಿ ಬಲವಂತವಾಗಿ ಕರೆದುಕೊಂಡು ಹೋಗಿರಲಿಲ್ಲ. ಆಗ ಅವನು ಸಹಜ ಸ್ಥಿತಿಯಲ್ಲಿ ಇದ್ದ ಹಾಗೂ ಸ್ಥಳಕ್ಕೆ ಹೋಗಿ ಅವನೇ ಸಾಕ್ಷ್ಯ ವಸ್ತುಗಳನ್ನ ಎತ್ತಿಕೊಟ್ಟಿದ್ದ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.