ಬೆಂಗಳೂರು: ಕಳ್ಳನನ್ನು ಹಿಡಿದ 15 ಪೊಲೀಸರಿಗೆ ಕ್ವಾರಂಟೈನ್ ಶಿಕ್ಷೆ!
ಕಬ್ಬಿಣ ಕದಿಯುತ್ತಿದ್ದ ಕಳ್ಳನನ್ನು ಕಷ್ಟಪಟ್ಟು ಹಿಡಿದಿದ್ದ ಪೊಲೀಸರಿಗೆ ಇದೀಗ ಕೊರೋನಾ ಭೀತಿ ಶುರವಾಗಿದ್ದು 15 ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರು: ಕಬ್ಬಿಣ ಕದಿಯುತ್ತಿದ್ದ ಕಳ್ಳನನ್ನು ಕಷ್ಟಪಟ್ಟು ಹಿಡಿದಿದ್ದ ಪೊಲೀಸರಿಗೆ ಇದೀಗ ಕೊರೋನಾ ಭೀತಿ ಶುರವಾಗಿದ್ದು 15 ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯ ಜೆಜೆ ನಗರದ ನಿವಾಸಿಯೊಬ್ಬನನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಯಾವುದಕ್ಕೂ ಇರಲಿ ಅಂತಾ ಪೊಲೀಸರು ಆತನಿಗೆ ಕೊರೋನಾ ಪರೀಕ್ಷೆ ಮಾಡಿಸಿದ್ದರು.
ಕೊರೋನಾ ಪರೀಕ್ಷೆಯಲ್ಲಿ ಕಳ್ಳನಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಇದೀಗ ಪೊಲೀಸರು ಕೊರೋನಾ ಭೀತಿಗೆ ಒಳಗಾಗಿದ್ದಾರೆ. ಹೀಗಾಗಿ 22 ಪೊಲೀಸರು ಸದ್ಯಕ್ಕೆ ಕ್ವಾರಂಟೈನ್ ಮಾಡಲಾಗಿದೆ.
ಹೆಬ್ಬಗೋಡಿಯ ಲಾರ್ಡ್ಜ್ ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


