ಜುಬಿಲಿಯೆಂಟ್ ನ ಓರ್ವ ಕಾರ್ಮಿಕನ ವರದಿ ಮೇಲೆ ಎಲ್ಲರ ಕಣ್ಣು!
ಜುಬಿಲಿಯೆಂಟ್ ಫ್ಯಾಕ್ಟರಿಯಲ್ಲಿದ್ದ 36 ಜನ ಕಾರ್ಮಿಕರನ್ನು ಪತ್ತೆ ಹಚ್ಚಿ ಚಾಮರಾಜನಗರದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿದೆ.

ನಂಜನಗೂಡು: ಜುಬಿಲಿಯೆಂಟ್ ಫ್ಯಾಕ್ಟರಿಯಲ್ಲಿದ್ದ 36 ಜನ ಕಾರ್ಮಿಕರನ್ನು ಪತ್ತೆ ಹಚ್ಚಿ ಚಾಮರಾಜನಗರದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿದೆ.
ಚಾಮರಾಜನಗರ: ಜುಬಿಲಿಯೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರದ 36 ಮಂದಿಯನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ ಕ್ವಾರೆಂಟೈನ್ನಲ್ಲಿಟ್ಟಿದೆ.ಓರ್ವ ಕಾರ್ಮಿಕನ ವರದಿ ಮೇಲೆ ಎಲ್ಲರ ಕಣ್ಣು!ಈ ಕುರಿತು ಡಿಸಿ ಡಾ. ಎಂ.ಆರ್.ರವಿ ಮಾತನಾಡಿ, ನಂಜನಗೂಡು ಜುಬಿಲಿಯೆಂಟ್ ಫ್ಯಾಕ್ಟರಿಯಲ್ಲಿದ್ದ 36 ಜನ ಕಾರ್ಮಿಕರನ್ನು ಪತ್ತೆ ಹಚ್ಚಿ ನಗರದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿದೆ. ಜುಬಿಲಿಯೆಂಟ್ ನೌಕರರಲ್ಲಿ ರೋಗದ ಲಕ್ಷಣಗಳಿಲ್ಲ. ಆದರೂ ಮುಂಜಾಗ್ರತೆ ವಹಿಸಲಾಗಿದೆ.
ಇದುವರಗೆ ಎಂಟು ಜನರ ರಕ್ತದ ಮಾದರಿ, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ, ಒಂದು ರಿಜೆಕ್ಟ್ ಆಗಿದೆ. ಉಳಿದ ಏಳರಲ್ಲಿ ಆರು ನೆಗೆಟಿವ್ ಬಂದಿದೆ. ಒಂದು ವರದಿ ಬರಬೇಕಿದೆ ಎಂದು ಮಾಹಿತಿ ನೀಡಿದರು. ಜುಬಿಲಿಯೆಂಟ್ ನೌಕರನ ಪರೀಕ್ಷೆ ವರದಿ ಬರಬೇಕಿದ್ದು, ಅದು ಪ್ರಮುಖವಾಗಿದೆ. ಜಿಲ್ಲೆಯಲ್ಲಿ ಗುರುತಿಸಿದ್ದ 81 ಜನರಲ್ಲಿ ಯಾರೂ ಕೂಡ ಪ್ರೈಮರಿ ಕಾಂಟ್ಯಾಕ್ಟ್ನಲ್ಲಿ ಇರಲಿಲ್ಲ. ಜುಬಿಲಿಯೆಂಟ್ ನೌಕರ ಓರ್ವನನ್ನ ಪ್ರೈಮರಿ ಕಾಂಟ್ಯಾಕ್ಟ್ ಎಂದು ಪರಿಗಣಿಸಿ ಆತನನ್ನು ಐಸೋಲೇಷನ್ ವಾರ್ಡ್ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


