ಬೆಂಗಳೂರಿನಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್: ರಾಜಾಜಿನಗರ ಅಪಾರ್ಟ್ ಮೆಂಟ್ ನ 21 ಮಂದಿಗೆ ಕೋವಿಡ್ ಸೋಂಕು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ವರದಿಯಾಗಿದ್ದು, ರಾಜಾಜಿನಗರ ಅಪಾರ್ಟ್ ಮೆಂಟ್ ನ 21 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ವರದಿಯಾಗಿದ್ದು, ರಾಜಾಜಿನಗರ ಅಪಾರ್ಟ್ ಮೆಂಟ್ ನ 21 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಒಂದು ವಾರದ ಅವಧಿಯಲ್ಲಿ ರಾಜಾಜಿನಗರದ ಅಪಾರ್ಟ್‌ಮೆಂಟ್‌ನಲ್ಲಿ 21 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಇದು ಬೆಂಗಳೂರಿನಲ್ಲಿ ಮತ್ತೊಂದು ಕ್ಲಸ್ಟರ್ ಸೃಷ್ಟಿಗೆ ಕಾರಣವಾಗಿದೆ. ರಾಜಾಜಿನಗರದಲ್ಲಿರುವ ಇಂದ್ರಪ್ರಸ್ಥ ಅಪಾರ್ಟ್ ಮೆಂಟ್ ನಲ್ಲಿ ಹಲವು ನಿವಾಸಿಗಳು ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಕೆಲವು ನಿವಾಸಿಗಳು ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ ತ್ರಿಲೋಕ್ ಚಂದ್ರ ಅವರು, 'ನಾವು ಅವರ ಪ್ರಯಾಣದ ಇತಿಹಾಸವನ್ನು ಸಂಗ್ರಹಿಸುತ್ತಿದ್ದೇವೆ. ನಾವು ಎಲ್ಲಾ ಇತರz ನಿವಾಸಿಗಳನ್ನು ಸಹ ಪರೀಕ್ಷಿಸುತ್ತಿದ್ದೇವೆ. ಯಾವ ರೂಪಾಂತರವು ಕ್ಲಸ್ಟರ್‌ಗೆ ಕಾರಣವಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು.
ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ 98 ಸಕ್ರಿಯ ಕಂಟೈನ್‌ಮೆಂಟ್ ವಲಯಗಳನ್ನು ಹೊಂದಿದ್ದು ಈ ಪೈಕಿ 31 ವಲಯಗಳು ಬೊಮ್ಮನಹಳ್ಳಿ ವಲಯದಲ್ಲಿವೆ. ಇದರ ನಂತರ ದಕ್ಷಿಣ ವಲಯದಲ್ಲಿ 19, ಮಹದೇವಪುರದಲ್ಲಿ 14, ಪೂರ್ವ ವಲಯದಲ್ಲಿ 13, ಪಶ್ಚಿಮದಲ್ಲಿ 10, ಯಲಹಂಕದಲ್ಲಿ 6 ಮತ್ತು ಆರ್‌ಆರ್ ನಗರದಲ್ಲಿ ಐದು ಕಂಟೈನ್ ಮೆಂಟ್ ವಲಯಗಳಿವೆ. ದಾಸರಹಳ್ಳಿಯಲ್ಲಿ ಯಾವುದೇ ಕಂಟೈನ್‌ಮೆಂಟ್ ವಲಯಗಳಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


