ಲಾಕ್ ಡೌನ್ ಎಫೆಕ್ಟ್: 42 ದಿನಗಳ ಅಬಕಾರಿ ಆದಾಯದಲ್ಲಿ 2,856 ಕೋಟಿ ನಷ್ಟ!
42 ದಿನಗಳ ಕೊರೋನಾವೈರಸ್ ಲಾಕ್ ಡೌನ್ ಅವಧಿಯಲ್ಲಿ ಅಬಕಾರಿ ಆದಾಯದಲ್ಲಿ 2, 856 ಕೋಟಿಯಷ್ಟು ನಷ್ಟವಾಗಿದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ.

ಬೆಂಗಳೂರು: ಮದ್ಯ ಮಾರಾಟವು ಕ್ಷೀಣಿಸುತ್ತಿರುವ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ತಂದುಕೊಡುವ ಉತ್ತಮ ಸಂಪನ್ಮೂಲವಾಗಿದೆ.ಇದರಿಂದ ದಿನಕ್ಕೆ 68 ಕೋಟಿ ರೂಪಾಯಿ ಆದಾಯದ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಅದು ಇದೀಗ ಕಡಿಮೆಯಾಗಿದ್ದು, 42 ದಿನಗಳ ಕೊರೋನಾವೈರಸ್ ಲಾಕ್ ಡೌನ್ ಅವಧಿಯಲ್ಲಿ ಅಬಕಾರಿ ಆದಾಯದಲ್ಲಿ 2, 856 ಕೋಟಿಯಷ್ಟು ನಷ್ಟವಾಗಿದೆ.
ಇಷ್ಟೊಂದು ದೊಡ್ಡ ಮೊತ್ತದ ನಷ್ಟವನ್ನು ಮರಳಿ ಪಡೆಯಲು 10 ತಿಂಗಳು ಬೇಕಾಗಲಿದೆ ಎಂದು ಹೇಳಿದ ಅಬಕಾರಿ ಸಚಿವ ಹೆಚ್ . ನಾಗೇಶ್, ಆದಾಯದ ಗುರಿ ಪ್ರಮುಖವಾಗಿರುವಂತೆ ಜನರು ಜೀವ ಕೂಡಾ ಮುಖ್ಯವಾಗಿದೆ. ಆದ್ದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗಿದೆ.ಈ ನಿಟ್ಟಿನಲ್ಲಿ ನಮ್ಮ ತಂಡ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಪುನರ್ ಮದ್ಯ ಆರಂಭಗೊಂಡ ನಂತರ ಮೊದಲ ದಿನವೇ 45 ಕೋಟಿಯಷ್ಟು ದಾಖಲೆ ಪ್ರಮಾಣದಲ್ಲಿ ಮಧ್ಯ ಮಾರಾಟವಾಗಿದೆ. ಎರಡನೇ ದಿನ 197 ಕೋಟಿ ಹಾಗೂ ಮೂರನೇ ದಿನ 231 ಕೋಟಿ ಆದಾಯ ಬಂದಿದೆ. ವಾಣಿಜ್ಯ ಇಲಾಖೆ ನಂತರ ಅಬಕಾರಿ ಇಲಾಖೆ ಹೆಚ್ಚಿನ ಪ್ರಮಾಣದ ಆದಾಯ ತಂದುಕೊಡಲಿದೆ. 2019-20ನೇ ಸಾಲಿನಲ್ಲಿ 21,000 ಕೋಟಿ ರೂ.ಗಳ ಗುರಿ ಸಾಧಿಸಿದ್ದು, ಅದ್ಕಕೂ ಹಿಂದಿನ ವರ್ಷ 19,943 ಕೋಟಿ ರೂ. ಆದಾಯ ಸಂಗ್ರಹಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಯಾವಾಗಲೂ ನಿಗದಿತ ಗುರಿಗಿಂತಲೂ ಹೆಚ್ಚುವರಿಯಾಗಿ ಆದಾಯ ಸಂಗ್ರಹಿಸಲಾಗುತ್ತಿದೆ. ಲಾಕ್ ಡಾನ್ ನಿಂದಾಗಿ ನಷ್ಟವಾಗಿರುವ ಆದಾಯವನ್ನು 10 ತಿಂಗಳೊಳಗೆ ಸಂಗ್ರಹಿಸಬಹುದು ಎಂದು ವಿಶ್ಲೇಷಕ ಬಿಎಸ್ ಮೂರ್ತಿ ಹೇಳಿದ್ದಾರೆ.
ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯದಲ್ಲಿ ಮನೆಗಳಲ್ಲಿ ಮದ್ಯ ಪೂರೈಕೆ ಮಾಡುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ತಂದು ಆದಾಯ ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದಾಯ ಹಾಗೂ ವೆಚ್ಚದ ಇತಿಮಿತಿಯಲ್ಲಿ ವೆಚ್ಚ ಮಾಡಬೇಕಾಗಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಎಲ್ಲಾ ರಾಜ್ಯಗಳಲ್ಲಿ ಇದೇ ಸ್ಥಿತಿಯಲ್ಲಿವೆ ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಐಎಸ್ ಎನ್ ಪ್ರಸಾದ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


