ಕೋವಿದ್-19: ವ್ಯವಹಾರ ನಷ್ಟಕ್ಕೆ ಹೆದರಿ ಬೆಂಗಳೂರಿನಲ್ಲಿ ಆಟೋಚಾಲಕ ಆತ್ಮಹತ್ಯೆ
ಕೊರೋನಾ ವೈರಸ್ ಪರಿಣಾಮ ಹೆಚ್ಚಾಗಿ ದಿನಗೂಲಿ ನೌಕರರು ಮತ್ತು ಕಡಿಮೆ ಆದಾಯ ಹೊಂದಿರುವ ಜನರೆ ಮೇಲೆ ಹೆಚ್ಚಾಗುತ್ತಿದೆ. ಕಳೆದ 3 ವಾರಗಳಿಂದ ಸರಿಯಾದ ವ್ಯಾಪಾರ ಇಲ್ಲದ ಕಾರಣ ಮಾರ್ಚ 19 ರದು ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರು: ಕೊರೋನಾ ವೈರಸ್ ಪರಿಣಾಮ ಹೆಚ್ಚಾಗಿ ದಿನಗೂಲಿ ನೌಕರರು ಮತ್ತು ಕಡಿಮೆ ಆದಾಯ ಹೊಂದಿರುವ ಜನರೆ ಮೇಲೆ ಹೆಚ್ಚಾಗುತ್ತಿದೆ. ಕಳೆದ 3 ವಾರಗಳಿಂದ ಸರಿಯಾದ ವ್ಯಾಪಾರ ಇಲ್ಲದ ಕಾರಣ ಮಾರ್ಚ 19 ರದು ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆರ್ ಟಿ ನಗರ ನಿವಾಸಿ 24 ವರ್ಷದ ಶಿವಕುಮಾರ್ ಮಾರ್ಚ 19ರ ರಾತ್ರಿ 8.30 ರಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ 2 ವಾರಗಳಿಂದ ಆತನ ಆಟೋದಲ್ಲಿ ಪ್ರಯಾಣಿಸಲು ಯಾವುದೇ ಪ್ರಯಾಣಿಕರು ಇರಲಿಲ್ಲ, ದುಡಿದು ತಂದು ಹಣ ಕೊಡಲಿಲ್ಲ ಎಂದು ಕುಟುಂಬಸ್ಥರು ನಿಂದಿಸಿದ್ದರು.
ಶಿವಕುಮಾರ್ ಹಿರಿಯ ಸಹೋದರಿ ಅಕ್ಕಪಕ್ಕದ ಮನೆಗಳಲ್ಲಿ ಕೆಲಸ ಮಾಡಿ ಸಂಸಾರ ನಿರ್ವಹಿಸುತ್ತಿದ್ದರು. ಆದರೆ ಶಿವಕುಮಾರ್ ಹೊರಗೆ ಹೋಗದೇ ಮನೆಯಲ್ಲಿದ್ದು ದುಡಿಯದೇ ಕುಳಿತಿದ್ದಾನೆಂದು ಅವನ ಅಕ್ಕ ಬೈಯ್ದಿದ್ದರು. ಹೀಗಾಗಿ ಶಿವಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆತನ ಸ್ನೇಹಿತರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


