ಕರಾಳ ಶುಕ್ರವಾರದ ಮಳೆ, ಪ್ರವಾಹಕ್ಕೆ ಕೊಚ್ಚಿ ಹೋದ ಬೆಂಗಳೂರಿನ 'ಸ್ಮಾರ್ಟ್ ಸಿಟಿ' ಇಮೇಜ್
ಸ್ಮಾರ್ಟ್ ಸಿಟಿ ಇಮೇಜ್ ಬೆಂಗಳೂರಿನಿಂದ ನೀರಿನಲ್ಲಿ ಕೊಚ್ಚಿ ಹೋಗಿದೆ ಎನಿಸುತ್ತಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಬೆಂಗಳೂರಿನ ಹಲವು ಭಾಗಗಳು ತೀವ್ರ ಮಟ್ಟದಲ್ಲಿ ಹಾನಿಯಾಗಿದ್ದು ಐಟಿ ಸಿಟಿ ಎಂಬ ಕೀರ್ತಿಗೆ ಭಾಜನವಾಗಿದ್ದ ಬೆಂಗಳೂರಿನ ನಿಜರೂಪ ದರ್ಶನವಾಗುತ್ತಿದೆ.

ಬೆಂಗಳೂರು: ಸ್ಮಾರ್ಟ್ ಸಿಟಿ ಇಮೇಜ್ ಬೆಂಗಳೂರಿನಿಂದ ನೀರಿನಲ್ಲಿ ಕೊಚ್ಚಿ ಹೋಗಿದೆ ಎನಿಸುತ್ತಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಬೆಂಗಳೂರಿನ ಹಲವು ಭಾಗಗಳು ತೀವ್ರ ಮಟ್ಟದಲ್ಲಿ ಹಾನಿಯಾಗಿದ್ದು ಐಟಿ ಸಿಟಿ ಎಂಬ ಕೀರ್ತಿಗೆ ಭಾಜನವಾಗಿದ್ದ ಬೆಂಗಳೂರಿನ ನಿಜರೂಪ ದರ್ಶನವಾಗುತ್ತಿದೆ.
ಮಳೆಗಾಲದಲ್ಲಿ ತೀವ್ರ ಮಳೆಗೆ, ಪ್ರವಾಹ ಉಂಟಾದರೆ ಏನು ಮಾಡಬೇಕು, ಯಾವ ರೀತಿ ಸಜ್ಜಾಗಬೇಕು ಎಂದು ಅಧಿಕಾರಿಗಳು, ಸರ್ಕಾರ ಯೋಚಿಸಿ ಅದರಂತೆ ನಡೆದುಕೊಂಡರೆ ನಿಜವಾದ ಸ್ಮಾರ್ಟ್ ಸಿಟಿಯಾಗುತ್ತದೆ ಎಂಬುದು ನಿವಾಸಿಗಳ ಅಭಿಪ್ರಾಯ.
ಬೆಂಗಳೂರು, ಮಂಡ್ಯ, ತುಮಕೂರುಗಳಲ್ಲಿ ಇನ್ನು ಕೆಲ ದಿನ ಮಳೆಯಾಗಬಹುದೆಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೊನ್ನೆಯ ಮಳೆಗೆ ನಾವೆಲ್ಲರೂ ಕಳೆದುಕೊಂಡಿದ್ದೇವೆ. ನಮ್ಮ ಬಟ್ಟೆಬರೆ, ಆಹಾರ ಪದಾರ್ಥಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ನಮ್ಮಲ್ಲೀಗ ಏನೂ ಉಳಿದಿಲ್ಲ, ಸರ್ಕಾರ ಏನು ಮಾಡುತ್ತದೆ, ಅಕ್ರಮ ಲೇ ಔಟ್ ಗಳು ಕಟ್ಟುವಾಗಲೇ ಸರ್ಕಾರ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಲ್ಲವೇ ಎಂದು ದತ್ತಾತ್ರೇಯ ನಿವಾಸಿ ಗೌರಮ್ಮ ಹೇಳುತ್ತಾರೆ. ಬೇರೆ ನಿವಾಸಿಗಳು ಕೂಡ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮೊನ್ನೆಯ ಮಳೆಗೆ ಹೆದರಿ ನಿನ್ನೆ ಮತ್ತೊಮ್ಮೆ ಇಂಥ ಮಳೆ ಸುರಿಯುವುದು ಬೇಡಪ್ಪಾ ಎಂದು ಜನರು ಆಕಾಶದತ್ತ ನೋಡಿ ಕೈಮುಗಿಯುತ್ತಿದ್ದರು.
