ರಾಜ್ಯ

ಇಳಿ ವಯಸ್ಸಿನಲ್ಲೂ ಕೊರೋನಾ ಗೆದ್ದು ರೋಗಿಗಳಿಗೆ ಭರವಸೆಯ ಆಶಾಕಿರಣವಾದ 99ರ ವೃದ್ಧೆ!

ಕೊರೋನಾ ಸೋಂಕಿಗೆ ವಯಸ್ಕರು, ಮಧ್ಯ ವಯಸ್ಕರು ಮತ್ತು ಯುವ ಸಮೂಹ ಬಲಿಯಾಗುತ್ತಿರುವಾಗಲೇ, ಅಚ್ಚರಿಯ ರೀತಿಯಲ್ಲಿ 99 ವರ್ಷದ ಮಹಿಳಾ ಸೋಂಕಿರೊಬ್ಬರು ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಳಿ ವಯಸ್ಸಿನಲ್ಲೂ ಕೊರೋನಾ ಗೆದ್ದು ರೋಗಿಗಳಿಗೆ ಭರವಸೆಯ ಆಶಾಕಿರಣವಾದ 99ರ ವೃದ್ಧೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಕೊರೋನಾ ಸೋಂಕಿಗೆ ವಯಸ್ಕರು, ಮಧ್ಯ ವಯಸ್ಕರು ಮತ್ತು ಯುವ ಸಮೂಹ ಬಲಿಯಾಗುತ್ತಿರುವಾಗಲೇ, ಅಚ್ಚರಿಯ ರೀತಿಯಲ್ಲಿ 99 ವರ್ಷದ ಮಹಿಳಾ ಸೋಂಕಿರೊಬ್ಬರು ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಷ್ಟು ಹಿರಿಯ ವಯಸ್ಕರೊಬ್ಬರು ಕೊರೋನಾದಿಂದ ಚೇತರಿಸಿಕೊಂಡ ಕರ್ನಾಟಕದ ಮೊಲದ ಪ್ರಕರಣದ ಇದು ಎಂದು ಹೇಳಲಾಗುತ್ತಿದೆ. 

ಕೆಲ ದಿನಗಳ ಹಿಂದಷ್ಟೇ ಈ ವೃದ್ಧ ಮಹಿಳೆಯ ಪುತ್ರ ಮತ್ತು ಸೊಸೆಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೃದ್ಧ ಮಹಿಳೆಯನ್ನೂ ತಪಾಸಣೆಗೆ ಒಳಪಡಿಸಿದ ವೇಳೆ ಅವರಲ್ಲೂ ಸಣ್ಣ ಪ್ರಮಾಣದ ಸೋಂಕು ಕಾಣಿಸಿಕೊಂಡಿತ್ತು. 

ಹೀಗಾಗಿ ಅವರನ್ನೂ ಜೂ.17ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚಿನ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ, ಚಿಕಿತ್ಸೆ ಫಲಪ್ರದವಾಗಿದ್ದು, ವೃದ್ಧ ಮಹಿಳೆ ಸಂಪೂರ್ಣ ಚೇತರಿಸಿಕೊಂಡು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದೀಗ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೂ ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ. ಕಾಲಕಾಲಕ್ಕೆ ಅವರ ಆರೋಗ್ಯ ಪರೀಕ್ಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದೇ ವೇಳೆ ಆಸ್ಪತ್ರೆಯಲ್ಲಿ ಇದ್ದ ಅವಧಿಯಲ್ಲಿ ವೃದ್ಧ ಮಹಿಳೆ ಸಿಬ್ಬಂದಿಗೆ ಯಾವುದೇ ತೊಂದರೆ ಕೊಡದೆ, ಉತ್ತಮ ರೀತಿಯಲ್ಲಿ ಸಹಕಾರಿಸಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಆಶ್ಚರ್ಯಕರ ವಿಚಾರವೆಂದರೆ ಸೋಂಕಿಗೊಳಗಾಗಿದ್ದ ಅವರ ಪುತ್ರ ಹಾಗೂ ಸೊಸೆ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.