ಗುಣಮುಖ

ಸಾವಿನ ಮನೆ ಕದ ತಟ್ಟಿ ವಾಪಸ್ಸಾಗಿದ್ದೇನೆ: ರಂಗಭೂಮಿ ಕಲಾವಿದ ಪ್ರಕಾಶ್ ಬಾದರದಿನ್ನಿ
ಕೊರೋನಾ ಸೋಂಕಿಗೊಳಗಾಗಿದ್ದ ನಾನು ಸಾವಿನ ಮನೆಯ ಬಾಗಿಲು ತಟ್ಟಿ ಮರಳಿ ಬಂದಿದ್ದೇನೆಂದು ತಮ್ಮ ಅನುಭವವನ್ನು ರಂಗಭೂಮಿ ಕಲಾವಿದ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಅಶೋಕ ಬಾದರದಿನ್ನಿ ಅವರ ಪುತ್ರ ಪ್ರಕಾಶ್ ಬಾದರದಿನ್ನಿಯವರು ಹೇಳಿದ್ದಾರೆ.

ಕೇರಳ: ದೇಶದ ಮೊದಲ 'ಮಂಕಿಪಾಕ್ಸ್' ರೋಗಿ ಗುಣಮುಖ
ದೇಶದಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ಕಾಯಿಲೆ ಕಾಣಿಸಿಕೊಂಡು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ವ್ಯಕ್ತಿಯೋರ್ವರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ತಿಳಿಸಿದ್ದಾರೆ.

ನಟ ಕಮಲ್ ಹಾಸನ್ ಕೋವಿಡ್-19 ನಿಂದ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಎರಡು ವಾರಗಳ ಕೋವಿಡ್-19 ಚಿಕಿತ್ಸೆ ಬಳಿಕ ಗುಣಮುಖರಾಗಿರುವ ನಟ ಕಮಲ್ ಹಾಸನ್ ಶನಿವಾರ ಶ್ರೀ ರಾಮಚಂದ್ರ ವೈದ್ಯಕೀಯ ಸೆಂಟರ್ ನಿಂದ ಡಿಸ್ಚಾರ್ಜ್ ಆದರು. ಕಮಲ್ ಹಾಸನ್ ಆಸ್ಪತ್ರೆಯಿಂದ ಹೊರಗಡೆ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್ ಆಗಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿರ: ಏಮ್ಸ್ ವೈದ್ಯರು
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ದೆಹಲಿ ಏಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕೊರೊನಾ ಮಣಿಸಿದ 116 ವರ್ಷದ ಮುದುಕಿ: ಮೂರು ವಾರ ಐಸಿಯುನಲ್ಲಿ ಹೋರಾಟ!
ಕೊರೊನಾ ಸೋಂಕಿಗೆ ತುತ್ತಾಗಿ ಭಯದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಮಂದಿಗೆ ಈ ವೃದ್ಧ ಮಹಿಳೆಯ ಜೀವನಸ್ಫೂರ್ತಿ ಪ್ರೇರಣೆಯಾಗಬಲ್ಲುದು.

ಕೋವಿಡ್ ನಿಂದ ಗುಣಮುಖ: ನಂತರ ಕಾಡುವ ನಿಶ್ಶಕ್ತಿ, ಆಯಾಸ, ಒಣ ಕೆಮ್ಮು ನಿರ್ವಹಣೆ ಹೇಗೆ?
ನೀವು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ಆಸ್ಪತ್ರೆಯಿಂದ ಮನೆಗೆ ಮರಳಿದ್ದರೆ, ನಿಮ್ಮ ಎಂದಿನ ಜೀವನಕ್ಕೆ ಮರಳುವವರೆಗೆ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುವುದು ಸಾಮಾನ್ಯ. ಸೋಂಕಿನ ಗಂಭೀರತೆ, ಪ್ರಮಾಣದ ಅನುಸಾರ ಒಬ್ಬ ವ್ಯಕ್ತಿ ಒಂದು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಸಮಯದಲ್ಲಿ ಚೇತರಿಸಿಕೊಳ್ಳುತ್ತಿರುತ್ತಾರೆ.

ಕೋವಿಡ್-19: ರಾಜ್ಯದಲ್ಲಿ ಒಂದೇ ದಿನ 58,000 ಮಂದಿ ಗುಣಮುಖ, ಚೇತರಿಕೆಯಲ್ಲಿ ದೇಶದಲ್ಲೇ ಅಗ್ರಸ್ಥಾನ ಪಡೆದ ಕರ್ನಾಟಕ
ಒಂದು ತಿಂಗಳಿಂದ ರಾಜ್ಯದಲ್ಲಿ ಆತಂಕ ಹೆಚ್ಚಿಸುತ್ತಿದ್ದ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಸ್ವಲ್ಪ ಇಳಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 58,295 ಮಂದಿ ಗುಣಮುಖರಾಗಿದ್ದು, ಚೇತರಿಕೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಕೋವಿಡ್-19: ರಾಜ್ಯದಲ್ಲಿ ಇಂದು 58,395 ಜನರು ಗುಣಮುಖ, ಒಂದೇ ದಿನ ಅತಿ ಹೆಚ್ಚು ಚೇತರಿಕೆ!
ರಾಜ್ಯದ ಜನತೆಗೊಂದು ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ. ಇಂದು ಒಂದೇ ದಿನ 58,395 ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದು ಈವರೆಗೂ ಒಂದೇ ದಿನದಲ್ಲಿ ಚೇತರಿಕೆಗೊಂಡ ಅತೀ ಹೆಚ್ಚು ಸಂಖ್ಯೆಯಾಗಿದೆ.

ಕೋವಿಡ್-19: ರಾಜ್ಯದಲ್ಲಿ ಒಂದೇ ದಿನ 35,879 ಮಂದಿ ಡಿಸ್ಚಾರ್ಜ್
ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ ಇತ್ತ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ.

