ಕೊರೊನಾ ಮಣಿಸಿದ 116 ವರ್ಷದ ಮುದುಕಿ: ಮೂರು ವಾರ ಐಸಿಯುನಲ್ಲಿ ಹೋರಾಟ!
ಕೊರೊನಾ ಸೋಂಕಿಗೆ ತುತ್ತಾಗಿ ಭಯದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಮಂದಿಗೆ ಈ ವೃದ್ಧ ಮಹಿಳೆಯ ಜೀವನಸ್ಫೂರ್ತಿ ಪ್ರೇರಣೆಯಾಗಬಲ್ಲುದು.

ಅಂಕಾರ: ಅಚ್ಚರಿಯ ಘಟನೆಯೊಂದರಲ್ಲಿ 116 ವರ್ಷದ ವೃದ್ಧ ಮಹಿಳೆಯೋರ್ವಳು ಕೊರೊನಾದಿಂದ ಗುಣಮುಖರಾಗಿರುವ ಸ್ಪೂರ್ತಿದಾಯಕ ಘಟನೆ ಟರ್ಕಿ ದೇಶದಲ್ಲಿ ನಡೆದಿದೆ. ಆಕೆಯನ್ನು ಸದ್ಯ ಐಸಿಯುನಿಂದ ನಾರ್ಮಲ್ ವಾರ್ಡಿಗೆ ಸ್ಥಳಾತರಿಸಲಾಗಿದ್ದು, ಆಕೆಯ ಜೊತೆ ಮಗ ಇದ್ದಾನೆ.
ಇದನ್ನೂ ಓದಿ: ಮೂಗಿನಿಂದ ಟೈಪಿಂಗ್ ಮಾಡಿ 9 ಗಿನ್ನೆಸ್ ದಾಖಲೆ ನಿರ್ಮಿಸಿದ ಜೆಎನ್ಯು ಕಂಪ್ಯೂಟರ್ ಆಪರೇಟರ್ ವಿನೋದ್ ಕುಮಾರ್ ಚೌಧರಿ!
ಆಯ್ಸೆ ಕರಾಟೆ ಎಂಬ ಹೆಸರಿನ ವೃದ್ಧ ಮಹಿಳೆ ನಿಜಕ್ಕೂ ಕೊರೊನಾ ಜೊತೆ ಕರಾಟೆ ಮಾಡಿ ಜೀವ ಉಳಿಸಿಕೊಂಡಿರುವ ಕಥೆ ಹಲವರಿಗೆ ಸ್ಫೂರ್ತಿ. ಕೊರೊನಾ ಸೋಂಕಿಗೆ ತುತ್ತಾಗಿ ಭಯದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಮಂದಿಗೆ ಈ ವೃದ್ಧ ಮಹಿಳೆಯ ಜೀವನ ಪ್ರೇರಣೆಯಾಗಬಲ್ಲುದು.
ಈ ಹಿಂದೆ 117 ವರ್ಷದ ಫ್ರೆಂಚ್ ಕ್ರೈಸ್ತ ಸನ್ಯಾಸಿನಿ ಆಂಡ್ರೆ ಎಂಬುವವರು ಕೊರೊನಾದಿಂದ ಗುಣಮುಖರಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಕೊರೊನಾದಿಂದ ಗುಣಮುಖರಾದ ವಿಶ್ವದ ಅತಿ ಹಿರಿಯ ಮಹಿಳೆ ಎನ್ನುವ ಕೀರ್ತಿಗೆ ಅವರು ಪಾತ್ರರಾಗಿದ್ದರು.
ಇದೀಗ ಕೊರೊನಾದಿಂದ ಗುಣಮುಖರಾದ ವಿಶ್ವದ 2ನೇ ಹಿರಿಯ ಮಹಿಳೆ ಎನ್ನುವ ಕೀರ್ತಿಗೆ ಆಯ್ಸೆ ಕರಾಟೆ ಪಾತ್ರರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


