ತೆರಿಗೆ ವಿವಾದ: ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಬಿತ್ತು ಬೀಗ..!; ಗೌರವ್ ಗುಪ್ತಾ ಹೇಳಿದ್ದೇನು?
ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಬೀಗ ಬಿದ್ದಿದೆ.

ಬೆಂಗಳೂರು: ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಬೀಗ ಬಿದ್ದಿದೆ.
ಹೌದು.. ತೆರಿಗೆ ಕಟ್ಟದ ಆರೋಪ ಎದುರಿಸುತ್ತಿರುವ ನಗರದ ಪ್ರತಿಷ್ಠಿತ ಮಂತ್ರಿಮಾಲ್ಗೆ ಮತ್ತೆ ಬಿಬಿಎಂಪಿ ಬೀಗ ಜಡಿದಿದೆ. 27 ಕೋಟಿ ರೂಪಾಯಿ ತೆರಿಗೆಯನ್ನ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ಅಧಿಕಾರಿಗಳಿಂದ ಮಂತ್ರಿಮಾಲ್ಗೆ ಬೀಗ ಹಾಕಿದ್ದಾರೆ.
ಮೂರು ವರ್ಷಗಳ ಅವಧಿಯಲ್ಲಿ ಮಂತ್ರಿಮಾಲ್ 36 ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನ ಕಟ್ಟಬೇಕಿತ್ತು. ಹೀಗಾಗಿ ಕಳೆದ ಅಕ್ಟೋಬರ್ನಲ್ಲಿ ಬೀಗ ಕೂಡ ಜಡಿಯಲಾಗಿತ್ತು. ಈ ಸಂದರ್ಭದಲ್ಲಿ 5 ಕೋಟಿ ಹಣವನ್ನ ಮಂತ್ರಿಮಾಲ್ ನೀಡಿತ್ತು.
ಇದನ್ನೂ ಓದಿ: ಬೀಗ ಜಡಿಯುತ್ತಿದ್ದಂತೆ ಎಚ್ಚೆತ್ತ ಮಂತ್ರಿ ಮಾಲ್ ಆಡಳಿತ ಮಂಡಳಿ: ಬಿಬಿಎಂಪಿಗೆ ಸ್ಥಳದಲ್ಲಿಯೇ 5 ಕೋಟಿ ರೂ. ಡಿಡಿ ಪಾವತಿ
ಅಕ್ಟೋಬರ್ 31ರ ಬಳಿಕ ಹಲವು ಬಾರಿ ನೋಟಿಸ್ ನೀಡಿದ್ದರೂ ಉಳಿದ ಹಣವನ್ನ ಮಂತ್ರಿಮಾಲ್ ನೀಡಿರಲಿಲ್ಲ ಎನ್ನಲಾಗಿದೆ. ಅಕ್ಟೋಬರ್ ಮುಗಿದರೂ ತೆರಿಗೆ ಕಟ್ಟದಿದ್ದರಿಂದ ನವೆಂಬರ್ 15ರಂದು ಮತ್ತೆ ಬೀಗ ಹಾಕಲು ಮುಂದಾಗಿತ್ತು. ನವೆಂಬರ್ 15ರಂದು ಮಂತ್ರಿಮಾಲ್ಗೆ 15 ದಿನಗಳ ಕಾಲಾವಕಾಶವನ್ನ ಪಾಲಿಕೆ ಕೊಟ್ಟಿತ್ತು. ಆದರೂ ತೆರಿಗೆ ಕಟ್ಟದ ಹಿನ್ನಲೆಯಲ್ಲಿ ಇಂದು ಮಾಲ್ ಗೆ ಬೀಗ ಜಡಿಯಲಾಗಿದೆ.
2 ಬಾರಿ ನೋಟಿಸ್ ನೀಡಿದ್ದೇವೆ., ಇನ್ನಾವುದೇ ನೋಟಿಸ್ ನೀಡುವ ಅವಶ್ಯಕತೆ ಇಲ್ಲ: ಗೌರವ್ ಗುಪ್ತಾ
ಇದೇ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು, 'ಈಗಾಗಲೇ ನಾವು 2 ಬಾರಿ ನೋಟಿಸ್ ನೀಡಿದ್ದೇವೆ. ಇನ್ನು ಯಾವುದೇ ಅವಕಾಶ ಕೊಡುವ ಅವಶ್ಯಕತೆ ಇಲ್ಲ. ಮಾಲ್ ಗೆ ಉಳಿದ ತೆರಿಗೆ ಕಟ್ಟದಿದ್ದರೆ ಬಹಳ ಕಠಿಣ ಕ್ರಮವನ್ನು ನಾವು ಜರುಗಿಸಲು ಸಿದ್ಧರಿದ್ದೇವೆ. ಈ ವಿಷಯದಲ್ಲಿ ಯಾವುದೇ ದಯೆ, ಕರುಣೆ ಇಲ್ಲ, ಅದರ ವಿಚಾರವಾಗಿ ಇಂದು ಬೆಳಿಗ್ಗೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