ವೃಷಭಾವತಿ ಕೆರೆ ತುಂಬಿ ಹರಿದು ಕೊಚ್ಚಿ ಹೋಗಿ ಪಕ್ಕದ ಲೇ ಔಟ್ ನ ಒಂದು ಗೋಡೆ ಕುಸಿದುಬಿದ್ದ ನಂತರ ತೀವ್ರ ಮಳೆ ಬಂದಾಗ ನಾವು ಹೊರಗೆ ಹೋಗುವುದಿಲ್ಲ ಎನ್ನುತ್ತಾರೆ ಕೆಂಗೇರಿ ನಿವಾಸಿ ಮೋಹನ್ ಆರ್.

ಅನೇಕ ರಸ್ತೆಗಳು ನೀರಿನಿಂದ ಮುಳುಗಿಹೋಗಿವೆ. ಅನೇಕ ಸ್ಥಳಗಳಲ್ಲಿ, ಗುಂಡಿಗಳು ಮತ್ತೆ ಉದ್ಭವಿಸಿವೆ. ಕೆಲವು ಪ್ರದೇಶಗಳಲ್ಲಿ, ಹೊಸದಾಗಿ ಹಾಕಲಾದ ರಸ್ತೆಗಳು ಸಹ ಬಾಯಿ ತೆರೆದು ನಿಂತಿದ್ದು, ಸವಾರರಿಗೆ ಕಷ್ಟವಾಗಿದೆ. ಅನೇಕ ಸ್ಥಳಗಳಲ್ಲಿ, ರಸ್ತೆಗಳ ವಿಭಜಕಗಳು ಕುಸಿದಿದ್ದು, ಸಂಚಾರ ಪೊಲೀಸರು ಅವಶೇಷಗಳ ಬಳಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದಾರೆ. ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವಾಹನ ಸೇವಾ ಕೇಂದ್ರಗಳು ಸಹ ರಸ್ತೆಗಳಲ್ಲಿ ಸಿಲುಕಿರುವ ವಾಹನಗಳನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದವು.
ಬಿಬಿಎಂಪಿ ಮಳೆನೀರನ್ನು ಹೊರಹಾಕಿದ ಪ್ರದೇಶಗಳಲ್ಲಿ, ಎಲ್ಲಾ ಕಸ ಮತ್ತು ನಿರ್ಮಾಣ ಅವಶೇಷಗಳನ್ನು ಸ್ವಚ್ಛಗೊಳಿಸಲು ಪೌರಕರ್ಮಿಕರನ್ನು ಕರೆಸಲಾಗಿದೆ. ಆರೋಗ್ಯ ಸಮಸ್ಯೆಗಳು ವರದಿಯಾಗದಂತೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದು, ಬ್ಲೀಚಿಂಗ್ ಪೌಡರ್ ಮಾಡುವ ಕೆಲಸವನ್ನು ಆರೋಗ್ಯ ಕಾರ್ಯಕರ್ತರಿಗೆ ವಹಿಸಲಾಗಿದೆ.
ತಾತ್ಕಾಲಿಕ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಆದರೆ ನಾಗರಿಕರು ಅಲ್ಲಿಗೆ ಸ್ಥಳಾಂತರಿಸಲು ಆಸಕ್ತಿ ಹೊಂದಿಲ್ಲ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಹೇಳಿದರು. ಶುಕ್ರವಾರ ರಾತ್ರಿ, ನೆಲಮಹಡಿಯಲ್ಲಿ ಉಳಿದುಕೊಂಡಿರುವವರು, ಹೆಚ್ಚಿನ ಮಹಡಿಗೆ ಸ್ಥಳಾಂತರಗೊಂಡು ನೀರಿನ ಮಟ್ಟ ಕಡಿಮೆಯಾದಾಗ ಹಿಂತಿರುಗಿದ್ದರು. ಈಗಲೂ ಅವರಿಗೆ ಶಿಬಿರಗಳನ್ನು ಸ್ಥಾಪಿಸಲಾಗಿದೆ, ಆದರೆ ಅವರು ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


