ಬಜೆಟ್ ಎಫೆಕ್ಟ್: ಮದ್ಯ ದುಬಾರಿ, ನಾಳೆಯಿಂದ ಹೊಸ ದರ!
ಮದ್ಯ ಮಾರಾಟ ಆರಂಭವಾದ ಖುಷಿಯಲ್ಲಿದ್ದ ಮದ್ಯಪ್ರಿಯರು ಈ ಹಿಂದಿಗಿಂತ ಹೆಚ್ಚಿನ ಬೆಲೆ ನೀಡಿ ಖರೀದಿ ಮಾಡಬೇಕಾಗಿದೆ.

ಬೆಂಗಳೂರು: ಮದ್ಯ ಮಾರಾಟ ಆರಂಭವಾದ ಖುಷಿಯಲ್ಲಿದ್ದ ಮದ್ಯಪ್ರಿಯರು ಈ ಹಿಂದಿಗಿಂತ ಹೆಚ್ಚಿನ ಬೆಲೆ ನೀಡಿ ಖರೀದಿ ಮಾಡಬೇಕಾಗಿದೆ.
ಲಾಕ್ ಡೌನ್ ಸಡಿಲಿಕೆಯ ವೇಳೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಸರ್ಕಾರ ನಾಳೆಯಿಂದ ಮದ್ಯ ದರ ಹೆಚ್ಚಳಕ್ಕೆ ಆದೇಶಿಸಿದೆ. ಶೇ.6 ರಷ್ಟು ದರ ಏರಿಕೆಗೆ ರಾಜ್ಯ ಅಬಕಾರಿ ಇಲಾಖೆ ತೀರ್ಮಾನಿಸಿದೆ.
ಏಪ್ರಿಲ್ 1 ರಿಂದ ಪೂರ್ವಾನ್ವಯ ಆಗುವಂತೆ ಜಾರಿ ಆದೇಶ ಹಿಂದೆಯೇ ಆಗಿದೆ. ಲಾಕ್ ಡೌನ್ ಕಾರಣಕ್ಕೆ ಅನುಷ್ಠಾನ ಆಗಿರಲಿಲ್ಲ. ನಾಳೆಯಿಂದ ಸರಬರಾಜು ಆಗುವ ಹೊಸ ಮದ್ಯಕ್ಕೆ ಹೊಸ ದರ ಅನ್ವಯ ಆಗಲಿದೆ.
ನಾಳೆಯಿಂದ ರಾಜ್ಯದಲ್ಲಿ ಮದ್ಯದ ದರ ಏರಿಕೆಯಾಗಲಿದ್ದು, ಇಂದು ಎಲ್ಲಾ ಮದ್ಯದಂಗಡಿಗಳಲ್ಲಿ ಹಳೆಯ ದರದಲ್ಲಿಯೇ ಮದ್ಯ ಮಾರಾಟವಾಗುತ್ತಿದೆ.
ಕಳೆದ ಮಾರ್ಚ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದ ಆಯವ್ಯಯದಲ್ಲಿ ವಿವಿಧ ಮದ್ಯಗಳ ಮೇಲಿನ ತೆರಿಗೆಯನ್ನು ಶೇ.6ರಷ್ಟು ಹೆಚ್ಚಳ ಮಾಡಿದ್ದರು. ಈ ದರ ಏಪ್ರಿಲ್ ಒಂದರಿಂದ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು. ಕಳೆದ ಬಜೆಟ್ ನಲ್ಲಿ ದರ ಏರಿಕೆ ಬಗ್ಗೆ ಘೋಷಣೆ ಮಾಡಲಾಗಿತ್ತಾದರೂ ಸಮರ್ಪಕವಾಗಿ ಅನುಷ್ಠಾನ ಸಾಧ್ಯವಾಗಿರಲಿಲ್ಲ.
ಲಾಕ್'ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಇದೀಗ ಮದ್ಯ ಮಾರಾಟ ಆರಂಭವಾಗಿದೆ. ಇದೀಗ ಹೆಚ್ಚಳ ಮಾಡಿದ್ದ ತೆರಿಗೆ ಇದೀಗ ಜಾರಿಗೊಳ್ಳುತ್ತಿದೆ.
ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ.6ರಷ್ಟು ಹೆಚ್ಚಿಸಿರುವುದರಿಂದ ವಿವಿಧ ಬ್ರ್ಯಾಂಡ್'ಗಳ ಮದ್ಯದ ಪ್ರತಿ 180 ಎಂಎಲ್ ಮೇಲಿನ ದರವು ಕನಿಷ್ಟ ರೂ.3 ರಿಂದ ರೂ.30ರವರೆಗೂ ಹೆಚ್ಚಳವಾಗಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


